ವಿಜಯಪುರ: ಹೊಸಕೋಟೆ ಚಿಕ್ಕ ಅಮಾನಿಕೆರೆ ಮಲಿನವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿ ಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿ ಕರು, ಪರಿಸರ ಪ್ರೇಮಿಗಳು ದೂರಿದ್ದಾರೆ.
ಹೊಸಕೋಟೆ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ನಗರಸಭೆಯಿಂದ ಹರಿದು ಬರುವ ಚರಂಡಿ ನೀರು ಚಿಕ್ಕ ಅಮಾನಿಕೆರೆಗೆ ಸೇರುತ್ತದೆ. ಅದಲ್ಲದೆ ನಗರದಲ್ಲಿನಕಸ, ಶೌಚಾಲಯ ನೀರು, ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಇನ್ನಿತರೆ ಮನೆಯ ಕಸಗಳನ್ನು ಚರಂಡಿ ಮತ್ತು ಮೋರಿಗಳಲ್ಲಿ ಎಸೆಯ ಲಾಗುತ್ತಿದೆ. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಸತತವಾಗಿ ಬಿದ್ದ ಮಳೆಯಿಂದ ಎಲ್ಲವೂ ಚಿಕ್ಕ ಅಮಾನಿಕೆರೆಗೆ ಸೇರುತ್ತಿದೆ.
ತ್ಯಾಜ್ಯದ ರಾಶಿ:ಪ್ಲಾಸ್ಟಿಕ್‌ಮತ್ತು ಶೌಚಾಲಯದಿಂದ ಬರುವ ಕೊಳಕು ನೀರಿನಿಂದ ಕೆರೆ ನೀರು ಮಲಿನ ವಾಗಿದೆ. ಹೆಸರಿಗಷ್ಟೇ ಪ್ಲಾಸ್ಟಿಕ್ ನಿಷೇಧ ಎಂದು ಹೇಳುವ ನಗರಸಭೆ ಅಧಿಕಾರಿಗಳು ಒಮ್ಮೆ ಚಿಕ್ಕ ಮಾನಿಕೆರೆಯತ್ತ ಕಣ್ಣು ಹಾಯಿಸಿದರೆ ಅವರಿಗೆ ಪರಿಸ್ಥಿತಿ ಅರ್ಥವಾಗುತ್ತದೆ. ದಿನ ನಿತ್ಯ ಕೆರೆಯಲ್ಲಿ ನೂರಾರು ಹಸುಗಳು ಮೇಯಲು ಬರುತ್ತವೆ. ಹುಲ್ಲಿನ ಜತೆಗೆ ಪ್ಲಾಸ್ಟಿಕ್ ಟೀ, ಲೋಟ ತಿಂದು ಹಸುಗಳು ರೋಗದಿಂದ ಬಳಲುತ್ತಿವೆ.
ಇದಲ್ಲದೆ ಕೆರೆ ಸುತ್ತಮುತ್ತ ರೈತರು ಕೆರೆ ಅಂಗಳದಲ್ಲಿ ಕೊಳವೆ ಬಾವಿ ಕೊರೆಸಿ ಗುಲಾಬಿ ಹೂ, ಇನ್ನಿತರೆ ತರಕಾರಿ ಬೆಳೆಯುತ್ತಿದ್ದಾರೆ. ಕನಿಷ್ಠ 25 ಭಾಗ ಕೆರೆ ಒತ್ತುವರಿಯಾಗಿದ್ದರೂ ತಾಲೂಕುಆಡಳಿತಅಥವಾ ನಗರಸಭೆ ಅಧಿಕಾರಿಗಳು ಕಂಡೂ ಕಾಣದಂತೆ ಇರುವುದು ಖಂಡನೀಯ. ಇನ್ನಾದರೂ ತಾಲೂಕು ಆಡಳಿತ ಕೆರೆ ಸಂರಕ್ಷಣೆಗೆ ಮುಂದಾಗಬೇಕು. ಇಲ್ಲವಾದರೆ ಪೂರ್ಣ ಪ್ರಮಾಣದಲ್ಲಿ ಕೆರೆಯನ್ನೇ ಒತ್ತುವರಿ ಮಾಡುವ ಕಾಲ ದೂರವಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನಾವು ಚಿಕ್ಕವಯಸ್ಸಿನಿಂದ ಚಿಕ್ಕ ಅಮಾನಿಕೆರೆಯನ್ನು ನೋಡಿದ್ದೇವೆ. ಹಿಂದೆ ಈ ಕೆರೆಯಲ್ಲಿ ನೀರನ್ನುಕುಡಿಯುತ್ತಿದ್ದೆವು. ಈಗ ನಗರದಲ್ಲಿನ ಚರಂಡಿ ನೀರಿನಿಂದಕೆರೆ ಕಲುಷಿತಗೊಂಡಿದೆ. ಪ್ರಾಣಿಗಳುಕುಡಿಯಲೂ ಈ ನೀರುಯೋಗ್ಯವಾಗಿಲ್ಲ. ಇನ್ನುಕೆರೆ ಒತ್ತುವರಿ ಆಗಿದ್ದು ಈ ಕೂಡಲೇ ತಾಲೂಕು ಆಡಳಿತ ತೆರವುಗೊಳಿಸಬೇಕು
. ● ಎನ್.ಎಂ.ಆಂಜಿನಪ್ಪ, ರಾಜ್ಯ ರೈತ ಸಂಘದ ಮಾಜಿ ಅಧ್ಯಕ್ಷರು
ನಾನುಕಳೆದ 5 ವರ್ಷದಿಂದಕೆರೆಯಲ್ಲಿ ಬೆಳೆದಿದ್ದ ಸೀಮೆ ಜಾಲಿ ಮರಗಳನ್ನು ಜೆಸಿಬಿ ಸಹಾಯದಿಂದ ತೆಗೆದು, ಲಕ್ಷಾಂತರ ರೂ.ಖರ್ಚು ಮಾಡಿ ಸ್ವತ್ಛ ಮಾಡಿದ್ದೇನೆ. ಅದರಲ್ಲೂ ಮೀನು ಸಾಕಲು ಗುತ್ತಿಗೆ ಪಡೆದಿದ್ದೇನೆ.ಕೆರೆಯಲ್ಲಿ ವಿಷಕಾರಿ ನೀರು ಸೇರುತ್ತಿದ್ದು, ಮೀನುಗಳು ಸಾಯುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೇ ಗಮನ ಹರಿಸಬೇಕು.
● ಕೋಟೆ ಚಿನ್ನಣ್ಣ, ಮೀನು ಸಹಕಾರ ಸಂಘದ ಅಧ್ಯಕ್ಷರು, ಮೀನು ಸಾಗಾಣಿಕೆದಾರ