Advertisement
ಹೌದು ಸಮುದ್ರದ ನೆಂಟಸ್ಥನವಿದ್ದರೂ..ಉಪ್ಪಿಗೆ ಬಡತನ ಎಂಬಂತಾಗಿದೆ ಹೊಸನಗರ ತಾಲೂಕಿನ ಕುಡಿಯುವ ನೀರಿನ ಪರಿಸ್ಥಿತಿ. ಕ್ಷೇತ್ರವಾರು ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರಕ್ಕೆ ಹರಿದು ಹಂಚಿ ಹೋಗಿರುವ ಹೊಸನಗರ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕಳೆದವರ್ಷ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಅತಿಹೆಚ್ಚು ಮಳೆ ಬೀಳುವ ಪ್ರದೇಶವಾದ ಹುಲಿಕಲ್ ನಲ್ಲೂ ನೀರಿಗಾಗಿ ಜನ ಪರದಾಡಿದ್ದರು.
ಸುಳುಗೋಡು, ಮೂಡುಗೊಪ್ಪ, ಖೈರಗುಂದ, ರಿಪ್ಪನ್ ಪೇಟೆ ಗ್ರಾಪಂನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ಖಾಸಗಿ ಬೋರ್‌ವೆಲ್ ನೀರನ್ನು ಬಳಸಿಕೊಳ್ಳುವುದರ ಜೊತೆಗೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿತ್ತು.
Related Articles
Advertisement
ತಾಲೂಕಿನ ಬಹುಪಾಲು ಆಕ್ರಮಿಸಿಕೊಂಡಿರುವ ಲಿಂಗನಮಕ್ಕಿ ಜಲಾಶಯದ ಹಿನ್ನೀರು ಕಡಿಮೆಯಾಗುತ್ತಿದ್ದು ಬಾವಿಗಳು ಬರಿದಾಗುತ್ತಿವೆ. ಕಳೆದ ಬಾರಿ ನಿಯಮಿತವಾಗಿ ಮಳೆ ಸುರಿಯದೇ ಒಂದೇ ಸಮನೇ ಸುರಿದಿದ್ದು ಈ ಬಾರಿ ನೀರಿನ ಸಮಸ್ಯೆ ತಂದೊಡ್ಡಲಿದೆ ಎಂಬುದು ತಜ್ಞರ ಅಭಿಪ್ರಾಯ.
ರೂ.1 ಕೋಟಿ ವೆಚ್ಚದಲ್ಲಿ ತುರ್ತು ಕಾಮಗಾರಿ: ಕಳೆದ ವರ್ಷ ನೀರಿನ ಅಭಾವ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಆಯ್ದ ಕಡೆ ತುರ್ತು ಕಾಮಗಾರಿಗಳನ್ನು ಕೈಗೊಂಡಿದೆ. ಸುಳುಗೋಡು, ಖೈರಗುಂದ, ಕರಿಮನೆ, ಮೇಲಿನಬೆಸಿಗೆ, ಅಂಡಗದೋದೂರು, ಮೂಡುಗೊಪ್ಪ, ಸಂಪೇಕಟ್ಟೆ, ನಿಟ್ಟೂರು, ಹೆದ್ದಾರಿಪುರ, ಮಾರುತಿಪುರ, ಬಾಳೂರು, ರಿಪ್ಪನಪೇಟೆ, ಕೆಂಚನಾಲ, ಅಮೃತ, ಚಿಕ್ಕಜೇನಿ, ಹರತಾಳು, ಎಂ. ಗುಡ್ಡೇಕೊಪ್ಪ, ಹರತಾಳು, ಹರಿದ್ರಾವತಿ ಗ್ರಾಪಂನ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ರೂ1 ಕೋಟಿ ವೆಚ್ಚದಲ್ಲಿ ತುರ್ತು ಕಾಮಗಾರಿಯನ್ನು ನಿರ್ವಹಿಸಲಾಗಿದೆ. ಪೈಪ್‌ಲೈನ್ ವಿಸ್ತರಣೆ ಮತ್ತು 22 ಬೋರ್‌ವೆಲ್ ಕೊರೆಸಲಾಗಿದ್ದು ಅದರಲ್ಲಿ ನಾಲ್ಕು ಕೊಳವೆ ಬಾವಿಗಳು ವಿಫಲವಾಗಿವೆ. ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ: ಕಳೆದ ಬಾರಿಯ ನೀರಿನ ಸಮಸ್ಯೆಯಿಂದ ಎಚ್ಚೆತ್ತುಕೊಂಡಿರುವ ತಾಲೂಕು ಆಡಳಿತ ಈಗಾಗಲೇ ತಹಶೀಲ್ದಾರ್ ವಿ.ಎಸ್. ರಾಜೀವ್ ಅಧ್ಯಕ್ಷತೆಯಲ್ಲಿ ಒಂದು ಸಭೆ ನಡೆದಿದೆ. ಸಭೆಯಲ್ಲಿ ತಾಲೂಕಿನಲ್ಲಿರುವ ಕೊಳವೆ ಬಾವಿ ಸಂಖ್ಯೆ, ತುರ್ತು ಕಾಮಗಾರಿ ನಿರ್ವಹಣೆ, ನೀರಿನ ಅಭಾವ ಕಂಡುಬರುವ ಸಂಭಾವ್ಯ ಗ್ರಾಮಗಳನ್ನು ಪಟ್ಟಿ ಮಾಡಿ, ಸೂಕ್ತ ವರದಿ ನೀಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲೂಕಿನ ನೀರಿನ ಮೂಲಗಳು
ಶರಾವತಿ, ಮಾವಿನಹೊಳೆ, ಕುಮುದ್ವತಿ, ಚಕ್ರಾ, ಸಾವೇಹಕ್ಲು, ವಾರಾಹಿ, ಸೇರಿದಂತೆ ಶರಾವತಿಯ ಉಪನದಿ, ಹೊಳೆಗಳನ್ನು ಹೊಂದಿರುವ ಹೊಸನಗರ ತಾಲೂಕಿನಲ್ಲಿ ಮಾಣಿ, ಚಕ್ರಾ, ಸಾವೇಹಕ್ಲು, ಖೈರಗುಂದ, ಪಿಕಪ್ ಸೇರಿದಂತೆ 5 ಜಲಾಶಯಗಳಿವೆ. ಆದರೆ ಇದು ಕೇವಲ ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತದೆ. ಆದರೆ ಜಲಾಶಯಗಳ ಹಿನ್ನೀರು ವ್ಯಾಪ್ತಿಯಲ್ಲಿ ನೀರು ಸಂಗ್ರಹವಿರುವ ಭಾಗದಲ್ಲಿ ಅಂತರ್ಜಲ ಹಿಡಿದಿಟ್ಟುಕೊಳ್ಳಬಹುದು. ಆದರೆ ಈಗಾಗಲೇ ಹಿನ್ನೀರು ಪ್ರದೇಶದಲ್ಲಿ ನೀರು ಖಾಲಿಯಾಗಿ ಬರಡಾಗಿದೆ. ಇನ್ನು ಸುಮಾರು 675 ಕೊಳವೆ ಬಾವಿಗಳಿದ್ದು, 900 ಕೆರೆಗಳು, 1700ಕ್ಕೂ ಹೆಚ್ಚು ಕೃಷಿಬಾವಿಗಳಿದ್ದು, 8217 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ. ಕುಮುದಾ ನಗರ