ಹೊಸನಗರ: ಕಠಿಣ ಪರಿಶ್ರಮವಿದ್ದರೆ ಯಾವುದೂ ಅಸಾಧ್ಯವಲ್ಲ. ಇದಕ್ಕೆ ಪೂರಕ ಎಂಬಂತೆ ತನ್ನ ಕಿರಿಯ ವಯಸ್ಸಿನಲ್ಲೇ ಅಭೂತಪೂರ್ವ ಸಾಧನೆ ಮಾಡಿದ ಸನತ್ ಎಂಬ ಪೋರ ಎಲ್ಲರ ಗಮನ ಸೆಳೆದಿದ್ದಾನೆ.
Advertisement
ಹೌದು, ತಾಲೂಕಿನ ಬಿದನೂರು ನಗರದ 14 ವರ್ಷದ ಬಾಲಕ ಸನತ್ 17 ವರ್ಷದ ವಯೋಮಾನದ ಒಳಗಿನ ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಇಡೀ ಮಲೆನಾಡಿಗೆ ಕೀರ್ತಿ ತಂದಿದ್ದಾನೆ.
Related Articles
Advertisement
ಪ್ರೋ ಕಬಡ್ಡಿ ಆಟಗಾರನಾಗುವಾಸೆ: ಇಂದು ಕ್ರಿಕೆಟ್‌ನಂತೆ ಪ್ರೋ ಕಬಡ್ಡಿ ಕೂಡ ಗಮನ ಸೆಳೆಯುತ್ತಿದ್ದು, ಎಲ್ಲರ ಆಕರ್ಷಣೆಗೆ ಕಾರಣವಾಗುತ್ತಿದೆ. ಪ್ರೋ ಕಬಡ್ಡಿ ಆಟಗಾರನಾಗುವ ಮೂಲಕ ನಾಡಿಗೆ ಕೀರ್ತಿ ತರುವ ಮಹದಾಸೆಯನ್ನು ಸನತ್ ಹೊತ್ತಿದ್ದಾನೆ. ಅಲ್ಲದೆ ತನ್ನ ಕ್ರೀಡಾ ಬೆಳವಣಿಗೆಗೆ ಆಸರೆಯಾದ ತಂದೆ- ತಾಯಿ, ಶ್ರೀರಾಮಕೃಷ್ಣ ವಿದ್ಯಾಲಯ, ದೈಹಿಕ ಶಿಕ್ಷಕ ನಾಗರಾಜ್ ಮತ್ತು ತರಬೇತುದಾರ ಅಫ್ರಾಜ್‌ರ ಕೊಡುಗೆಯನ್ನು ಸ್ಮರಿಸುತ್ತಾನೆ.
ಒಟ್ಟಾರೆ ತನ್ನ ಕಿರಿಯ ವಯಸ್ಸಿನಲ್ಲೇ ಕಬಡ್ಡಿಯ ಉತ್ತಮ ಪ್ರತಿಭೆಯಾಗಿ ಹೊರಹೊಮ್ಮಿರುವ ಸನತ್, ಮುಂದೆ ಕರುನಾಡನ್ನು ಮಾತ್ರವಲ್ಲ, ಈ ದೇಶವನ್ನು ಮತ್ತೂಮ್ಮೆ ಪ್ರತಿನಿಧಿಸಲಿ. ಅಲ್ಲದೆ ಪ್ರೋ ಕಬಡ್ಡಿ ಆಟಗಾರನಾಗುವ ಆತನ ಆಶಯ ಈಡೇರಲಿ ಎಂಬುದು ಎಲ್ಲರ ಆಶಯ.
ನಮ್ಮ ಶಾಲೆಯಲ್ಲಿ ಉತ್ತಮ ಕ್ರೀಡಾ ವಿದ್ಯಾರ್ಥಿಗಳಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಸನತ್ ಜೊತೆ ಕಿರಣ್ ಮತ್ತು ವಿಜೇತ್ ಕೂಡ ಭಾಗವಹಿಸಿದ್ದರು. ಸನತ್ ತುಂಬಾ ಪ್ರತಿಭಾವಂತ ಆತ. ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮ ಶಾಲೆಗೆ ಹೆಮ್ಮೆ.
•ದೇವರಾಜ್, ವ್ಯವಸ್ಥಾಪಕರು,
ಶ್ರೀರಾಮಕೃಷ್ಣ ವಿದ್ಯಾಶಾಲೆ
•ದೇವರಾಜ್, ವ್ಯವಸ್ಥಾಪಕರು,
ಶ್ರೀರಾಮಕೃಷ್ಣ ವಿದ್ಯಾಶಾಲೆ
ತುಂಬಾ ಚಿಕ್ಕಂದಿನಲ್ಲೇ ಕಬಡ್ಡಿ ಬಗ್ಗೆ ಸನತ್ ತುಂಬಾ ಆಸಕ್ತಿ ಹೊಂದಿದ್ದ. ಓದಿನಲ್ಲೂ ಚುರುಕು ಹೊಂದಿರುವ ಆತನಿಗೆ ಕಬಡ್ಡಿ ಆಡಲು ಎಲ್ಲಾ ಸಹಕಾರ ನೀಡಲಾಯಿತು. ಚಿಕ್ಕ ವಯಸ್ಸಿನಲ್ಲೇ ಈ ಸಾಧನೆ ಮಾಡಿರುವುದು ನಮಗೆ ಹೆಮ್ಮೆ ತಂದಿದೆ. ಮುಂದಿನ ಆತನ ಸಾಧನೆಗೆ ಎಲ್ಲಾ ಸಹಕಾರ ನೀಡುತ್ತೇವೆ.
•ಎಚ್.ವೈ. ಸತೀಶ್, ಸನತ್ ತಂದೆ.
•ಎಚ್.ವೈ. ಸತೀಶ್, ಸನತ್ ತಂದೆ.