Advertisement
ಹೊಸನಗರ ಪಪಂ ಆಡಳಿತ ಮಂಡಳಿಯು ಕಳೆದ 2 ಬಾರಿಯೂ ಜೆಡಿಎಸ್ ನಡೆಸಿದೆ. ವಿಸರ್ಜಿತ ಆಡಳಿತ ಮಂಡಳಿಯಲ್ಲಿ 11 ಸದಸ್ಯರಲ್ಲಿ ಜೆಡಿಎಸ್‌ನ 6 ಹಾಗೂ ಕಾಂಗ್ರೆಸ್‌ನ 5 ಸದಸ್ಯರು ಇದ್ದರು.
Related Articles
Advertisement
ಇದರ ಪರಿಣಾಮ ಹೊಸನಗರ ಪಟ್ಟಣವು ಸ್ಥಳಾಭಾವದಿಂದ ಕಿಷ್ಕಿಂಧೆ ಆಗಿದೆ. ಈ ಕಾರಣದಿಂದಾಗಿ ಇಲ್ಲಿನ ಮತದಾರರ ಸಂಖ್ಯೆ ಕೇವಲ 4837ಕ್ಕೆ ಸ್ಥಗಿತ ಆಗಿದೆ. ಈ ವರ್ಷ ಕೇವಲ 102 ನವ ಮತದಾರರು ಸೇರ್ಪಡೆಯಾಗಿದ್ದಾರೆ.
ಅವೈಜ್ಞಾನಿಕ ವಾರ್ಡ್ ವಿಂಗಡಣೆ: ಒಟ್ಟು 11 ವಾರ್ಡ್‌ಗಳು ಇರುವ ಈ ಪಟ್ಟಣ ಪಂಚಾಯತ್‌ನ 11ನೇ ವಾರ್ಡ್‌ನಲ್ಲಿ ಅತ್ಯಧಿಕ 784 ಮತದಾರರು ಇದ್ದರೆ, 4ನೇ ವಾರ್ಡ್‌ನಲ್ಲಿ 3 ಪಟ್ಟು ಕಡಿಮೆ ಅಂದರೆ ಕೇವಲ 220 ಮತದಾರರು ಇದ್ದಾರೆ.
ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಲು ತಮಗೆ ಬೇಕಾದ ಹಾಗೆ ವಾರ್ಡ್‌ಗಳನ್ನು ಮಾಡಿದ್ದಾರೆ ಎಂಬ ದೂರು ಕೇಳಿಬಂದಿದೆ. ವಾರ್ಡ್ ಸಂಖ್ಯೆ 1, 5 ಹಾಗೂ 10ರಲ್ಲಿ ಮಾತ್ರ ಪುರುಷ ಮತದಾರರು ಹೆಚ್ಚಾಗಿದ್ದು, ಉಳಿದಂತೆ ಎಲ್ಲಾ ವಾರ್ಡ್‌ಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಅಧಿಕವಾಗಿದೆ. ಚುನಾವಣಾ ವೇಳಾಪಟ್ಟಿ: ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ ಮೇ 16, ಮೇ.17 ಪರಿಶೀಲನೆ, ಮೇ 20 ನಾಮಪತ್ರ ಹಿಂಪಡೆಯಲು ಕೊನೆಯ ದಿನ.
ಮತದಾನ: ಮೇ 29ರ ಬೆಳಗ್ಗೆ 7ರಿಂದ ಸಂಜೆ 5ರ ತನಕ, ಮತ ಎಣಿಕೆ ತಾಲೂಕು ಕೇಂದ್ರದಲ್ಲಿ ಆರಂಭವಾಗಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ನೋಟಾಗೆ ಅವಕಾಶ: ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಮೊದಲ ಬಾರಿಗೆ ಕಣದಲ್ಲಿರುವ ಯಾರೊಬ್ಬ ಅಭ್ಯರ್ಥಿಗೆ ತನ್ನ ಮತ ನೀಡಲು ಇಚ್ಛೆ ಇಲ್ಲದಿದ್ದಲ್ಲಿ ‘ನೋಟಾ’ (ಮೇಲ್ಕಂಡ ಯಾರು ಇಲ್ಲ) ಮತ ಚಲಾಯಿಸುವ ಅಧಿಕಾರ ಚುನಾವಣಾ ಆಯೋಗ ನೀಡಿದೆ.