Advertisement

ಜಿಲ್ಲೆಯಲ್ಲೇ ಅತಿ ಹೆಚ್ಚು ಭತ್ತ ಖರೀದಿ

01:09 PM Jun 19, 2020 | Naveen |

ಹೊಸನಗರ: ಕೋವಿಡ್ ಆತಂಕದ ನಡುವೆಯೂ ಬೆಂಬಲ ಬೆಲೆಯಲ್ಲಿ ಅತಿ ಹೆಚ್ಚು ಭತ್ತ ಖರೀದಿ  ಮಾಡುವ ಮೂಲಕ ಹೊಸನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಾಧನೆ ಮಾಡಿದೆ ಎಂದು ಎಪಿಎಂಸಿ ಅಧ್ಯಕ್ಷ ಈಶ್ವರಪ್ಪ ಗೌಡ ಹೇಳಿದರು.

Advertisement

ಹೋಬಳಿ ಕೇಂದ್ರ ನಗರದಲ್ಲಿ ರೂ.75 ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಸಂತೆ ಮಾರುಕಟ್ಟೆ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹೊಸನಗರ ಎಪಿಎಂಸಿ ವತಿಯಿಂದ 7500 ಕ್ವಿಂಟಲ್‌ ಭತ್ತವನ್ನು 1850 ಬೆಂಬಲ ಬೆಲೆ ನೀಡಿ ಖರೀದಿಸಲಾಗಿದೆ. ರೂ.75 ಲಕ್ಷ ವೆಚ್ಚದಲ್ಲಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸರ್ಕಾರದಿಂದ ಬಂದಿದ್ದು ಅಂದಾಜು 17 ಲಕ್ಷ ಮಾತ್ರ. ಉಳಿದ ಹಣವನ್ನು ಎಪಿಎಂಸಿಯೇ ಭರಿಸಿದೆ. ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಎಪಿಎಂಸಿಯ ನಗರ ಭಾಗದ ನಿರ್ದೇಶಕ ಎಚ್‌.ಜಿ. ರಮಾಕಾಂತ್‌ ಮಾತನಾಡಿ, ನಗರ ಸಂತೆ ಮಾರುಕಟ್ಟೆ ಅಭಿವೃದ್ಧಿ ನಮ್ಮ ಕನಸಾಗಿತ್ತು. ಇದಕ್ಕೆ ಹಿಂದಿನ ಅಧ್ಯಕ್ಷ ಬಂಡಿ ರಾಮಚಂದ್ರ, ಹಾಲಿ ಅಧ್ಯಕ್ಷ ಈಶ್ವರಪ್ಪ ಗೌಡ, ಉಪಾಧ್ಯಕ್ಷರು ಮತ್ತು ಎಲ್ಲಾ ನಿರ್ದೇಶಕರು ಸಹಕಾರ ಕೊಟ್ಟ ಹಿನ್ನೆಲೆಯಲ್ಲಿ ಮಾರುಕಟ್ಟೆ ಅಭಿವೃದ್ಧಿಗೆ ಕಾರಣವಾಗಿದೆ. ಇದು ಎಪಿಎಂಸಿಯ ಸಾಧನೆ ಎಂದರು. ಉಪಾಧ್ಯಕ್ಷ ಕುನ್ನೂರು ಮಂಜಪ್ಪ, ನಿರ್ದೇಶಕರಾದ ದುಮ್ಮ ಅಶೋಕಗೌಡ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next