Advertisement

ಸರ್ಕಾರಿ ಬಾಲಕಿಯರ ಶಾಲೆಗೆ ಶುದ ನೀರಿನ ಘಟಕ

07:26 PM Jul 29, 2022 | Adarsha |

ಹೊಸನಗರ: ಮಕ್ಕಳ ಆರೋಗ್ಯ ಸುಸ್ಥಿತಿ ಮತ್ತು ವೃದ್ಧಿಗೆ ಶುದ್ಧಕುಡಿಯುವ ನೀರು ಅಮೂಲ್ಯವಾಗಿದೆ ಎಂದು ಮೂಡುಗೊಪ್ಪನಗರ ಗ್ರಾಪಂ ಉಪಾಧ್ಯಕ್ಷೆ ಸುಮತಿ ಅರುಣದಾಸ್‌ ಹೇಳಿದರು.ನಗರದ ಶತಮಾನ ಕಂಡ ಸರ್ಕಾರಿ ಬಾಲಕಿಯರ ಶಾಲೆಯಲ್ಲಿಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದಅವರು, ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳುವಂತೆಮನವಿ ಮಾಡಿದರು.

Advertisement

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ರಮೇಶ್‌ ಮಾತನಾಡಿ, ಹೆಣ್ಣು ಮಕ್ಕಳ ಶಾಲೆಯಲ್ಲಿ ಉತ್ತಮಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಈ ಶೈಕ್ಷಣಿಕ ವರ್ಷಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕುಡಿಯುವನೀರಿನ ಸಮಸ್ಯೆ ಇದ್ದು ಗುತ್ತಿಗೆದಾರ ಸಿ.ವಿ. ಚಂದ್ರಶೇಖರ್‌ ನೆರವುಮತ್ತು ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರ ಸಹಕಾರದೊಂದಿಗೆ ಶುದ್ಧಕುಡಿಯುವ ನೀರು μಲ್ಟರ್‌ ವಾಟರ್‌ ಅನ್ನು ಅಳವಡಿಸಲಾಗಿದೆ.

ಸರ್ಕಾರಿ ಶಾಲೆಯ ಶೈಕ್ಷಣಿಕ ಮತ್ತು ಅದರ ಪೂರಕ ಅಭಿವೃದ್ಧಿಗೆಪೋಷಕರ ಸಹಕಾರ ಅತ್ಯಮೂಲ್ಯವಾಗಿದೆ ಎಂದರು. ಮುಖ್ಯಶಿಕ್ಷಕಿ ಸಾಕಮ್ಮ ಜಗನ್ನಾಥ್‌ ಸರ್ಕಾರಿ ಶಾಲೆಯ ಶೈಕ್ಷಣಿಕ ಪ್ರಗತಿಬಗ್ಗೆ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶಿಲ್ಪಾಹೊಳ್ಳ, ಸದಸ್ಯರಾದ ಪತ್ರಕರ್ತ ನಗರ ರಾಘವೇಂದ್ರ, ಕೆ.ಟಿ. ರವಿ,ಜಯಚಂದ್ರ, ಸುನಿತಾ, ಹೇಮಾವತಿ, ಸರಿತಾ ಮಧುಕರ್‌, ಶೈನಾಸಮೀರ್‌, ಲಲಿತಾ ಎಂ, ಲಾರೆನ್ಸ್‌ ಡಯಾಸ್‌, ಅಬ್ದುಲ್‌ ಗಫರ್‌,ಶಿಕ್ಷಕಕಿಯರಾದ ಶಾರದಾ ಗೋಖಲೆ, ಅಂಬಿಕಾ.ಕೆ, ಚೇತನಾ.ಜಿ,ಸುರೇಖಾ ಆರ್‌., ಪೋಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next