Advertisement

ಪಿಂಚಣಿ ಸೌಲಭ್ಯಕ್ಕಾಗಿ ಅಧಿಕಾರಿಯನ್ನು ಕಾದು ಸುಸ್ತಾಗಿ ಕುಸಿದು ಬಿದ್ದ ವೃದ್ಧೆ :ಜನರ ಆಕ್ರೋಶ

06:19 PM Jun 20, 2022 | Team Udayavani |

ಹೊಸನಗರ: ಸಾಮಾಜಿಕ ಭದ್ರತಾ ಪಿಂಚಣಿ ಸೌಲಭ್ಯ ಮಾಡಲು ಬಂದು ಅಧಿಕಾರಿಗಾಗಿ ಕಾದು ಸುಸ್ತಾದ ವೃದ್ಧೆಯೊಬ್ಬರು ಕುಸಿದು ಬಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ತಾಲೂಕಿನ ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಿಗ್ಗೆ 9.30ರ ಸುಮಾರಿಗೆ ಪಿಂಚಣಿ ಸೌಲಭ್ಯ ಮಾಡಿಸಲು ನಿಟ್ಟೂರು ಗ್ರಾಮ ಲೆಕ್ಕಿಗರ ಕಚೇರಿಗೆ ವೃದ್ಧೆ ಸಾಧಮ್ಮ ಬಂದಿದ್ದಾರೆ. ಅಲ್ಲದೆ ಇದಕ್ಕಾಗಿ ಹೆಬ್ಬಿಗೆಯಿಂದ ನಡೆದುಕೊಂಡೇ ಬಂದಿದ್ದರು. ಆದರೆ ಗ್ರಾಮಲೆಕ್ಕಿಗ ಮಂಜಪ್ಪ ಮಧ್ಯಾಹ್ನವಾದರೂ ಬಾರದ ಕಾರಣ ಕಾದು ಕಾದು ಸುಸ್ತಾದ ಸಾದಮ್ಮ ಅಲ್ಲೆ ಕುಸಿದು ಬಿದ್ದಿದ್ದಾರೆ. ಇದನ್ನು ಕಂಡ ಸ್ಥಳೀಯರು ವೃದ್ಧೆಯನ್ನು ಕೂಡಲೇ ನಿಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

ಗ್ರಾಮಲೆಕ್ಕಿಗರ ವರ್ತನೆ ಬಗ್ಗೆ ಆಕ್ರೋಶಗೊಂಡ ಜನರು ಸ್ಥಳದಲ್ಲೇ ಪ್ರತಿಭಟನೆ ನಡೆಸಿ ತಹಶೀಲ್ದಾರ್ ವಿ.ಎಸ್.ರಾಜೀವ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಗ್ರಾಮ ಲೆಕ್ಕಿಗ ಮಂಜಪ್ಪರನ್ನು ಬೇರೆಡೆ ವರ್ಗಾಯಿಸುವ ಮೂಲಕ ತಹಶೀಲ್ದಾರ್ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : ಪದವೀಧರರು ಸಮಾಜಮುಖಿ ಚಿಂತಕರಾಗಲಿ; ಪ್ರೊ.ಕುಮಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next