Advertisement

Hosanagara: ಅಪಘಾತವಾಗಿ ಪಲ್ಟಿಯಾದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸರಕಾರಿ ಬಸ್

07:11 PM Jul 01, 2024 | Vishnudas Patil |

ಹೊಸನಗರ: ಸರಕಾರಿ ಬಸ್ ಮತ್ತು ಬ್ಯಾಂಕಿಗೆ ಹಣ ಸಾಗಿಸುತ್ತಿದ್ದ ಸಿಎಂಎಸ್ ವಾಹನದ ನಡುವೆ ಅಪಘಾತ ಸಂಭವಿಸಿ ಬಸ್ಸು ಕಮರಿಗೆ ಬಿದ್ದ ಘಟನೆ ರಾಣೇಬೆನ್ನೂರು ಬೈಂದೂರು ಹೆದ್ದಾರಿಯ ಗಾಜನೂರು ಕ್ರಾಸ್ ಬಳಿ ಸೋಮವಾರ ನಡೆದಿದೆ.

Advertisement

ಬೆಂಗಳೂರು ನಿಂದ ಭಟ್ಕಳ ಕಡೆ ಸಾಗುತ್ತಿದ್ದ ಬಸ್ಸು, ನಿಟ್ಟೂರು ಬ್ಯಾಂಕಿಗೆ ಹಣ ಹಾಕಿ ಬರುತ್ತಿದ್ದ ಬ್ಯಾಂಕ್ ಸಿಎಂಎಸ್ ವಾಹನದ ನಡುವೆ ಬಪ್ಪನಮನೆ ಸಮಗೋಡು ನಡುವಿನ ಗಾಜನೂರು ಕ್ರಾಸ್ ನಲ್ಲಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕಕ್ಕೆ ಉರುಳಿದೆ. ಬಸ್ಸಿನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದು ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.

ಮರದ ಆಸರೆ
ಕೆಳಕ್ಕೆ ಉರುಳುತ್ತಿದ್ದಂತೆ ಮಾವಿನಮರ ತಡೆದಿದೆ. ಸ್ವಲ್ಪ ಹೆಚ್ವು ಕಡಿಮೆಯಾಗಿದ್ದಾರೆ ಸುಮಾರು 50 ಅಡಿ ಕೆಳಗೆ ಉರುಳಿ ಹೊಳೆ ಪಾಲಾಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ.

ಬಸ್ಸಿನ ಚಾಲಕ ದಯಾನಂದ ಕನ್ನೋಳಿ, ಕಂಡಕ್ಟರ್ ಕಲ್ಲೇಶ್ ಗೆ ಸಣ್ಣಪುಟ್ಟ ಪೆಟ್ಟಾಗಿದೆ.  ಬ್ಯಾಂಕ್ ಸಿಎಂಎಸ್ ವಾಹನದ ಮುಂಭಾಗ ಜಖಂಗೊಂಡಿದೆ. ವಾಹನದಲ್ಲಿ ಚಾಲಕ ಮಂಜುನಾಥ್, ಗನ್ ಮ್ಯಾನ್ ತಿಪ್ಪೇಶಿ, ಕಸ್ಟೋಡಿಯನ್ ನಾಗಪ್ರಸನ್ನ, ಶಿವಕುಮಾರ್ ಇದ್ದು, ಚಾಲಕನ ತಲೆಗೆ ಸ್ವಲ್ಪ ಪೆಟ್ಟಾಗಿದೆ.

ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಎಎಸ್ಐ ಮಂಜುನಾಥ್ ಬಸ್ ಕೆಳಗೆ ಬಿದ್ದಿರುವುದು ಕಂಡು ಬಂದಿದ್ದು ಕೂಡಲೇ ಠಾಣೆ ಮಾಹಿತಿ ತಿಳಿಸಿದ್ದಾರೆ. ಸ್ಥಳೀಯರ ಸಹಕಾರದಿಂದ ಮಗುಚಿ ಬಿದ್ದ ಬಸ್ಸಿನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರಗೆ ಕರೆತರಲಾಯಿತು.

Advertisement

ನಗರ ಪಿಎಸ್ಐ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡರು. ಪೊಲೀಸ್ ಇಲಾಖೆಯ ವೆಂಕಟೇಶ್, ಶಾಂತಪ್ಪ, ಸುಜಯ್ ಸೇರಿದಂತೆ ಹಲವರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next