Advertisement

ವೃದ್ಧನನ್ನು ಮಗನ ಮನೆಗೆ ಸೇರಿಸಿದ ಗ್ರಾಪಂ ಸಿಬ್ಬಂದಿ

05:44 PM Apr 12, 2020 | Naveen |

ಹೊಸನಗರ: ಕಳೆದ 20 ದಿನಗಳಿಂದ ತಂಗುದಾಣವನ್ನೇ ವಾಸಸ್ಥಳ ಮಾಡಿಕೊಂಡಿದ್ದ ವೃದ್ಧನನ್ನು ಮಗನ ಮನೆಗೆ ಕಳುಹಿಸುವಲ್ಲಿ ಗ್ರಾಪಂ ಸಿಬ್ಬಂದಿ ಯಶಸ್ವಿಯಾಗಿರುವ ಘಟನೆ ತಾಲೂಕಿನ ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ. ಹೆಬ್ಬಿಗೆ ಸಮೀಪ ಕರ್ಕಮುಡಿಯ 90 ವರ್ಷದ ವೃದ್ಧ ಮಂಜಪ್ಪ ಅವರು ಕಳೆದ 20 ದಿನಗಳಿಂದ ನಿಟ್ಟೂರಿನ ತಂಗುದಾಣದಲ್ಲೇ ವಾಸವಾಗಿದ್ದರು.

Advertisement

ಅಕ್ಕಪಕ್ಕದ ನಿವಾಸಿಗಳು ಕೊಡುತ್ತಿದ್ದ ಆಹಾರವನ್ನೇ ತಿಂದು ಬದುಕು ಕಂಡುಕೊಂಡಿದ್ದರು. ವೃದ್ಧನಿಗೆ ಪತ್ನಿ, ಮಗ, ಮಗಳು ಇದ್ದಾರೆ. ಆದರೆ, ಅಲ್ಲಿಗೆ ಹೋಗುವಂತೆ ಎಷ್ಟೇ ಒತ್ತಾಯ ಮಾಡಿದರೂ ಒಪ್ಪಿರಲಿಲ್ಲ. ಆದರೆ, ಶುಕ್ರವಾರ ಗ್ರಾಪಂ ಸಿಬ್ಬಂದಿ ವೃದ್ಧನನ್ನು ಕೊಲ್ಲೂರು ಸಮೀಪದ ದಣಿ ಗ್ರಾಮದ ಮಗನ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next