Advertisement

Hosanagara: ವಯನಾಡ್ ಮಾದರಿಯಲ್ಲೇ ಭಾರೀ ಪ್ರಮಾಣದಲ್ಲಿ ಕುಸಿಯುವ ಭೀತಿ

11:12 AM Jul 31, 2024 | Kavyashree |

ಹೊಸನಗರ: ನಗರ ಹೋಬಳಿಯ ಕುಂದಗಲ್ ಗ್ರಾಮದಲ್ಲಿ ಸುಮಾರು 200 ಮೀಟರ್ ಕುಸಿಯುವ ಭೀತಿ ಎದುರಾಗಿದೆ. ಈಗಾಗಲೇ ರಸ್ತೆಯುದ್ದಕ್ಕೂ ಭಯಾನಕ ಬಿರುಕು ಬಿಟ್ಟಿದೆ. ಕುಸಿದರೆ ಮಾರ್ಗ ಕಡಿತ, ಜಮೀನು ಕಳೆದುಕೊಳ್ಳುವ ಭೀತಿ ಜನರಲ್ಲಿ ಎದುರಾಗಿದೆ.

Advertisement

ಹೌದು ಅಪಾಯಕಾರಿಯಾಗಿ ಭೂಮಿ ಕುಸಿಯುತ್ತಿರುವುದು ನಗರ ಹೋಬಳಿ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಕುಂದಗಲ್ಲು ಭಾಗದಲ್ಲಿ. ಇಲ್ಲಿ2 ದಿನದ ಹಿಂದೆ ಸಣ್ಣ ಬಿರುಕು ಕಾಣಿಸಿಕೊಂಡಿದ್ದು, ಇದೀಗ ಇಲ್ಲಿ ಭಾರಿ ಬಿರುಕು ಕಂಡಿದೆ. ಇದು ಮಾತ್ರವಲ್ಲದೆ ಭೂಮಿ ಕುಸಿಯಲು ಆರಂಭಿಸಿದೆ.

ಇದೇ ಮಾರ್ಗದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಓಡಾಡುತ್ತಾರೆ. ಮಾರ್ಗ ಕುಸಿದರೇ ಜಮೀನು ಕಳೆದುಕೊಳ್ಳಬೇಕು, ಮಾತ್ರವಲ್ಲ ಮುಖ್ಯ ಮಾರ್ಗಕ್ಕೆ 2 ಕಿ.ಮೀ. ನಡೆದೇ ಹೋಗಬೇಕಾದ ಸ್ಥಿತಿ ಇದೆ.

ಈ ಪ್ರಮಾಣದ ಭೂ ಕುಸಿತ ಕಂಡು ಬರುತ್ತಿರುವುದು ಕುಂದಗಲ್ಲು ಮಾತ್ರವಲ್ಲ ಇಡೀ ನಗರದ ಹೋಬಳಿಯನ್ನೇ ಭಯಕ್ಕೆ ದೂಡಿದೆ. ಇದಕ್ಕೆ ಜಿಲ್ಲಾಡಳಿತ ತುರ್ತಾಗಿ ಸ್ಪಂದಿಸಬೇಕಿದೆ ಎಂದು ಸಾರ್ವಜನಿಕರು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next