Advertisement

ಇತಿಹಾಸ ಪ್ರಸಿದ್ಧ ನಗರ ದರ್ಗಾ ವೈಭವದ ಉರೂಸ್‌ಗೆ ಚಾಲನೆ

05:42 PM Apr 14, 2019 | Naveen |

ಹೊಸನಗರ: ತಾಲೂಕಿನ ಬಿದನೂರು ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಹಜರತ್‌ ಶೇಖುಲ್‌ ಅಕºರ್‌ ಅನ್ವರ ಮಅಶುಂಷಾ ವಲಿಯುಲ್ಲಾ ದರ್ಗಾ ಇದರ ಉರೂಸ್‌ಗೆ ಶುಕ್ರವಾರ ರಾತ್ರಿ ಚಾಲನೆ ನೀಡಲಾಗಿದೆ.

Advertisement

ಕಾರ್ಗಲ್‌ ಮುಸ್ಲಿಂ ಗುರುಗಳಾದ ಶಿರಾಜ್‌ ತಂಗಳ್‌ ಅವರ ನೇತೃತ್ವದಲ್ಲಿ ದುವಾ ಪ್ರಾರ್ಥನೆಯೊಂದಿಗೆ ನಾಲ್ಕು ದಿನಗಳ ಕಾಲ ನಡೆಯುವ ಉರೂಸ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಗ್ರೀಬ್‌ ನಮಾಜ್‌, ಮೌಲದ್‌ ಪಾರಾಯಣ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಉರೂಸ್‌ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧಾ
ಭಾಗಗಳಿಂದ ಭಕ್ತರು ಆಗಮಿಸಿ ಹರಕೆ ಕಾಣಿಕೆ ಅರ್ಪಿಸಿದರು.

ಉರೂಸ್‌ಗೆ ಸಕಲ ಸಿದ್ಧತೆ: ಈಗಾಗಲೇ ಉರೂಸ್‌ಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ದೂರದೂರಿನಿಂದ ಬರುವ ಭಕ್ತಾ ದಿಗಳಿಗೆ ಸೂಕ್ತ ಮೂಲಸೌಲಭ್ಯ ಒದಗಿಸಲಾಗಿದೆ. ಭಕ್ತರ ಹಲವು ವರ್ಷಗಳ ಬೇಡಿಕೆಯಾಗಿದ್ದ ಮಹಿಳೆಯರಿಗೆ ಪ್ರತ್ಯೇಕ ನಮಾಜ್‌
ನಿರ್ವಹಿಸಲು ಸ್ಥಳ, ವಾಹನ ನಿಲುಗಡೆ ಮೈದಾನ ನಿರ್ಮಾಣ, ದರ್ಗಾ ಮುಂಭಾಗದ ಮೈದಾನ ಅಗಲೀಕರಣ ಕಾಮಗಾರಿಯನ್ನು ಅಬ್ಟಾಸ್‌ ನೂಲಿಗ್ಗೇರಿ, ಖಾದರ್‌ ನಿಟ್ಟೂರು, ಸಾಧಿ ಕ್‌ ಕಚ್ಚಿಗೆಬೈಲು, ಯೂಸುಫ್‌ ಸಾಬ್‌ ಹೊಸನಗರ ಇವರ ನೇತ್ವದಲ್ಲಿ
ಕೈಗೊಳ್ಳಲಾಗಿದೆ ಎಂದು ಉರೂಸ್‌ ಸಮಿತಿ ಅಧ್ಯಕ್ಷ ವಿನಾಯಕ ಉಡುಪ ಹೇಳಿದ್ದಾರೆ.

ನೂತನ ದರ್ಗಾ ಕಚೇರಿ ಉದ್ಘಾಟನೆ: ಭಕ್ತಾ ಗಳ ಸಂಪರ್ಕ ಮತ್ತು ಸೂಕ್ತ ಮಾಹಿತಿ ನೀಡಲು ಪೂರಕವಾಗಿ ನೂತನವಾಗಿ ನಿರ್ಮಿಸಲಾದ ದರ್ಗಾ ಕಚೇರಿಯನ್ನು ಉರೂಸ್‌ ಸಮಿತಿ
ಗೌರವಾಧ್ಯಕ್ಷ ಪಟೇಲ್‌ ಗರುಡಪ್ಪ ಗೌಡ ಉದ್ಘಾಟಿಸಿದರು.

Advertisement

ಪ್ರಮುಖರಾದ ಜಿ.ಮಹಮದ್‌ ಸಾಬ್‌, ಅಬ್ಟಾಸ್‌ ನೂಲಿಗ್ಗೇರಿ,
ಚಾಬುಸಾಬ್‌ ರಿಪ್ಪನ್‌ಪೇಟೆ, ಯಾಕೂಬ್‌ ಹೊಸನಗರ, ಕಚ್ಚಿಗೆಬೈಲು ಸಾಧಿಕ್‌, ಖಾದರ್‌ ನಿಟ್ಟೂರು, ಸಿದಿಹಬ್ಬ
ಹೊಸನಗರ, ಯುಸೂಫ್‌ ಸಾಬ್‌ ಹೊಸನಗರ, ಸಾಬ್‌ಜನ್‌ಸಾಬ್‌ ನಗರ ಉರೂಸ್‌ ಮತ್ತು ದರ್ಗಾ ಸಮಿತಿ ಪ್ರತಿನಿಧಿ ಗಳು ಇದ್ದರು.

ಉರೂಸ್‌ ಹಿನ್ನಲೆ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎನ್‌. ವೆಂಕಟರಮಣ ಉಡುಪರಿಗೆ 46 ವರ್ಷದ ಹಿಂದೆ ಅವರ ಕನಸಿನಲ್ಲಿ ಬಂದ ಹಜರತ್‌ ಅವರು ಜನವಸತಿ ಇರದ ನಿರ್ಜನ ಪ್ರದೇಶವೊಂದರಲ್ಲಿ ನೆಲೆನಿಂತಿದ್ದು ವರ್ಷಂಪ್ರತಿ ಉರೂಸ್‌ ಆಚರಿಸಲು ಸೂಚನೆ ನೀಡಿದ್ದರು. ಆನಂತರ ದಿ. ವೆಂಕಟರಮಣ ಉಡುಪರ ನೇತೃತ್ವದಲ್ಲಿ ಉರೂಸ್‌ ನಡೆಯುತ್ತಾ ಬಂದಿದೆ. ಅವರ ಕಾಲಾನಂತರ ಅವರ ಮಗ ವಿನಾಯಕ ಉಡುಪರ ನೇತೃತ್ವದಲ್ಲಿ ಮುಂದುವರಿದಿದೆ. ಹಿಂದೂ-ಮುಸ್ಲಿಂ ಭಾವೈಕ್ಯತಾ ತಾಣವಾಗಿ ನಗರ ದರ್ಗಾ ಮಹತ್ವ ಪಡೆದಿದೆ. ವರ್ಷಂಪ್ರತಿ ನಡೆಯುವ
ಉತ್ಸವದಲ್ಲಿ ಮುಸ್ಲಿಂ ಸಮುದಾಯ ಮಾತ್ರವಲ್ಲದೆ ಬಹುತೇಕ ಹಿಂದೂಗಳು ಈ ದರ್ಗಾಕ್ಕೆ ನಡೆದುಕೊಳ್ಳುತ್ತಿರುವುದು
ಇಲ್ಲಿಯ ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next