Advertisement
ಶಿವಲಿಂಗ ಕಿತ್ತ ಸಂದರ್ಭದಲ್ಲಿ ಇದರ ವಿನ್ಯಾಸ ವಿಶೇಷವಾಗಿ ಗಮನಸೆಳೆದಿದೆ. ಬಳಿಕ ಕಲ್ಲಿನ ವಿಶೇಷತೆ ಬಗ್ಗೆ ಇತಿಹಾಸ ತಜ್ಞರ ಗಮನಕ್ಕೆ ತಂದಾಗ ಇದು 14- 15 ಶತಮಾನದ ಶಿವಲಿಂಗ ಎಂದು ತಿಳಿದು ಬಂದಿದೆ. ಶಿವಲಿಂಗ ಪೀಠ ಸೇರಿ 4 ಅಡಿ ಎತ್ತರವಿದೆ. 2.5 ಅಡಿಗೂ ಹೆಚ್ಚು ಸುತ್ತಳತೆ ಹೊಂದಿದ್ದು, ಪೀಠದಿಂದ ಶಿವಲಿಂಗ 1.5 ಅಡಿ ಎತ್ತರವಿದೆ.ಶಿವಲಿಂಗದ ಮಹತ್ವ:
ಕರ್ಣಾಟ ಸಾಮ್ರಾಜ್ಯದ (ವಿಜಯನಗರ) ಕಾಲಮಾನದ ಶಿವಲಿಂಗ (ಪೀಠ ಸಹಿತ) ಇರುವುದು ಗಮನಕ್ಕೆ ಬಂದಿದೆ. ಶಿವಲಿಂಗ ಮತ್ತು ಪೀಠವು 14 -15ನೇ ಶತಮಾನದಾಗಿದ್ದು, ಇತಿಹಾಸ ತಜ್ಞ ಡಾ. ಜಗದೀಶ್ ಅಗಸಿಬಾಗಿಲು, ಪುರಾತತ್ವ ಇಲಾಖೆಯ ಡಾ.ಶೇಜೇಶ್ವರ, ಅಜಯಕುಮಾರ ಶರ್ಮಾ, ಶಿವಲಿಂಗ ಮತ್ತು ಅದರ ಪೀಠದ ಆಧಾರದ ಮೇಲೆ ಇದರ ಕಾಲಮಾನ 14-15ನೇ ಶತಮಾನದ್ದು, ಅಂದರೆ 1301 ರಿಂದ 1500ರ ಕಾಲಘಟ್ಟಕ್ಕೆ ಸೇರಿರಬಹುದು ಎಂದು ಅಂದಾಜಿಸಿದ್ದಾರೆ.