Advertisement

Hosanagar: ಅಳಿವಿನಂಚಿನ ಹಾರು ಬೆಕ್ಕು ಬೇಟೆ: ಓರ್ವನ ಬಂಧನ

09:49 PM Aug 16, 2024 | Vishnudas Patil |

ಹೊಸನಗರ: ತಾಲೂಕಿನ ನಗರ ವಲಯ ಅರಣ್ಯ ವ್ಯಾಪ್ತಿ ಹುಂಚ ಹೋಬಳಿ ಬಾಳೆಕೊಪ್ಪ ಗ್ರಾಮದಲ್ಲಿ ಅಳಿವಿನಂಚಿನಲ್ಲಿರುವ ಅತಿ ಅಪರೂಪದ ವನ್ಯಜೀವಿ ಹಾರು ಬೆಕ್ಕಿನ ಅಕ್ರಮ ಬೇಟೆಯಾಡಿದ ಓರ್ವನನ್ನು ಬಂಧಿಸಲಾಗಿದೆ.

Advertisement

ಸತೀಶ್ ಬಿನ್ ಶೇಷ ನಾಯ್ಕನನ್ನು ಮೃತಪಟ್ಟಿದ್ದ ಹಾರು ಬೆಕ್ಕಿನ ಸಹಿತ ನಗರ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕೆಂಚಪ್ಪನವರ್ ಅವರ ಮಾರ್ಗದರ್ಶನದಲ್ಲಿ, ಹೊಸನಗರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ನಿರ್ದೇಶನದಂತೆ, ನಗರ ವಲಯ ಅರಣ್ಯಾಧಿಕಾರಿ ಸಂತೋಷ್ ಮಲ್ಲನಗೌಡ, ಉಪವಲಯ ಅರಣ್ಯಾಧಿಕಾರಿಗಳಾದ ಟಿ.ಪಿ.ನರೇಂದ್ರ ಕುಮಾರ್, ಸತೀಶ್, ಸತೀಶ್ ನಾಯಕ್, ಅಮೃತ ಸುಂಕದ್, ಗಸ್ತು ಅರಣ್ಯ ರಕ್ಷಕರಾದ ಯೋಗರಾಜ್, ಆಂಜನೇಯ, ಮನೋಜ್ ಹಾಗು ವಾಹನ ಚಾಲಕ ರಾಮು ಪ್ರಕರಣ ಭೇದಿಸುವಲ್ಲಿ ಯಶಸ್ಚಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next