ಬೆಂಗಳೂರು: ಹೊಸಗುಡ್ಡದಹಳ್ಳಿಯ ರಾಸಾಯನಿಕ ಗೋದಾಮುನಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.
ಉತ್ತರ ಭಾರತದ ಬಿಜಯ್ ಸಿಂಗ್(30) ಮೃತ ಕಾರ್ಮಿಕ. ಹೊಸಗುಡ್ಡದಹಳ್ಳಿಯಲ್ಲಿ ನ.10ರಂದು ಮಂಗಳವಾರ ಬೆಳಗ್ಗೆ 10.30ರಲ್ಲಿ ಬಿಜಯ್ ಸಿಂಗ್ ಸೇರಿ ಮೂವರು ಕಾರ್ಮಿಕರು ಗೋದಾಮಿನ ಆವರಣದಲ್ಲಿದ ಲಾರಿಯಲ್ಲಿದ್ದ ಕೆಮಿಕಲ್ ಬ್ಯಾರೆಲ್‌ಗಳನ್ನು ಇಳಿಸುತ್ತಿದ್ದರು. ಈ ವೇಳೆ ಕಾರ್ಮಿಕ ಬಿಜುಕುಮಾರ್ ಒಂದು ಕೆಮಿಕಲ್ ಡ್ರಮ್‌ನಿಂದ ಮತ್ತೂಂದು ಕೆಮಿಕಲ್ ಡ್ರಮ್‌ಗೆ ಪೈಪ್ ಮೂಲಕ ಬದಲಾಯಿಸುವ ವೇಳೆಯಲ್ಲಿ ಉಂಟಾದ ಸ್ಟಾಟಿಕ್ ಜಾರ್ಜ್‌ನಿಂದ ಬೆಂಕಿಯ ಕಿಡಿಗಳು ಉಂಟಾಗಿ ಬೆಂಕಿ ಹೊತ್ತಿಕೊಡಿದೆ.
ಇದನ್ನೂ ಓದಿ:ಸೋಮವಾರದಿಂದ ಮಹಾರಾಷ್ಟ್ರದ ಧಾರ್ಮಿಕ ಕೇಂದ್ರಗಳು ಭಕ್ತರಿಗೆ ಮುಕ್ತ! ನಿಯಮ ಪಾಲಿಸಲು ಸೂಚನೆ
ಹೆದರಿದ ಕಾರ್ಮಿಕರು ಕೂಡಲೇ ಅಲ್ಲಿಂದ ಓಡಿಹೋಗಿದ್ದರು. ನಂತರ ಕೆಲವೇ ನಿಮಿಷಗಳಲ್ಲಿ ಬೆಂಕಿ ಗೋದಾಮಿಗೂ ವ್ಯಾಪಿಸಿದೆ. ಬೆಂಕಿ ತಗುಲಿ ಬ್ಯಾರೆಲ್‌ಗಳು 30 ಅಡಿ ಎತ್ತರಕ್ಕೆ ಚಿಮ್ಮಿವೆ. ಪರಿಣಾಮ ಗೋಡೌನ್‌ನಲ್ಲಿ ಎರಡು ಕಟ್ಟಡದ ಪಕ್ಕದ ಒಂದು ಕಟ್ಟಡ ಪೂರ್ಣವಾಗಿ ನಾಶವಾಗಿದೆ. ವಾಹನಗಳು, ಬೀದಿ ದೀಪಗಳು ಬೆಂಕಿಗಾಹುತಿಯಾಗಿತ್ತು. ಈ ವೇಳೆ ಬಿಜಯ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಪೊಲೀಸು ಹೇಳಿದರು. ಪ್ರಕರಣ ಸಂಬಂಧ ಗೋಡೌನ್ ಮಾಲೀಕ ಸಜ್ಜನ್‌ರಾವ್, ಅವರ ಪತ್ನಿ ಕಮಲಾ ಸಜ್ಜನ್‌ರಾವ್, ಪುತ್ರ ಅನಿಲ್ ಕುಮಾರ್‌ನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.