Advertisement
ಉದ್ಯೋಗ ಖಾತ್ರಿ ಯೋಜನೆ ಅಡಿ ಜಾನಕಲ್ ಗ್ರಾಪಂ ವ್ಯಾಪ್ತಿಯ ಹಿರೇಹಳ್ಳ ವ್ಯಾಪ್ತಿಯ ಹಳ್ಳದಲ್ಲಿ ಮಣ್ಣು ತೆಗೆಯುವ ಕಾಮಗಾರಿಯನ್ನು ಆರಂಭಿಸಲಾಗಿದೆ. ಹಿರೇಹಳ್ಳ ಜಾನಕಲ್, ದೇವಪುರ, ದೊಡ್ಡಘಟ್ಟ ಗ್ರಾಪಂ ವ್ಯಾಪ್ತಿ ನೂರಾರು ಕಾರ್ಮಿಕರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಜಾಬ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಈ ಕೆಲಸದಲ್ಲಿ ಪಾಲ್ಗೊಂಡಿದ್ದಾರೆ. ಅನ್ಯ ರಾಜ್ಯದಿಂದ ವಲಸೆ ಬಂದ ಕಾರ್ಮಿಕರಿಗೆ ನರೇಗಾ ಯೋಜನೆ ವರದಾನವಾಗಿದ್ದು, ಸ್ಥಳೀಯರಿಗೂ ಉದ್ಯೋಗಾವಕಾಶ ಕಲ್ಪಿಸಿರುವುದು ಅವರಲ್ಲಿ ಸಂತಸ ತಂದಿದೆ. ಹಿರೇಹಳ್ಳ ಸಂಪೂರ್ಣ ಕಲ್ಲು ಮುಳ್ಳುಗಳಿಂದ ತುಂಬಿದ್ದನ್ನು ಗಮನಿಸಿದ ಶಾಸಕ ಗೂಳಿಹಟ್ಟಿ ಶೇಖರ್, ಆರೇಳು ಜೆಸಿಬಿ ಸಹಾಯದಿಂದ ರಾಜಕಾಲುವೆಯನ್ನು ದುರಸ್ತಿ ಮಾಡಿಸಿ ಕಾಲುವೆ ಮಾರ್ಗ ಮಾಡಿಸಿದ್ದಾರೆ.
ಗ್ರಾಪಂ ಪಿಡಿಒ ಶ್ರೀನಿವಾಸ್, ಎಡಿ ರಂಗನಾಥ್ ಮಾಹಿತಿ ನೀಡಿದರು.
Related Articles
ಜಾನಕಿರಾಮ್, ತಾಪಂ ಇಒ
Advertisement
ಅಂತರ್ಜಲ ವೃದ್ಧಿ ಉದ್ದೇಶ ಸೇರಿದಂತೆ ಹಿರೇಹಳ್ಳದಲ್ಲಿ ಉಂಟಾಗುತ್ತಿದ್ದ ನೆರೆ ಹಾವಳಿ ತಡೆಯಲು ಹಳ್ಳದ ಪುನಶ್ಚೇತನ ಕಾರ್ಯ ನಡೆಯುತ್ತಿದೆ. ನಾಲೆ ಪುನಶ್ಚೇತನದ ಜೊತೆಗೆ ಹಳ್ಳದ ಹೂಳು ಎತ್ತುವುದು ಹಾಗೂ ಎರಡು ಕಡೆ ಒಡ್ಡು ಬಲಪಡಿಸಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಜೊತೆಗೆ ವಿವಿಧ ಇಲಾಖೆಗಳ ಅಡಿಯಲ್ಲಿ ಚೆಕ್ ಡ್ಯಾಂ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ.ಗೂಳಿಹಟ್ಟಿ ಶೇಖರ್, ಶಾಸಕರು