Advertisement
ಶ್ರೀ ಹೊಸಮಾರಿಗುಡಿ ದೇವಸ್ಥಾನ, ದೇವಸ್ಥಾನ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ನೂತನವಾಗಿ ಆರಂಭಿಸಲಾದ ಬ್ರಹ್ಮ ಕಲಶೋತ್ಸವ ಸಮಿತಿ, ನವದುರ್ಗಾ ಲೇಖನ ಸಮಿತಿ ಕಾರ್ಯಾಲಯ, ಮಾಧ್ಯಮ ವಿಭಾಗವನ್ನು ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು.
ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ವಿಜಯ ನಗರ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಾಣಗೊಂಡ ಹಂಪಿಯ ಶಿಲ್ಪ ಕಲಾವೈಭವಗಳನ್ನು ನೆನಪಿಸುತ್ತಿವೆ. ಜಗತ್ತಿನಾದ್ಯಂತ ನೆಲೆಸಿರುವ ಭಕ್ತರ ದೇಣಿಗೆಯಿಂದ ಶಿಲಾಮಯವಾಗಿ, ಸ್ವರ್ಣ ಗದ್ದುಗೆಯೊಂದಿಗೆ ಪ್ರತಿ ಷ್ಠಾಪನೆಗೊಳ್ಳಲಿರುವ ದೇವಸ್ಥಾನವು ಸಂಪೂರ್ಣ ಸ್ವರ್ಣಮಯವಾಗಿ ಮೂಡಿಬರಲಿ ಎಂದರು. ಋಣ ತೀರಿಸಿಕೊಳ್ಳಲು ಸಕಾಲ
ಜಗತ್ತಿಗೆ ವಿಶ್ವಕರ್ಮರ ಕೊಡುಗೆ ಅಪಾರ. ಈ ಸಮಾಜದಿಂದ ಬಂದಿರುವ ಶಿಲ್ಪಿಗಳೇ ಪ್ರತೀ ಹದಿನೈದು ದಿನಕ್ಕೊಮ್ಮೆ ಮಾರಿಯಮ್ಮ ದೇವಿಯ ಬೊಂಬೆಯನ್ನು ತಯಾರು ಮಾಡಿ ಕೊಟ್ಟು ಪೂಜಿಸಲು ಅನುವು ಮಾಡಿಕೊಡುತ್ತಾರೆ. ಇದು ಸಮಸ್ತ ವಿಶ್ವಕರ್ಮ ಸಮಾಜಕ್ಕೆ ಸಿಗುತ್ತಿರುವ ದೊಡ್ಡ ಗೌರವ. ಇಂತಹ ಅವಕಾಶ ಪಡೆದ ಪ್ರತಿಯೊಬ್ಬರೂ ಶಿಲಾ ಸೇವೆ, ಸ್ವರ್ಣ ಸಮರ್ಪಣೆ ಮತ್ತು ನವದುರ್ಗಾ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳುವ ಮೂಲಕ ಋಣವನ್ನು ತೀರಿಸಿಕೊಳ್ಳಬೇಕಿದೆ ಎಂದರು.
Related Articles
ಉದಯವಾಣಿಯ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನೋದ್ ಕುಮಾರ್ ಮಾತನಾಡಿ, ಕಾಪು ಮಾರಿಯಮ್ಮನ ಸನ್ನಿಧಾನದಲ್ಲಿ ವಿಶೇಷ ಚೈತನ್ಯವಿದೆ, ಧನಾತ್ಮಕ ಶಕ್ತಿ ಯಿದೆ. ಇಲ್ಲಿಗೆ ಪ್ರವೇಶಿಸುತ್ತಲೇ ನಮ್ಮ ಮನೆಗೆ ಪ್ರವೇಶಿಸಿದ ಅನುಭವವಾಗುತ್ತದೆ. ಮಾರಿಯಮ್ಮ ಕಾಪುವಿನ ಭಕ್ತರನ್ನು ಮಾತ್ರವಲ್ಲದೇ ಜಗದಗಲದ ಸರ್ವ ಭಕ್ತರನ್ನೂ ಕಾಯುವ ಕ್ಷೇತ್ರ. ದೇವಿಯ ಅನುಗ್ರಹದಿಂದಾಗಿಯೇ ಈ ದೇವಸ್ಥಾನ ಬಹಳ ಸುಂದರವಾಗಿ ಮೂಡಿಬಂದಿದೆ. ದೇಶ-ವಿದೇಶ ಗಳನ್ನು ಸುತ್ತಿದರೂ ಇಂತಹ ಅದ್ಭುತ ನಿರ್ಮಾಣ ಕಾರ್ಯ ಕಾಣಸಿಗದು ಎಂದರು.
Advertisement
ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಎಂಆರ್ಜಿ ಗ್ರೂಪ್ನ ಅಧ್ಯಕ್ಷ, ಹೊಸ ಮಾರಿಗುಡಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಫೆ. 25ರಿಂದ ಮಾ. 5ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ. 9 ದಿನಗಳ ಕಾರ್ಯಕ್ರಮಕ್ಕಾಗಿ 9 ಸಮಿತಿಗಳನ್ನು ರಚಿಸುತ್ತಿದ್ದು 300 ಮಂದಿಯ ತಂಡ ಸಿದ್ಧವಾಗಲಿದೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಸದ್ಗುರು ಜಗ್ಗಿ ವಾಸುದೇವ್, ಶ್ರೀ ರವಿಶಂಕರ್ ಗುರೂಜಿ, ಬಾಬಾ ರಾವå ದೇವ್ಸುಧಾಮೂರ್ತಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. ದೇವಸ್ಥಾನದ ಪ್ರಧಾನ ತಂತ್ರಿ ಜೋತಿಷ ವಿದ್ವಾನ್ ಕುಮಾರಗುರು ತಂತ್ರಿ, ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಲಾಲಾಜಿ ಆರ್. ಮೆಂಡನ್, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷರಾದ ಮಾಧವ ಆರ್. ಪಾಲನ್, ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಸ್ವರ್ಣ ಗದ್ದುಗೆ ಸಮರ್ಪಣ ಸಮಿತಿ ಅಧ್ಯಕ್ಷ ರವಿ ಸುಂದರ್ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಭಗವಾನ್ದಾಸ್ ಶೆಟ್ಟಿಗಾರ್, ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ, ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಉಪಸ್ಥಿತರಿದ್ದರು.ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪ್ರಸ್ತಾವನೆಗೈದರು. ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ ವಂದಿಸಿದರು. ದಾಮೋದರ ಶರ್ಮ ಬಾಕೂìರು ನಿರೂಪಿಸಿದರು. ಜನಸಂಖ್ಯೆ ವೃದ್ಧಿಗೆ ಹಿಂದೂ ಸಮಾಜ ಗಮನ ಕೊಡಲಿ : ಶ್ರೀ
ಹಿಂದೂ ಸಮಾಜ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜನಸಂಖ್ಯೆಯ ವೃದ್ಧಿಗೆ ಗಮನಕೊಡಬೇಕಾದ ಅನಿವಾರ್ಯತೆ ಎದುರಾಗಿದ್ದು ಈ ಬಗ್ಗೆ ಪ್ರತೀ ಹಿಂದೂ ಯೋಚಿಸಬೇಕಿದೆ ಎಂದು ಕಾಳಹಸ್ತೇಂದ್ರ ಶ್ರೀ ಹೇಳಿದರು. ಹಿಂದೂ ಸಮಾಜ ಇಂದು ಅಪಾಯದಲ್ಲಿದ್ದು, ಹೀಗೆಯೇ ಮುಂದುವರಿದರೆ ಇತಿಹಾಸದ ಪುಟ ಸೇರುವ ಆತಂಕವಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದ ಅವರು, ನಮ್ಮನ್ನು ನಾವು ಆರ್ಥಿಕವಾಗಿ ಸಧೃಡ ಹಾಗೂ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ನಮ್ಮ ದೇವಸ್ಥಾನ – ಮಂದಿರಗಳಲ್ಲಿ ದೇವರ ಭಕ್ತರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಸಿಗಬೇಕು. ಕಾಪು ಮಾರಿಗುಡಿಯಲ್ಲೂ ಈ ಸಂಪ್ರದಾಯ ಪಾಲನೆಯಾಗಬೇಕಿದೆ. ಹಿಂದೂ ಸಮಾಜದ ಒಗ್ಗಟ್ಟಿಗೆ ಇಂತಹ ಯೋಚನೆ, ಯೋಜನೆಗಳು ವೇದಿಕೆೆಯಾಗಲಿದೆ ಎಂದರು.