ಹೊಸದುರ್ಗ: ಹೊಸದುರ್ಗ ಪಟ್ಟಣಕ್ಕೆ ಹೊಂದಿಕೊಂಡಿರುವ ಶ್ರೀ ಭೈರವೇಶ್ವರ ಬೆಟ್ಟ ಅಲ್ಲಿರುವ ಕೋಟೆ ಚಿತ್ರದುರ್ಗ ಕೋಟೆಗಿಂತ ಮುಂಚಿತವಾಗಿ ಕಟ್ಟಿರುವ ಮೂಲ ಎಂದರೆ ಅದು ಹೊಸದುರ್ಗ ಕೋಟೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ತಿಳಿಸಿದರು.
ಪಟ್ಟಣದ ಭೈರಪ್ಪನ ಬೆಟ್ಟದಲ್ಲಿ ಭಾನುವಾರ ನಡೆದ ಸ್ವತ್ಛತಾ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಹೊಸದುರ್ಗ ಪಟ್ಟಣದ ಕೋಟೆ ಪ್ರದೇಶದ ಮಾರ್ಗವಾಗಿ ಭೈರಪ್ಪನ ಬೆಟ್ಟಕ್ಕೆ ತಲುಪುವ ಈ ಕೋಟೆ ಇತಿಹಾಸದಲ್ಲಿ ಹೆಚ್ಚು ಪ್ರಚಾರವಾಗದೇ ಇದ್ದುದರಿಂದ ಇದರ ಕಡೆ ಯಾರಿಗೂ ಸಹಾ ಹೆಚ್ಚು ಆಸಕ್ತಿ ಇರಲಿಲ್ಲ. ಯಾರ ಕಣ್ಣಿಗೂ ಸಹಾ ಕಾಣಲಿಲ್ಲ ಎನಿಸುತ್ತದೆ ಎಂಬ ಮಾತುಗಳನ್ನಾಡಿದ ಅವರು ನಾನೂ ಕೂಡ ಬೆಟ್ಟ ಹತ್ತುತ್ತಿರವುದು ಇದೇ ಮೊದಲು ಇದರ ಸಂಪೂರ್ಣ ಅಭಿವೃ ದ್ಧಿಗೆ ಸರ್ಕಾರದಿಂದ ನೆರವು ತಗೆದುಕೊಂಡು ವಿಶೇಷವಾಗಿ ಭೈರವೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ಕೋಟೆಯನ್ನ ಸಂಪೂರ್ಣ ಅಭಿವೃದ್ಧಿ ಪಡಿಸುವುದರ ಜೊತೆಗೆ ನನ್ನ ಕನಸಿನ ಪ್ರಾಜೆಕ್ಟ್ ಅಂದರೆ ರೋಪ್ ವೇ ಮತ್ತು ಕೇಬಲ್ ಕಾರ್ ವ್ಯವಸ್ಥೆ ಮಾಡಬೇಕೆಂಬ ಉದ್ದೇಶವಿದೆ ಎಂದರು.
ಕೋಟೆಯ ಮೇಲ್ಭಾಗದಲ್ಲಿ ನಾಗದೇವರ ದೇಗುಲ, ವಿಶಾಲ ಹುಲ್ಲುಹಾಸಿನ ಮೈದಾನವಿದ್ದು, ಮೇಲೆ ಬರಲು ಕಷ್ಟವಾಗಿರುವುದರಿಂದ ಪ್ರವಾಸಿಗರಿಗೆ ಕಷ್ಟಕರವಾಗಿದೆ. ಇಂತಹ ಸುಂದರ ಅದ್ಭುತ ಪ್ರದೇಶವನ್ನು ಎಲ್ಲರೂ ನೋಡುವಂತಾಗಬೇಕು. ಕೋಟೆ ತಲುಪಲು ಕಷ್ಟಕರವಾಗಿರುವುದರಿಂದ ಚಿತ್ರದುರ್ಗ ಕೋಟೆಗೂ ಮೊದಲು ಹೊಸದುರ್ಗದ ಕೋಟೆಗೆ ಕೇಬಲ್ ಕಾರ್ ವ್ಯವಸ್ಥೆಯನ್ನ ಸರ್ಕಾರದಿಂದ ಮಾಡುವ ಚಿಂತನೆ ಮಾಡಲಾಗುವುದು. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಅನುದಾನ ಪಡೆದು ಈ ವರ್ಷ ಅಥವಾ ಮುಂದಿನ ವರ್ಷ ಹೊಸದುರ್ಗ ಕೋಟೆಗೆ ಕೇಬಲ್ ಕಾರ್ ಮತ್ತಿತರೆ ಅಭಿವೃದ್ಧಿ ಪಡಿಸುವ ಮೂಲಕ ಇದೊಂದು ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದರು.
ಇದರ ಇತಿಹಾಸವನ್ನು ನಾಡಿಗೆ ತಿಳಿಸುವ ಸಂದರ್ಭ ಬಂದೋದಗಿದ್ದು, ಈ ನಿಟ್ಟಿನಲ್ಲಿ ಹೆಚ್ಚು ಅಭಿವೃದ್ಧಿ ಪಡಿಸುವ ಮೂಲಕ ಜನರು ನೋಡುವಂತಹ ಸ್ಥಳವಾಗಬೇಕು ಎಂಬುದು ನಮ್ಮ ಅಭಿಲಾಷೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ ಫೈಜುಲ್ಲಾ, ಬಿಜೆಪಿ ಮುಖಂಡ ಆನಂದ್‌ಮೇದಾರ್, ತುಂಬಿನಕೆರೆ ಬಸವರಾಜು, ರಘು ರಾಜಾಹುಲಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.