Advertisement

ತೋಟಗಾರಿಕೆ ವಿವಿ ದೇಶಕ್ಕೆ ಮಾದರಿ; ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರದಾನ

01:11 PM Dec 31, 2022 | Team Udayavani |

ಬಾಗಲಕೋಟೆ: ದೇಶದಲ್ಲಿಯೇ ತೋಟಗಾರಿಕೆ ಬೆಳೆಗಳಲ್ಲಿ 2ನೇ ಸ್ಥಾನ, ಹೂ ಬೆಳೆಗಳಲ್ಲಿ 2ನೇ ಸ್ಥಾನ, ಹಣ್ಣು ಬೆಳೆಗಳಲ್ಲಿ 6ನೇ ಸ್ಥಾನ, ಸಾಂಬಾರ ಪದಾರ್ಥದಲ್ಲಿ 6ನೇ ಸ್ಥಾನ ಹಾಗೂ ತರಕಾರಿ ಬೆಳೆಯಲ್ಲಿ 8ನೇ ಸ್ಥಾನ ಪಡೆಯುವ ಮೂಲಕ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು. ತೋವಿವಿಯ ಉದ್ಯಾನಗಿರಿಯಲ್ಲಿ ಜರುಗಿದ ತೋಟಗಾರಿಕೆ ಮೇಳದ 2ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಜಿಲ್ಲೆಯ ನೆಲ-ಜಲ, ಮಣ್ಣಿನ ಮಾದರಿ ಪರಿಶೀಲಿಸಿಕೊಂಡು 2008ರಲ್ಲಿ ಅಂದಿನ ಸಿಎಂ ಬಿ.ಎಸ್‌. ಯಡಿಯೂರಪ್ಪ ಬೆಳಗಾವಿ ಅ ಧಿವೇಶನದಲ್ಲಿ ಘೋಷಣೆ ಮಾಡಿದ್ದರ ಫಲವಾಗಿ ತೋಟಗಾರಿಕೆ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದೆ ಎಂದರು.

ರಾಜ್ಯದಲ್ಲಿ ತೋಟಗಾರಿಕೆ ವಿಸ್ತೀರ್ಣ 23.25 ಲಕ್ಷ ಹೆಕ್ಟೇರ್‌ ಇದ್ದು, 183.46 ಲಕ್ಷ ಟನ್‌ ಉತ್ಪಾದನೆ ಹೊಂದಿದೆ. ತೋಟಗಾರಿಕೆ ಕೃಷಿ ಜಿಡಿಪಿ ಶೇ.30 ಕೊಡುಗೆ ನೀಡುವ ಮೂಲಕ 44254 ಕೋಟಿ ರೂ. ಆದಾಯ ನೀಡುತ್ತಿದೆ. ಕೇವಲ ಶೇ.18.12 ಪ್ರದೇಶ ಮಾತ್ರ ತೋಟಗಾರಿಕೆ ಪ್ರದೇಶ 308 ಮಿಲಿಯನ್‌ ಟನ್‌, 128 ಮಿಲಿಯನ್‌ ಹೆಕ್ಟೇರ್‌ ಇದ್ದರೆ, ಅದಕ್ಕಿಂತ ಕಡಿಮೆ ಕ್ಷೇತ್ರ 25.7 ಮಿಲಿಯನ್‌ ಹೆಕ್ಟೇರ್‌ ಹೊಂದಿರುವ ತೋಟಗಾರಿಕೆ ಉತ್ಪಾದನೆ 325 ಮಿಲಿಯನ್‌ ಟನ್‌ ಇರುವುದು ವಿಶೇಷ ಎಂದರು.

ಈ ವಿಶ್ವವಿದ್ಯಾಲಯ ರಾಜ್ಯದ 23 ಜಿಲ್ಲೆಗಳಿಗೆ ಒಳಪಟ್ಟಿದ್ದರಿಂದ ಪ್ರತಿ ಜಿಲ್ಲೆಗೆ ಒಬ್ಬರಂತೆ ತೋಟಗಾರಿಕೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ರೈತರನ್ನು ಕರೆಸಿ ಸತ್ಕರಿಸುತ್ತಿರುವ ಮೂಲಕ ಕೃಷಿಕರ ಸಾಮಾಜಿಕ ಮಾನ್ಯತೆ ನೀಡಲಾಗುತ್ತಿದೆ. ಇಂತಹ ಮಹತ್ವದ ಕಾರ್ಯ ಸಾಧಿಸುತ್ತಿರುವ ವಿಶ್ವವಿದ್ಯಾಲಯದ ಪ್ರಯೋಜನ ರೈತರು, ರೈತ ಮಹಿಳೆಯರು, ಬೆಳೆಗಾರರು, ವಿಸ್ತೀರ್ಣಕಾರರು, ರೈತ ವಿಜ್ಞಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ
ತಿಳಿಸಿದರು.

ಬದಲಾವಣೆಗಾಗಿ ಪ್ರಶಸ್ತಿ: ಸಾವಯವ ಕೃಷಿಕ ಮಹಿಮಾ ಪಟೇಲ ಮಾತನಾಡಿ, ಇಂದು ಸಾವಯವ ಕೃಷಿ, ಸಾವಯವ ರಾಜಕಾರಣ ಹಾಗೂ ಸಾವಯವ ಬದುಕು ಪ್ರತಿಯೊಬ್ಬರಿಗೂ ಅವಶ್ಯ. ನಾನು ಸಾವಯವ ಕೃಷಿಕನಾಗಿ, ಸಾವಯವ ರಾಜಕಾರಣಿಯಾಗಿದ್ದೇನೆ. ಫಲಶ್ರೇಷ್ಠ ರೈತರ ಗುರುತಿಸಿ ಪ್ರಶಸ್ತಿ-ಸನ್ಮಾನ ಮಾಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಉದ್ದೇಶದಿಂದ ತೋಟಗಾರಿಕೆ ಕ್ಷೇತ್ರದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

Advertisement

ಮುಂದಿನ ಜನಸಂಖ್ಯೆ, ಕೃಷಿ, ಸರ್ಕಾರ, ಅಧಿಕಾರಿಗಳು ಹೇಗಿರುವರೆಂಬ ವಿಷಯ ಗಮನದಲ್ಲಿಟ್ಟುಕೊಂಡು ಬದುಕಬೇಕಿದೆ. 1962ರಲ್ಲಿ ಕೃಷಿ ಕ್ರಾಂತಿ ದಿನವೆಂದು
ಘೋಷಿಸಿದ್ದು, ಅಂದು ಹೆಚ್ಚುತ್ತಿರುವ ಜನಸಂಖ್ಯೆಗೆ ಪೂರಕ ಬೆಳೆಗಳಿಗೆ ಹಾಗೂ ಹೆಚ್ಚು ಇಳುವರಿ ಬರಲೆಂಬ ಉದ್ದೇಶದಿಂದ ರಾಸಾಯನಿಕ ಬಳಸಿದ್ದರ ಪರಿಣಾಮ ಇಂದು ಭೂಮಿ ವಿಷವಾಗಿ ಪರಿವರ್ತನೆಗೊಂಡಿದೆ. ಇದನ್ನು ಸರಿಪಡಿಸಿಕೊಳ್ಳಬೇಕಾದರೆ ಸಾವಯವ ಹಾಗೂ ನೈಸರ್ಗಿಕ ಪದ್ಧತಿ ಬಳಕೆ ಅಗತ್ಯ ಎಂದು ಹೇಳಿದರು.

ಆ್ಯಪ್‌ ಬಿಡುಗಡೆ: ಇದೇ ವೇಳೆ ಯುಎಚ್‌ಎಸ್‌ಬಿ ಆ್ಯಪ್‌ ಬಿಡುಗಡೆಗೊಳಿಸಲಾಯಿತು. ಇದರ ಜೊತೆಗೆ ತೋಟಗಾರಿಕೆ ಬೆಳೆಗಳ ಮಾಹಿತಿಯುಳ್ಳ ವಿವಿಧ ಪ್ರಕಟಣೆ ಅನಾವರಣಗೊಳಿಸಲಾಯಿತು. ಈ ವೇಳೆ ಸಾವಯವ ಕೃಷಿಕ ಶಂಕರಗೌಡ ಪಾಟೀಲ, ತೋವಿವಿಯ ಕುಲಪತಿ ಡಾ| ಕೆ.ಎಂ. ಇಂದಿರೇಶ, ತೋವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ|ಎಂ. ಶಿವಮೂರ್ತಿ, ಎನ್‌.ಕೆ. ಹೆಗಡೆ, ಡಾ| ರವೀಂದ್ರ ಮುಲಗೆ, ಡಾ| ಟಿ.ಬಿ. ಅಳ್ಳೊಳ್ಳಿ ಇತರರಿದ್ದರು.

10 ಜನ ಫಲಶ್ರೇಷ್ಠರಿಗೆ ಪ್ರಶಸ್ತಿ ಪ್ರದಾನ
ಉತ್ತಮ ಸಾಧನೆ ಮಾಡಿದ 10 ಜನ ಫಲಶ್ರೇಷ್ಠ ರೈತರಾದ ಗದಗ ಜಿಲ್ಲೆಯ ಗರುಡಪ್ಪ ಜಂತ್ಲಿ, ಹಾವೇರಿ ಜಿಲ್ಲೆಯ ಭೀಮಪ್ಪ ಚಿಗರಿ, ಧಾರವಾಡ ಜಿಲ್ಲೆಯ ಶಿವಾನಂದ ಬಸಯ್ಯ ಹಿರೇಮಠ, ಬೀದರ ಜಿಲ್ಲೆಯ ನಾಮದೇವ ಚಂದ್ರಪ್ಪ ಮೇತ್ರೆ, ಕಲಬುರಗಿ ಜಿಲ್ಲೆಯ ಶೈಲಶ್ರೀ ಸಂಗನಗೌಡ, ಯಾದಗಿರಿ ಜಿಲ್ಲೆಯ ದೇವರಾಜ ನಾಯ್ಕ ರಾಠೊಡ, ರಾಯಚೂರು ಜಿಲ್ಲೆಯ ವಿ. ವೆಂಕಟೇಶ ಶ್ರೀನಿವಾಸರಾವ್‌, ಬಳ್ಳಾರಿ ಜಿಲ್ಲೆಯ ಬಸಪ್ಪ ಮರಿಯಪ್ಪ ಗೋಸ್ಬಾಳ, ವಿಜಯನಗರ ಜಿಲ್ಲೆಯ ಶರಣಬಸವ ಎತ್ತಿನಮನಿ ಹಾಗೂ ಕೊಪ್ಪಳ ಜಿಲ್ಲೆಯ ಮಹಾಂತೇಶಗೌಡ ಪಾಟೀಲ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next