Advertisement

ತೋಟಗಾರಿಕೆ ವಿವಿ ರೈತ ಸ್ನೇಹಿಯಾಗಲಿ; ಸಚಿವ ಗೋವಿಂದ ಕಾರಜೋಳ

05:41 PM Dec 27, 2021 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಮಣ್ಣು, ನೀರು ಇದೆ. ಹೀಗಾಗಿ ಇಲ್ಲಿನ ರೈತರಿಗೆ ಅನುಕೂಲವಾಗಲೆಂದುತೋಟಗಾರಿಕೆವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಜಿಲ್ಲೆಯ ಪ್ರತಿಯೊಬ್ಬ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ವಿವಿ ರೈತಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ನವನಗರದ ಉದ್ಯಾನಗಿರಿಯಲ್ಲಿ ಆರಂಭಗೊಂಡ ತೋಟಗಾರಿಕೆ ಮೇಳದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಖಂಡ ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕೆ ಆಧಾರಿತ ಕೃಷಿ ಹೆಚ್ಚು ಇದೆ. ಆದಷ್ಟು ಗುಣಮಟ್ಟದ ಬೆಳೆಗಳಿಗೆ ಆದ್ಯತೆ ನೀಡಬೇಕಾಗಿದೆ. ಎರಡೂ ಜಿಲ್ಲೆಯ ರೈತರನ್ನು ವಿಶ್ವ ವಿದ್ಯಾಲಯಕ್ಕೆ ಕರೆಸಿ, ಕೃಷಿ ಸಲಹೆ ನೀಡಬೇಕು. ಅದರಲ್ಲೂ ಜಿಲ್ಲೆಯಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವುದರಿಂದ ಮಣ್ಣು ಫಲವತ್ತತೆ ಕಳೆದುಕೊಂಡು ಸವಳು ಆಗಿದೆ. ಮಣ್ಣಿನ ಫಲವತ್ತತೆಯನ್ನು ಉಳಿಸಿ ರೈತರಿಗೆ ಸಾಕಷ್ಟು ಆದಾಯ ತರುವ ತೋಟಗಾರಿಕೆ ಬೆಳೆಗಳ ಮಾರಾಟದ ಬಗ್ಗೆ ಮಾಹಿತಿ ಒದಗಿಸಬೇಕು.ಇದಕ್ಕೆ ನೀರಾವರಿ ಇಲಾಖೆಯ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ| ವೀರಣ್ಣ ಸಿ. ಚರಂತಿಮಠ ಮಾತನಾಡಿ, ಜಿಲ್ಲೆಯ ಕಪ್ಪು ಎರೆ ಭೂಮಿಯು ಸವಳಾಗುತ್ತಿದೆ. ಅದರಲ್ಲಿ ಉತ್ತಮ ಸಾವಯವ ಬೆಳೆ ಬೆಳೆಯುವಂತಹ ಕಾರ್ಯ ನಡೆಯಬೇಕಾಗಿದೆ. ವಿಶ್ವವಿದ್ಯಾಲಯವು ಆದಷ್ಟು ಸಂಶೋಧನೆಗೆ ಹೆಚ್ಚು ಒತ್ತು ಕೊಡಬೇಕು. ವಿಶ್ವವಿದ್ಯಾಲಯಕ್ಕೆ ಅವಶ್ಯವಿರುವ 350 ಎಕರೆ ಹೆಚ್ಚುವರಿ ಭೂಮಿಯನ್ನು ಮುಧೋಳ ತಾಲೂಕಿನಲ್ಲಿ ಗುರುತಿಸಲಾಗಿದೆ. ಶೀಘ್ರವೇ ಈ ಭೂಮಿಯನ್ನು ವಿಶ್ವ ವಿದ್ಯಾಲಯಕ್ಕೆ ಹಸ್ತಾಂತರಗೊಳಿಸಲು ಸಚಿವ ಗೋವಿಂದ ಕಾರಜೋಳರುನಿರ್ಧರಿಸುವುದುಸ್ವಾಗತಾರ್ಹಕಾರ್ಯ ಎಂದು ತಿಳಿಸಿದರು. ಬಾಗಲಕೋಟೆ, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಉತ್ತರ ಕ®ಡ, ‌° ತುಮಕೂರು ಮತ್ತು ರಾಮನಗರ ಜಿಲ್ಲೆಗಳಿಂದ ಆಯ್ಕೆಯಾದ ಫಲಶ್ರೇಷ್ಠ ರೈತರನ್ನು ಪುರಸ್ಕರಿಸಲಾಯಿತು.

ಅಂತರಜಾಲದ ಮೂಲಕ ಮಾತನಾಡಿದ ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಕೇಂದ್ರದ ಡಾ|ಬಿ.ಎನ್‌.ಎಸ್‌ ಮೂರ್ತಿ ಮತ್ತು ವೇದಿಕೆಯಲ್ಲಿ ಹಾಜರಿದ್ದ ವ್ಯವಸ್ಥಾಪನ ಮಂಡಳಿ ಸದಸ್ಯರಾದ ಡಾ|ಎಂ. ಶಿವಮೂರ್ತಿ ಹಾಗೂ ಫಲಶ್ರೇಷ್ಠ ರೈತರಾದ ಚಂದ್ರಶೇಖರ ಮಜ್ಜಗಿ, ಮಹೇಶ ಶಿವಣ್ಣ, ರಾಧಾಮಣಿ, ಡಾ| ಪುಟ್ಟರಾಜ, ಅರುಣ ರಾಜಣ್ಣ, ಪ್ರಮೋದ ಗಾವಂಕರ, ಲಕ್ಷ್ಮಣ ಕೋಡಿಹಳ್ಳಿ ಮಾತನಾಡಿದರು.

ಡಾ| ರವೀಂದ್ರ ಮುಲಗೆ ವಂದಿಸಿದರು. ಮಧ್ಯಾಹ್ನದ ತಾಂತ್ರಿಕ ಗೋಷ್ಠಿಯಲ್ಲಿ ರೈತರ ಆದಾಯ ದ್ವಿಗುಣಕ್ಕಾಗಿ ತೋಟಗಾರಿಕೆ ಅಭಿವೃದ್ಧಿ ಹಾಗೂ ಅನುಕರಣೆ ಮತ್ತು ಹವಾಮಾನ ವೈಪರಿತ್ಯದ ತಲ್ಲಣಗಳು: ಹಾಗೂ ದ್ರಾಕ್ಷಿ ಹಾಗೂ ದಾಳಿಂಬೆಯಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆ, ಸಂಶೋಧನಾ ಕ್ರಮಗಳು ವಿಷಯಗಳ ಕುರಿತು ರೈತರಿಂದ ರೈತರಿಗೆ ಸಂವಾದ ನೆರವೇರಿತು.

Advertisement

ಉತ್ತರಕರ್ನಾಟಕದ ಅದರಲ್ಲೂ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳು ತೋಟಗಾರಿಕೆ ಬೆಳೆಗೆ ಹೆಸರಾಗಿದೆ.ಹೀಗಾಗಿ ಸರ್ಕಾರ, ಬಾಗಲಕೋಟೆಯಲ್ಲಿ ತೋಟಗಾರಿಕೆ ವಿವಿ ಸ್ಥಾಪಿಸಲಾಗಿದೆ. ಈ ವಿವಿಗೆ ಬೇಕಾದ ಸಕಲ ಮೂಲಭೂತ ಸೌಲಭ್ಯಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸದಾ ಸಿದ್ಧವಿದೆ.ಅಗತ್ಯ ಭೂಮಿಗೆಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕಾಗಿ ಮುಧೋಳ ತಾಲೂಕಿನಲ್ಲಿ 350 ಎಕರೆ ಭೂಮಿ ಗುರುತಿಸಲಾಗಿದೆ. ಶೀಘ್ರವೇಇದನ್ನು ವಿಶ್ವ ವಿದ್ಯಾಲಯಕ್ಕೆ ಹಸ್ತಾಂತರಿಸಲಾಗುವುದು.
ಗೋವಿಂದ ಕಾರಜೋಳ,
ಜಲ ಸಂಪನ್ಮೂಲ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next