Advertisement

ಕೆಪೆಲ್‌ ಹಣ್ಣು ತಿಂದರೆ ವಾರ ಕಾಲ ದೇಹದಲ್ಲಿ ಸುವಾಸನೆ!

02:51 PM Feb 23, 2023 | Team Udayavani |

ಬೆಂಗಳೂರು: ನೀವು ಮೈಗೆ ಸೆಂಟ್‌ ಹಾಕಿಕೊಂಡರೆ ಹಲವು ತಾಸುಗಳ ಕಾಲ ಸುವಾಸನೆ ಬೀರಬಹುದು. ಆದರೆ, ಇಲ್ಲೊಂದು ಅಪರೂಪದ ಹಣ್ಣಿದೆ. ಆ ಹಣ್ಣನ್ನು ನೀವು ಸೇವಿಸಿದರೆ 8 ದಿನಗಳ ಕಾಲ ನಿಮ್ಮ ದೇಹದ ತುಂಬೆಲ್ಲ ಸೂವಾಸೆಯ ಘಮಲಿರಲಿದೆ!

Advertisement

ಥೈಯ್ಲೆಂಡ್‌ ಮೂಲದ “ಕೆಪೆಲ್‌’ ಜಾತಿಯ ಈ ಗಿಡವು ತೋಟಗಾರಿಕಾ ಮೇಳದಲ್ಲಿ ಆಕರ್ಷಣೆಯಾಗಿದೆ. ಮಹಮದ್‌ ಆದಿಲ್‌ ಅವರು ಈ ಗಿಡವನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಿದ್ದಾರೆ. ಕರ್ನಾಟಕದ ರೈತರಿಗೆ ಕೆಪೆಲ್‌ ಗಿಡದ ಬಗ್ಗೆ ಅಷ್ಟೇನೂ ಮಾಹಿತಿಯಿಲ್ಲ. ಆ ಹಿನ್ನೆಲೆಯಲ್ಲಿ ಕರುನಾಡಿನ ರೈತರಿಗೆ ಈ ತಳಿಯನ್ನು ಪರಿಚಯಿತ್ತಿದ್ದೇನೆ. ಕೇರಳ ರೈತರು ಕೆಪೆಲ್‌ ಬೆಳೆ ಬೆಳೆಯುತ್ತಿದ್ದಾರೆ ಎಂದು ವ್ಯಾಪಾರಿ ಮಹಮದ್‌ ಅದಿಲ್‌ ಹೇಳುತ್ತಾರೆ.

ಈ ಹಣ್ಣು ತಿಂದರೆ ಮೈಯಲ್ಲ ಸುವಾಸನೆ ಬೀರಲಿದೆ. ಥೈಯ್ಲೆಂಡ್‌ ರಾಜಮನೆತನದವರು ಈ ಗಿಡವನ್ನು ಬೆಳೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಭಾರತಕ್ಕೂ ಪರಿಚಯಿಸುವ ಕೆಲಸ ನಡೆದಿದೆ ಎನ್ನುತ್ತಾರೆ. ಭೂಮಿಗೆ ಹಾಕಿದ ಐದು ವರ್ಷದಲ್ಲಿ ಬೆಳೆ ಬರಲು ಪ್ರಾರಂಭವಾಗಲಿದೆ. ಒಂದು ಗಿಡದಲ್ಲಿ 10ರಿಂದ 20 ಕಾಯಿಗಳು ಬಿಡಲಿವೆ. ಹೆಚ್ಚು ನೀರು ಕೂಡ ಈ ಬೆಳೆಗೆ ಬೇಕಾಗಿಲ್ಲ. ಸುಮಾರು 30 ಅಡಿಯ ವರೆಗೂ ಈ ಗಿಡ ಬೆಳೆಯಲಿದೆ. ವರ್ಷ ಕಳೆದಂತೆ ಗಿಡದಲ್ಲಿ ಫ‌ಲಗಳು ಹೆಚ್ಚಾಗಲಿವೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ಸಾವಿರ ರೂ. ವರೆಗೂ ಕೆಪೆಲ್‌ ಹಣ್ಣು ಮಾರಾಟವಾಗಲಿದೆ ಎಂದು ಮಾಹಿತಿ ನೀಡುತ್ತಾರೆ.

ಕೆಪೆಲ್‌ನಲ್ಲಿ ಆರೋಗ್ಯಕ್ಕೂ ಅನುಕೂಲವಾಗಿರುವ ಅಂಶಗಳಿವೆ. ಕೇರಳದಲ್ಲಿ ಈಗಾಗಲೇ ಕೆಲವು ರೈತರು ಈ ಬೆಳೆಗಳನ್ನು ತಮ್ಮ ಹೊಲಕ್ಕೆ ಹಾಕಿದ್ದಾರೆ. ಹೊರ ದೇಶದಲ್ಲೂ ಕೂಡ ಇದಕ್ಕೆ ಬೇಡಿಕೆಯಿದೆ. ಆದರೆ ಜನರಿಗೆ ಇನ್ನೂ ಈ ಹಣ್ಣಿನ ಬಗ್ಗೆ ಮಾಹಿತಿಯಿಲ್ಲ. ಆದರೆ ಥೈಯ್ಲೆಂಡ್‌ನ‌ಲ್ಲಿ ಈ ಗಿಡದ ಬಗ್ಗೆ ಅರಿವಿದೆ. ಕೆಲವ ಪ್ರದರ್ಶನಕ್ಕೆ ಮಾತ್ರ ಇಲ್ಲಿ ಇರಿಸಲಾಗಿದೆ. ರೈತರು ಬೇಡಿಕೆ ಸಲ್ಲಿಸಿದರೆ ಕೇರಳದಿಂದ ಈ ಗಿಡವನ್ನು ತರಿಸಿಕೊಡುವುದಾಗಿ ಹೇಳುತ್ತಾರೆ. ಚಿಕ್ಕ ಗಾತ್ರದ ಕೆಪೆಲ್‌ ಗಿಡ 1,500 ರೂ.ಆಗಿದ್ದು, ಬೃಹತ್‌ ಗಾತ್ರದ ಗಿಡಕ್ಕೆ 5 ಸಾವಿರ ರೂ.ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next