Advertisement

ರಾಜಗೆರೆ ಗ್ರಾಮದಲ್ಲಿ ಭಯಾನಕ ರೋಗ ಹರಡಿಲ

01:31 PM Nov 15, 2018 | |

ಹಳೇಬೀಡು: ರಾಜಗೆರೆ ಪರಿಶಿಷ್ಟ ಜನಾಂಗದ ಕಾಲೋನಿಯಲ್ಲಿ ಯಾವುದೇ ಅಪಾಯಕಾರಿ ರೋಗ ಹರಡಿಲ್ಲ. ತಪ್ಪು ಮಾಹಿತಿಗೆ ಕಿವಿಕೊಟ್ಟು ಜನರು ಗಾಬರಿಯಾಗಬಾರದು ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ಸತೀಶ್‌ ಹೇಳಿದರು.

Advertisement

ರಾಜಗೆರೆಯಲ್ಲಿ 50 ಮಂದಿಗೆ ಪಾರ್ಶ್ವವಾಯು ರೋಗ ತಗುಲಿದೆ ಎಂದು ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಇಲಾಖೆಯ ವಿವಿಧ ಅಧಿಕಾರಿ ಗಳೊಂದಿಗೆ ಬುಧವಾರ ಸಂಜೆ ರಾಜಗೆರೆ ಪರಿಶಿಷ್ಟ ಜನಾಂಗದ ಕಾಲೋನಿಗೆ ಭೇಟಿ ನೀಡಿ ಗ್ರಾಮಸ್ಥರ ಸಭೆ ನಡೆಸಿ ಅವರು ಮಾತನಾಡಿದರು. 

ಗ್ರಾಮದಲ್ಲಿ ಒಂದು ವರ್ಷದಿಂದ ಈಚೆಗೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಅವರ ಪೈಕಿ ರಂಗಯ್ಯ(70) ಪಾರ್ಶ್ವವಾಯುವಿನಿಂದ ಮೃತ ಪಟ್ಟಿದ್ದಾರೆ. ಕಾಳಮ್ಮ(105)ಅವರಿಗೆ ಸಹಜವಾಗಿ ಸಾವನ್ನಪ್ಪಿದ್ದಾರೆ. ಭೈರೇಶ ಕಡ್ನಿ ವೈಫ‌ಲ್ಯದಿಂದ ಮೃತಪಟ್ಟರೆ, ರಂಗಯ್ಯ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ದೇವರಾಜು ಹಾಗೂ ಸಗನಮ್ಮ ಮಾತ್ರ ಪಾರ್ಶ್ವವಾಯುವಿ
ನಿಂದ ನರಳುತ್ತಿದ್ದಾರೆ. ಹಲವು ಕಾರಣದಿಂದ ಗ್ರಾಮದಲ್ಲಿ ವರ್ಷಕ್ಕೆ ನಾಲ್ಕೈದು ಮಂದಿ ಮರಣ ಹೊಂದಿದ್ದಾರೆ. ತಪ್ಪುಕಲ್ಪನೆ ಮಾಡಿಕೊಂಡು ಭಯದ ವಾತಾ ವರಣದಲ್ಲಿ ಜನ ಬದುಕುವುದು ಬೇಡ. ಅಸಾಂಕ್ರಾಮಿಕ ರೋಗಗಳ ಘಟಕದಿಂದ ಗ್ರಾಮದಲ್ಲಿ ತಪಾಸಣೆ ಮಾಡಿಸಲಾಗಿದೆ ಎಂದು ಸತೀಶ್‌ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಎಂ.ಸಿ.ಯೋಗೀಶ್‌ ಮಾತನಾಡಿ, ಗ್ರಾಮದ ಕುಡಿಯುವ ನೀರಿನಲ್ಲಿ ಫ್ಲೋರೈಡ್‌ ಅಂಶ ಹೆಚ್ಚಾಗಿದೆ. ಇದರಿಂದ ಗ್ರಾಮಸ್ಥರಿಗೆ ಪಾರ್ಶ್ವವಾಯು ಬರುತ್ತಿದೆ ಎಂದು ಕೆಲವರು ಆರೋಪಿಸಿದರು. ಗ್ರಾಮದ ಕುಡಿ ಯುವ ನೀರಿನಲ್ಲಿ 0.3 ಪ್ರಮಾಣ ಮಾತ್ರ ಫ್ಲೊರೈಡ್‌ ಇದೆ ಎಂದು ಪರೀಕ್ಷೆ ಯಿಂದ ಸಾಬೀತಾಗಿದೆ.

1ಕ್ಕಿಂತ ಹೆಚ್ಚು ಪ್ರಮಾಣ ಫ್ಲೋರೈಡ್‌ ಇದ್ದರೆ ಮಾತ್ರ ನೀರು ಬಳಸಲು ಯೋಗ್ಯವಾಗಿರುವುದಿಲ್ಲ. ಆದರೂ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭ ವಾಗುತ್ತಿದೆ. ಗಾಬರಿ ಬಿದ್ದು, ಜನರಿಂದಲೇ ಜನರಿಗೆ ಗಾಬರಿ ಹುಟ್ಟಿಸಿ ಗ್ರಾಮದ
ನೆಮ್ಮದಿಗೆ ಭಂಗತರಬಾರದು ಎಂದು ಹೇಳಿದರು. 

Advertisement

ಗ್ರಾಪಂ ಸದಸ್ಯ ನಾಗೇಶ್‌, ಎನ್‌ಸಿಡಿ ಘಟಕದ ಅಧಿಕಾರಿ ಡಾ.ಹಿರಣ್ಣಯ್ಯ, ವೈದ್ಯಾಧಿಕಾರಿ ಡಾ. ಗಗನ್‌, ಅಂಗನವಾಡಿ, ಆಶಾ ಕಾರ್ಯಕರ್ತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next