Advertisement

Addoor Bridge: ಶಾಸಕ ರಾಜೇಶ್‌ ನಾೖಕ್‌ ಅವರ ಉಚಿತ ಬಸ್‌ ಸೇವೆ!

12:06 AM Aug 24, 2024 | Team Udayavani |

ಬಂಟ್ವಾಳ: ಅಡ್ಡೂರು ಸೇತುವೆಯಲ್ಲಿ ಜಿಲ್ಲಾಡಳಿತವು ಘನ ವಾಹನ ಸಂಚಾರ ನಿಷೇಧಿಸಿದ ಕಾರಣ ಜನರಿಗೆ ಅನುಕೂಲವಾಗಲೆಂದು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ವೈಯಕ್ತಿಕ ನೆಲೆಯಲ್ಲಿ ಮಿನಿ ಬಸ್‌ ಖರೀದಿಸಿ ಪೊಳಲಿಯಿಂದ ಅಡ್ಡೂರುವರೆಗೆ ಉಚಿತ ಸೇವೆ ಆರಂಭಿಸಿದ್ದಾರೆ.

Advertisement

ಪೊಳಲಿ ದೇವಸ್ಥಾನದ ಮುಂಭಾಗದಲ್ಲಿ ಶುಕ್ರ ವಾರ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಶಾಸಕರು ಬಸ್‌ ಸಂಚಾರಕ್ಕೆ ಚಾಲನೆ ನೀಡಿದರು.

ಈ ವೇಳೆ ಚಂದ್ರಶೇಖರ್‌ ಶೆಟ್ಟಿ ಬಡಕಬೈಲು ಮಾತನಾಡಿ, ಜನರ ಕಷ್ಟಕ್ಕೆ ಶಾಸಕರು ಸ್ಪಂದಿಸಿದ್ದಾರೆ ಎಂದರು.

ಅಡ್ಡೂರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧದ ಬಳಿಕ ತೊಂದರೆಯಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ ಕೇಳಿ ಬಂದಿತ್ತು. ಈ ಕುರಿತು ದ.ಕ.ಸಂಸದರು ಹಾಗೂ ಶಾಸಕರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿ ಪರ್ಯಾಯ ವ್ಯವಸ್ಥೆಗೆ ಸೂಚಿಸಿದ್ದು, ಬಳಿಕ ಮತ್ತೊಮ್ಮೆ ಸೇತುವೆಯ ಪರಿಣಿತರ ನಿಯೋಗ ಪರಿಶೀಲನೆ ನಡೆಸಿ ಸಂಚಾರಕ್ಕೆ ಸೂಕ್ತವಲ್ಲ ಎಂಬ ಅಭಿಪ್ರಾಯ ನೀಡಿದ್ದರು. ಮುಂದಿನ ವಾರದಲ್ಲಿ ಸೇತುವೆ ಪರಿಶೀಲನೆ ಯಂತ್ರ ಬಂದು ವರದಿ ನೀಡು ವವರೆಗೆ ಯಾವುದೇ ಕಾರಣಕ್ಕೂ ಬಸ್ಸು ಸಂಚಾರಕ್ಕೆ ಅವಕಾಶವಿಲ್ಲ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಸ್ಥಳೀಯರಿಗೆ ಸ್ಪಷ್ಟಪಡಿಸಿದ್ದರು.

ಹೀಗಾಗಿ ರಾಜೇಶ್‌ ನಾೖಕ್‌ ಅವರು ಪೊಳಲಿ- ಅಡೂxರು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲ ವಾಗಲು ಪ್ರಸ್ತುತ ಅಳವಡಿಸಿರುವ 2.75 ಮೀ. ಎತ್ತರದ ಗಾರ್ಡ್‌ನಲ್ಲಿ ಸಂಚರಿಸಬಹುದಾದ ಬಸ್ಸು ಖರೀದಿಸಿ ಒದಗಿಸಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗೆ ಈ ಬಸ್ಸು ಸುಮಾರು 2 ಕಿ.ಮೀ.ಅಂತರದಲ್ಲಿ ಪೊಳಲಿ ದೇವಸ್ಥಾನದ ಬಳಿಯಿಂದ ಅಡೂxರು ಜಂಕ್ಷನ್‌ವರೆಗೆ ಸಂಚರಿಸಲಿದೆ. ಇದು ಸಂಪೂರ್ಣ ಉಚಿತ ಸೇವೆ.

Advertisement

ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧ ಗೊಂಡ ಬಳಿಕ ಬಿ.ಸಿ. ರೋಡು ಭಾಗದಿಂದ ತೆರ ಳುವ ಬಸ್ಸು ಪೊಳಲಿವರೆಗೆ ಮಾತ್ರ ತೆರಳುತ್ತಿದ್ದು, ಮಂಗ ಳೂರು, ಕಟೀಲು, ಬಜಪೆ ಭಾಗದಿಂದ ಆಗಮಿಸುವ ಬಸ್ಸುಗಳು ಅಡ್ಡೂರು ಭಾಗದವರೆಗೆ ಆಗಮಿಸುತ್ತದೆ. ಸುಕೇಶ್‌ ಚೌಟ, ಚಂದ್ರಶೇಖರ್‌ ಶೆಟ್ಟಿ, ವೆಂಕಟೇಶ್‌ ನಾವಡ, ಭುವನೇಶ್‌ ಪಚ್ಚಿನಡ್ಕ, ಚಂದ್ರಹಾಸ ಪಳ್ಳಿಪಾಡಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next