Advertisement

HORRIFIC: ಚಿನ್ನದ ನಿಧಿಗಾಗಿ ಬಾಲಕಿಯ ರೇಪ್‌ ಮಾಡಿ ಕೊಂದ ಮಾಂತ್ರಿಕ

04:57 PM Jun 10, 2017 | Team Udayavani |

ಕನೋಜ್‌ : ಉತ್ತರ ಪ್ರದೇಶ ಪೊಲೀಸರು ಇಂದು ಶನಿವಾರ, ವೃತ್ತಿಯಲ್ಲಿ ಶಿಕ್ಷಕನೂ ಆಗಿರುವ ಮಾಂತ್ರಿಕನೋರ್ವನನ್ನು ಬಂಧಿಸಿದ್ದಾರೆ. ಹದಿನಾಲ್ಕು ವರ್ಷ ಪ್ರಾಯದ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು “ಬಲಿ’ ನೀಡಲು ಕೊಂದಿದ್ದ  ಈ ಮಾಂತ್ರಿಕ ಆ ಬಳಿಕ ಪರಾರಿಯಾಗಿದ್ದ.

Advertisement

ಈ ಘಟನೆ ಕನೋಜ್‌ ಜಿಲ್ಲೆಯ ಭಾದೌಸಿ ಗ್ರಾಮದಲ್ಲಿ ಈ ವಾರದ ಆದಿಯಲ್ಲಿ ನಡೆದಿತ್ತು. ಆರೋಪಿ ಮಾಂತ್ರಿಕ ಕೃಷ್ಣ ಕುಮಾರ್‌ ಶರ್ಮಾ ಎಂಬಾತ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಅರೆ ಪ್ರಜ್ಞಾವಸ್ಥೆಯಲ್ಲಿ ಹೊಲವೊಂದಕ್ಕೆ ಒಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ “ಬಲಿ’ ನೀಡುವುದಕ್ಕಾಗಿ ಕುತ್ತಿಗೆ ಹಿಸುಕಿ ಕೊಂದು ಬಳಿಕೆ ಬಲಿಗಾಗಿ ಆಕೆಯ ಕತ್ತನ್ನು ಸೀಳಿ ರಕ್ತ ಸಂಗ್ರಹಿಸಿದ್ದ. 

ನೋಜ್‌ ಸಹಾಯಕ ಪೊಲೀಸ್‌ ಸುಪರಿಂಟೆಂಡೆಂಟ್‌ ಕೇಶವ ಚಂದ್ರ ಗೋಸ್ವಾಮಿ ಅವರು ಈ ಘಟನೆಯ ವಿವರಗಳನ್ನು ಈ ರೀತಿಯಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ : 

ತನ್ನ ಮನೆ ಆವರಣದಲ್ಲಿ ನೆಲದಡಿ ಚಿನ್ನದ ನಿಧಿ ಇದೆ ಎಂದು ನಂಬಿದ್ದ ಚಿನ್ನದ ವ್ಯಾಪಾರಿ ಮಹಾವೀರ ಪ್ರಸಾದ್‌ (55) ಎಂಬಾತ ಆ ನಿಧಿಯನ್ನು ಪತ್ತೆಹಚ್ಚಿ  ಮೇಲಕ್ಕೆತಲು ಆರೋಪಿ ಮಾಂತ್ರಿಕ ಶರ್ಮಾನನ್ನು ಸಂಪರ್ಕಿಸಿದ್ದ.

ಚಿನ್ನದ ನಿಧಿಯನ್ನು ಪಡೆಯಲು ನಿಮ್ಮ ಮಗಳನ್ನು ಬಲಿಕೊಡಬೇಕಾಗುವುದು; ಬಲಿಕೊಟ್ಟ ಸ್ವಲ್ಪ ಹೊತ್ತಿನ ಬಳಿಕ ನಿಮ್ಮ ಮಗಳು ಪುನಃ ಜೀವಂತವಾಗುತ್ತಾಳೆ  ಎಂದು ಮಹಾವೀರ ಪ್ರಸಾದ್‌ ಮತ್ತು ಆತನ ಪತ್ನಿ ಪುಷ್ಪಾ (50) ಳನ್ನು ಮಾಂತ್ರಿಕನು ನಂಬಿಸಿದ್ದ. ಇದಕ್ಕೆ ಈ ದಂಪತಿ ಒಪ್ಪಿಗೆ ನೀಡಿತ್ತು. 

Advertisement

ಆ ಪ್ರಕಾರ ಮಹಾವೀರ ದಂಪತಿಗೆ, ಪುತ್ರಿಯೊಂದಿಗೆ ಸ್ಥಳೀಯ ದೇವಸ್ಥಾನಕ್ಕೆ ಬರುವಂತೆ ಮಾಂತ್ರಿಕನು ಹೇಳಿದ್ದ. ಆ ಪ್ರಕಾರ ಅವರು ಮೂವರೂ ಅಲ್ಲಿಗೆ ಹೋಗಿದ್ದರು. ಆಗ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಹುಡುಗಿಯನ್ನು ಮಾಂತ್ರಿಕ ಶರ್ಮಾ, ಕೆಲವೊಂದು ಮಂತ್ರ-ತಂತ್ರಗಳ ವಿಧಿ ವಿಧಾನ ನಡೆಸಿ, ಬಳಿಕ ಸಮೀಪದ ಗದ್ದೆಯೊಂದಕ್ಕೆ ಒಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯ ಕತ್ತು ಸೀಳಿ ಅಲ್ಲಿಂದ ಚಿಮ್ಮಿದ ರಕ್ತವನ್ನು ಪೂಜಾ ಸ್ಥಳಕ್ಕೆ ತಂದಿದ್ದ. ಆ ಬಳಿಕ ಅಲ್ಲಿಂದ ಪರಾರಿಯಾಗಿದ್ದ. 

ಮಗಳು ಮಾಂತ್ರಿಕನ ವಿಧಿ-ವಿಧಾನಗಳಲ್ಲಿ ಸತ್ತೇ ಹೋಗಿರುವುದು ಖಾತರಿಯಾದ ಕೂಡಲೇ ಮಹಾವೀರ ಪ್ರಸಾದ್‌  ಪೊಲೀಸರನ್ನು ಸಂಪರ್ಕಿಸಿ ತನ್ನ ಮಗಳನ್ನು ಮಾಂತ್ರಿಕನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆಗೈದಿದ್ದಾನೆ ಎಂದು ದೂರು ನೀಡಿದ. 

ದೂರು ದಾಖಲಿಸಿಕೊಂಡು ಕೂಡಲೇ ತನಿಖೆ ಆರಂಭಿಸಿದ ಪೊಲೀಸರಿಗೆ ಜೂನ್‌ 8ರಂದು ಮಹಾವೀರ ಪ್ರಸಾದನ ಪುತ್ರಿ ಕವಿತಾಳ ಶವ ಹೊಲದಲ್ಲಿ ಸಿಕ್ಕಿತು. ಪರಾರಿಯಾಗಿರುವ ಮಾಂತ್ರಿಕನಿಗಾಗಿ ಪೊಲೀಸರೀಗ ಹುಡುಕಾಟ ನಡೆಸುತ್ತಿದ್ದಾರೆ.

ಕವಿತಾ ಳ ತಂದೆ ಮಹಾವೀರ ಪ್ರಸಾದ್‌ ಕೊಲೆ ಸಂಚಿನಲ್ಲಿ ಭಾಗಿಯಾಗಿರುವುದರಿಂದ ಆತನ ಮೇಲೂ ಕೇಸು ಹಾಕಲಾಗಿದೆ. ಆದರೆ ತನಿಖೆ ಪೂರ್ತಿಯಾಗುವ ತನಕವೂ ಆತನ ಪಾತ್ರದ ಬಗ್ಗೆ ನಿರ್ಧರಿಸಲಾಗದು ಎಂದಿದ್ದಾರೆ ಪೊಲೀಸರು. 

Advertisement

Udayavani is now on Telegram. Click here to join our channel and stay updated with the latest news.

Next