Advertisement

ಈ ರಾಶಿಯವರಿಂದು ಧಾರ್ಮಿಕ ವಿಚಾರದಲ್ಲಿ ಭಕ್ತಿ ಶ್ರದ್ಧೆ ಕೊರತೆಯಾಗದಂತೆ ಕಾರ್ಯ ನಿರ್ವಹಿಸಿ

08:09 AM Jun 03, 2022 | Team Udayavani |

03-06-2022

Advertisement

ಮೇಷ: ಉತ್ತಮ ಜನಮನ್ನಣೆ. ವಿಶ್ವಾಸ ಪಾತ್ರರಾಗಿರಿ. ಉತ್ತಮ ಧನಾರ್ಜನೆ ಇದ್ದರೂ ಧನವ್ಯಯಕ್ಕೆ ಹಲವು ದಾರಿ ಬಂದಾವು. ಉದ್ಯೋಗ ವ್ಯವಹಾರಗಳಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ.

ವೃಷಭ: ಮನಸ್ಸಿನಲ್ಲಿ ಗೊಂದಲಕ್ಕೆ ಅವಕಾಶ ನೀಡದೇ ಧೈರ್ಯದಿಂದ ಕಾರ್ಯ ನಿರ್ವಹಿಸಿ. ಅತಿಯಾದ ಆಸೆ ಸಲ್ಲದು. ಭೂಮಿ ಆಸ್ತಿ ಇತ್ಯಾದಿ ವ್ಯವಹಾರಗಳಲ್ಲಿ ಸ್ವಲ್ಪ ಪ್ರಗತಿ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗಿ.

ಮಿಥುನ: ಆರೋಗ್ಯ ಗಮನಿಸಿ. ಅಧ್ಯಯನ ನಿಮಿತ್ತ ದೀರ್ಘ‌ ಪ್ರಯಾಣ ಸಂಭವ. ಪಾಲುದಾರಿಕಾ ವ್ಯವಹಾರದಲ್ಲಿ ಉತ್ತಮ ಪ್ರಗತಿ. ನೂತನ ಮಿತ್ರರ ಸಮಾಗಮ. ಧನಾರ್ಜನೆಗೆ ಕೊರತೆ ಆಗದು. ಸಾಂಸಾರಿಕವಾಗಿ ನೆಮ್ಮದಿಯ ದಿನ.

ಕರ್ಕ: ಅತಿಯಾದ ಆತ್ಮವಿಶ್ವಾಸ ಸಲ್ಲದು. ಮಾತನಾಡುವಾಗ ಎಚ್ಚರ ವಹಿಸಿ. ಧಾರ್ಮಿಕ ವಿಚಾರದಲ್ಲಿ ಭಕ್ತಿ ಶ್ರದ್ಧೆ ಕೊರತೆಯಾಗದಂತೆ ಕಾರ್ಯ ನಿರ್ವಹಿಸಿ. ಧನಾರ್ಜನೆ ಉತ್ತಮ. ಗುರುಹಿರಿಯರಲ್ಲಿ ಬೇಸರ ಮಾಡದಿರಿ.

Advertisement

ಸಿಂಹ: ಅತಿಯಾದ ಕಾರ್ಯ ಒತ್ತಡದಿಂದ ದೇಹಾಯಾಸ ತೋರೀತು. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಧನಾರ್ಜನೆ. ವಿದ್ಯಾರ್ಥಿಗಳು ಪರರನ್ನು ಅವಲಂಬಿಸದೇ ಸ್ವಂತ ಪರಿಶ್ರಮದಲ್ಲಿ ಕಾರ್ಯ ಸಾಧಿಸಿಕೊಳ್ಳಿ.

ಕನ್ಯಾ: ಆರೋಗ್ಯದಲ್ಲಿ ವೃದ್ಧಿ. ಧಾರ್ಮಿಕ ಚಟುವಟಿಕೆಗಳಿಗಾಗಿ ಪ್ರಯಾಣ ಸಂಭವ. ಧನಾರ್ಜನೆಗಿಂತಲೂ ಅಧಿಕ ವ್ಯಯದ ಪರಿಸ್ಥಿತಿ. ಉದ್ಯೋಗ ವ್ಯವಹಾರದಲ್ಲಿ ಸಮಾಧಾನ ತೃಪ್ತಿ. ಪಾಲುದಾರಿಕಾ ಕ್ಷೇತ್ರದವರಿಗೆ ಸದವಕಾಶ.

ತುಲಾ: ಧನಾಗಮನದ ನಿರೀಕ್ಷೆ. ವಿಳಂಬತೆಯಿಂದ ಪ್ರಾಪ್ತಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯ ವೃದ್ಧಿ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಗುರುಹಿರಿಯರ ಸಹಕಾರ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಶ್ರೇಯಸ್ಸು.

ವೃಶ್ಚಿಕ: ದೂರ ಪ್ರಯಾಣ. ಬಹುಜನರ ಒಡನಾಟದಿಂದ ಸಂತೋಷ. ಹೆಚ್ಚಿದ ವರಮಾನ. ದಂಪತಿಗಳಲ್ಲಿ ಅನುರಾಗ ಪ್ರೀತಿ ವೃದ್ಧಿ. ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಉತ್ತಮ ಬದಲಾವಣೆ. ಗೃಹದಲ್ಲಿ ಸಂತಸದ ವಾತಾವರಣ.

ಧನು: ಗುರುಹಿರಿಯರ ಆರೋಗ್ಯ ಗಮನಿಸಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಹೆಚ್ಚಿದ ಜವಾಬ್ದಾರಿ. ದೈಹಿಕ ಆರೋಗ್ಯ ಸುದೃಢವಾಗಿದ್ದರೂ ಮಾನಸಿಕ ಚಿಂತೆ ತೋರಿಬಂದೀತು.

ಮಕರ: ಸಮಯ ಸಂದರ್ಭಕ್ಕೆ ಸರಿಯಾಗಿ ವ್ಯವಹಾರ ಕುಶಲತೆ. ಹೆಚ್ಚಿದ ಧನಾಗಮ. ಬಂಧುಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಯಶಸ್ಸು . ಆಸ್ತಿ ವಿಚಾರಗಳಲ್ಲಿ ಮುನ್ನಡೆ. ದಾಂಪತ್ಯ ಸುಖಕರ.

ಕುಂಭ: ಆಸ್ತಿ ವಿಚಾರಗಳಲ್ಲಿ ತಲ್ಲೀನತೆ. ನಿರೀಕ್ಷಿತ ಫ‌ಲಿತಾಂಶ ಸಂಭವ. ಉತ್ತಮ ಧನಸಂಪತ್ತು ವೃದ್ಧಿ. ವಾಕ್‌ಚತುರತೆಯಿಂದ ಜನಮನ್ನಣೆ. ಬಂಧುಮಿತ್ರರ ಸಹಾಯ ಸಹಕಾರ. ಗೃಹದಲ್ಲಿ ಸಂತಸದ ವಾತಾವರಣ. ಆರೋಗ್ಯ ವೃದ್ಧಿ.

ಮೀನ: ಹಠಮಾಡದೇ ವಿವೇಕದಿಂದ ಕಾರ್ಯ ಪ್ರವೃತ್ತರಾಗಿ ಯಶಸ್ಸು ಗಳಿಸಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ದೇಹಾಯಾಸ ಆಗದಂತೆ ಎಚ್ಚರ ವಹಿಸಿ. ನಿರೀಕ್ಷಿತ ಧನಾಗಮನ. ಮಕ್ಕಳಿಂದ ತೃಪ್ತಿ. ಸಾಂಸಾರಿಕವಾಗಿ ನೆಮ್ಮದಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

Advertisement

Udayavani is now on Telegram. Click here to join our channel and stay updated with the latest news.

Next