Advertisement

Horoscope: ಉದ್ಯೋಗ ಸ್ಥಾನದಲ್ಲಿ ಅನುಕೂಲದ ವಾತಾವರಣ ಇರಲಿದೆ

07:40 AM Oct 22, 2024 | Team Udayavani |

ಮೇಷ: ವಿವೇಕಯುತ ನಡೆಯಿಂದ ವ್ಯವಹಾರದಲ್ಲಿ ಯಶಸ್ಸು. ಉದ್ಯೋಗದಲ್ಲಿ ಪ್ರಾವೀಣ್ಯಕ್ಕೆ ಮನ್ನಣೆ. ಕಾರ್ಯಕ್ಷೇತ್ರ ವಿಸ್ತರಣೆಗೆ ಅವಸರ ಬೇಡ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಹೇರಳ ಲಾಭ.

Advertisement

ವೃಷಭ: ಅಪರಿಚಿತರಿಂದ ವ್ಯವಹಾರಕ್ಕೆ ಸಹಾಯ. ಉದ್ಯೋಗ ಸ್ಥಾನದಲ್ಲಿ ಅನುಕೂಲದ ವಾತಾವರಣ. ಅನಿರೀಕ್ಷಿತ ಮೂಲ ದಿಂದ ಧನಸಹಾಯ. ಊರಿನ ದೇವಾಲಯಕ್ಕೆ ಕುಟುಂಬಸಹಿತ ಭೇಟಿ. ಮಕ್ಕಳಿಗೆ ಸಿಹಿಸುದ್ದಿ.

ಮಿಥುನ: ಧನಸಹಾಯ ಕೈಸೇರಲು ಹಿತಶತ್ರುಗಳು ಅಡ್ಡಿ. ಸತ್ಕಾರ್ಯಕ್ಕೆ ದಾನ ಮಾಡಿದ ಉದ್ಯಮಿಗಳಿಗೆ ಪುರಸ್ಕಾರ. ಗೃಹೋತ್ಪನ್ನ ತಿನಿಸುಗಳಿಗೆ ಗ್ರಾಹಕರ ಹೆಚ್ಚಳ. ಗೃಹೋಪಯೋಗಿ ಸಾಮಗ್ರಿ ಖರೀದಿ.

ಕರ್ಕಾಟಕ: ಮಾನಸಿಕ ತುಮುಲದಿಂದ ಬಿಡುಗಡೆ. ಸರಕಾರಿ ಉದ್ಯೋಗಿಗಳಿಗೆ ಚಿಂತೆ. ಪ್ರತಿಕೂಲ ಹವೆಯಿಂದ ಹಿರಿಯರ ಆರೋಗ್ಯದ ಮೇಲೆ ಪರಿಣಾಮ. ವಿದ್ಯಾರ್ಥಿಗಳ ಅಧ್ಯಯನದಲ್ಲಿ ಹೆಚ್ಚು ಪರಿಶ್ರಮಕ್ಕೆ ಒತ್ತು.

ಸಿಂಹ: ಪೂರ್ವಾಪರ ವಿಮರ್ಶಿಸಿ ಕ್ರಿಯೆ ಗಿಳಿದರೆ ಯಶಸ್ಸು ಖಚಿತ. ಗುರು ದೇವತಾನು ಗ್ರಹಕ್ಕಾಗಿ ಪ್ರಾರ್ಥನೆಯಿಂದ ಶುಭಫ‌ಲ. ಕಟ್ಟಡ ನಿರ್ಮಾಪಕರಿಗೆ ಅನುಕೂಲ ವಾತಾವರಣ. ವಾಹನ ಚಾಲನೆಯಲ್ಲಿ ಎಚ್ಚರ.

Advertisement

ಕನ್ಯಾ: ಉದ್ಯೋಗದಲ್ಲಿ ಕೆಲವರಿಗೆ ಪದೋನ್ನತಿಯ ನಿರೀಕ್ಷೆ. ಅವಿವಾಹಿತ ಹುಡುಗರಿಗೆ ಯೋಗ್ಯ ಕನ್ಯೆಯರು ಸಿಗುವ ಸಾಧ್ಯತೆ. ಅಂತರ್ಮಖತೆ ಬೆಳೆಸಿಕೊಳ್ಳುವ ಪ್ರಯತ್ನಕ್ಕೆ ಗೆಲುವು. ಹಿರಿಯರ ಆರೋಗ್ಯ ಸುಧಾರಣೆ.

ತುಲಾ: ಉದ್ಯೋಗ ಸ್ಥಾನದಲ್ಲಿ ಹೊಸಬರ ಸೇರ್ಪಡೆ. ಉದ್ಯಮದ ಉತ್ಪನ್ನಗಳಿಗೆ ಸ್ವಲ್ಪ ಹಿನ್ನಡೆ. ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಸಾಧನೆ ಉತ್ತಮ. ಕೃಷಿ ಭೂಮಿಯಲ್ಲಿ ಉತ್ತಮ ಫ‌ಸಲಿನ ನಿರೀಕ್ಷೆ. ಸಾಂಸಾರಿಕ ಸಮಸ್ಯೆಗಳಿಂದ ಮುಕ್ತಿ.

ವೃಶ್ಚಿಕ: ತಾಳ್ಮೆಯ ವರ್ತನೆಯಿಂದ ಹಿರಿಯರ ಒಲವು ಪ್ರಾಪ್ತಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಸ್ಪಷ್ಟ ಸುಧಾರಣೆ. ಕುಶಲಕರ್ಮಿಗಳಿಗೆ ಉದ್ಯೋಗ ಯೋಗ. ನೆರೆಯವರೊಡನೆ ಬಾಂಧವ್ಯ ವೃದ್ಧಿಯಿಂದ ನೆಮ್ಮದಿ.

ಧನು: ಕೆಲವು ದಿನಗಳಿಂದ ಕಾಡುತ್ತಿದ್ದ ಸಮಸ್ಯೆ ಪರಿಹಾರ. ಹಿರಿಯರ ಅಪೇಕ್ಷೆ ಪಾಲನೆಯಿಂದ ಶ್ರೇಯಸ್ಸು. ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭಿಸುವ ಸಾಧ್ಯತೆ. ಉತ್ತರದಿಂದ ಕುಟುಂಬದ ಹಿತೈಷಿಯ ಆಗಮನ.

ಮಕರ: ಪಾಲುದಾರಿಕೆಯ ಸಣ್ಣ ವ್ಯವಹಾರ ಗಳಿಗೆ ಅನುಕೂಲ. ಹೊಸ ಅವಕಾಶಗಳಿಗಾಗಿ ಹುಡುಕಾಟ. ಸಹೋದ್ಯೋಗಿಗಳಿಂದ ಸಹಕಾರ. ಹಿರಿಯರ ಆರೋಗ್ಯ ಸ್ಥಿರ. ಮಹಿಳೆಯರ ಸ್ವಾವಲಂಬನೆ ಯೋಜನೆಗೆ ಉಲ್ಲೇಖಾರ್ಹ ಯಶಸ್ಸು.

ಕುಂಭ: ಧನ ಸದ್ವಿನಿಯೋಗಕ್ಕೆ ಅವಕಾಶ ಪ್ರಾಪ್ತಿ. ಸೇವಾಪರತೆಯಿಂದ ಸಮಾಜದಲ್ಲಿ ಗೌರವ ವೃದ್ಧಿ. ವೃತ್ತಿಪರರಿಗೆ ಸರ್ವತ್ರ ಶ್ಲಾಘನೆ. ಸಣ್ಣ ತೊಂದರೆಗಾಗಿ ವೈದ್ಯರ ಭೇಟಿ ಸಂಭವ. ವ್ಯಾಪಾರದಲ್ಲಿ ನಷ್ಟ ಆಗುವ ಸಂಭವ ಜಾಗ್ರತೆ ಇರಲಿ. ಮಾನಸಿಕ ದುಗುಡ ದೂರವಾಗಿ ಮನೆಮಂದಿಗೆ ಹರ್ಷ.

ಮೀನ: ಅಪರಿಮಿತ ವ್ಯಾವಹಾರಿಕ ಸಾಧನೆಯ ದಿನ. ಹಣಕಾಸು ವ್ಯವಹಾರ ಸ್ಥಿರ. ಸರಕಾರಿ ಇಲಾಖೆಗಳಲ್ಲಿ ಅನುಕೂಲಕರ ಸ್ಪಂದನ. ಹಳೆಯ ಗೆಳೆಯರ ಭೇಟಿ. ಗೃಹೋಪಯೋಗಿ ಸಾಮಗ್ರಿ ಖರೀದಿ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಮನೆಯವರೊಂದಿಗೆ ಸಣ್ಣ ಪ್ರಯಾಣ.

Advertisement

Udayavani is now on Telegram. Click here to join our channel and stay updated with the latest news.

Next