Advertisement

Daily Horoscope: ಪತ್ರಕರ್ತರಿಗೆ ರಾಜಕಾರಣಿಗಳ ಒತ್ತಡ, ಮಂಗಲ ಕಾರ್ಯದ ಸಿದ್ಧತೆ

07:23 AM Sep 29, 2023 | Team Udayavani |

ಮೇಷ: ಆದ್ಯತೆಯನ್ನು ಆರಿಸಿಕೊಳ್ಳುವುದರಲ್ಲಿನ ಗೊಂದಲವನ್ನು ನಿವಾರಿಸಿಕೊಳ್ಳಿ. ಉದ್ಯೋಗಸ್ಥ ರಿಂದ ಎಲ್ಲ ಕಾರ್ಯಗಳ ಯಶಸ್ವೀ ನಿರ್ವಹಣೆ. ಮೇಲಧಿ ಕಾರಿ ಗಳ ಮೆಚ್ಚುಗೆ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಕೈಸೇರಿ ನೆಮ್ಮದಿ. ಸಮಾಧಾನದ ಮನಸ್ಥಿತಿ.

Advertisement

ವೃಷಭ: ಉದ್ಯೋಗಸ್ಥರಿಗೆ ಆಶಾದಾಯಕ ಪರಿ ಸ್ಥಿತಿ. ಸರಕಾರಿ ನೌಕರರಿಗೆ ಶುಭ ವರ್ತಮಾನ. ಸಹಕಾರಿ ಕ್ಷೇತ್ರದವರಿಗೆ ಜವಾಬ್ದಾರಿ ಹೆಚ್ಚಳ. ವಾಹನ ನಿರ್ಮಾಣ ಸಂಸ್ಥೆಗಳಲ್ಲಿ ದುಡಿಯುವವರಿಗೆ ಮಾಲಿಕರಿಂದ ವಿಶೇಷ ಪ್ರೋತ್ಸಾಹ.

ಮಿಥುನ: ಸಂಸಾರದಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಸರಕಾರಿ ಉದ್ಯೋಗಸ್ಥರಿಗೆ ಹೆಚ್ಚುವರಿ ಜವಾಬ್ದಾರಿಗಳು. ಖಾಸಗಿ ಕ್ಷೇತ್ರದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ತವಕ. ಪತ್ರಕರ್ತರಿಗೆ ರಾಜಕಾರಣಿಗಳ ಒತ್ತಡ. ದೇವತಾರ್ಚನೆ ಹಾಗೂ ಮಂಗಲ ಕಾರ್ಯದ ಸಿದ್ಧತೆ.

ಕರ್ಕಾಟಕ: ಹವಾಮಾನ ವೈಪರೀತ್ಯದಿಂದ ಹಿರಿಯರ ಮತ್ತು ಮಕ್ಕಳ ಆರೋಗ್ಯದ ಮೇಲೆ ಕೊಂಚ ಪರಿಣಾಮ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ತಾಂತ್ರಿಕ ವಿಭಾಗಗಳಲ್ಲಿ ದುಡಿಯುವವರಿಗೆ ಕೆಲಸದ ಒತ್ತಡ. ಮೇಲಧಿಕಾರಿಗಳಿಂದ ಉತ್ತೇಜನ.

ಸಿಂಹ: ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಉತ್ಪಾದನೆಗಳಿಗೆ ಒಳ್ಳೆಯ ಬೇಡಿಕೆ. ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ. ಪ್ರತಿಭೆಗೆ ತಕ್ಕಂತೆ ಅವಕಾಶ ಲಭ್ಯ. ಸಮಾಜದಲ್ಲಿ ಸ್ಥಾನಮಾನ ವೃದ್ಧಿ. ಉತ್ತರದ ಕಡೆಯಿಂದ ವ್ಯವಹಾರ ವಿಸ್ತರಣೆಗೆ ಹೊಸ ಪ್ರಸ್ತಾವ.

Advertisement

ಕನ್ಯಾ: ಆಪ್ತರಿಂದ ನಿರೀಕ್ಷಿತ ಸಹಾಯ ಪ್ರಾಪ್ತಿ. ಸಹೋದ್ಯೋಗಿಯೊಬ್ಬರ ಸಹಾಯದಿಂದ ನಿರ್ದೇಶಿತ ಕಾರ್ಯ ಪೂರ್ತಿ. ಅಪರೂಪದ ಗೆಳೆಯರ ಗಮನ. ವಿದೇಶದಿಂದ ಶುಭ ವಾರ್ತೆ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸಮಾಚಾರ. ದೇವತಾರ್ಚನೆಯಲ್ಲಿ ಆಸಕ್ತಿ.

ತುಲಾ: ದೇವ ಮಂದಿರ ದರ್ಶನದಿಂದ ಮನಸ್ಸು ಸ್ಥಿಮಿತಕ್ಕೆ. ಉದ್ಯೋಗಸ್ಥರಿಂದ ಜವಾಬ್ದಾರಿಗಳ ಸಮರ್ಥ ನಿರ್ವಹಣೆ. ಸ್ವಂತ ವ್ಯವಹಾರಸ್ಥರಿಗೆ ಅನಿರೀಕ್ಷಿತ ಯಶಸ್ಸು. ಮಹಾಪುರುಷರ ದರ್ಶನ ಯೋಗ. ನೆರೆಯವರಿಂದ ಶುಭ ಸಮಾಚಾರ.

ವೃಶ್ಚಿಕ: ಮನೆಯಲ್ಲಿ ಹಿತಕರ ವಾತಾವರಣ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಅನುಕೂಲ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಪೀಠೊಪಕರಣ ನಿರ್ಮಾಪಕರಿಗೆ ಉತ್ತಮ ಬೇಡಿಕೆ. ಪಾಲುದಾರಿಕೆ ವ್ಯವಹಾರ ಕ್ಷೇತ್ರ ವಿಸ್ತರಣೆ.

ಧನು: ಅನಿರೀಕ್ಷಿತ ಧನಪ್ರಾಪ್ತಿ. ವ್ಯಾಪಾರ ವಿಸ್ತರಣೆಗೆ ಮಾತುಕತೆ. ವಸ್ತ್ರ, ಆಭರಣ, ಕಟ್ಟಡ ನಿರ್ಮಾಣ ಸಾಮಗ್ರಿಗಳ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಪೀಠೊಪಕರಣ ತಯಾರಿ, ಉಡುಪು ತಯಾರಿ ಮೊದ ಲಾದ ಕಸಬುದಾರರಿಗೆ ಬೇಡಿಕೆ ಪೂರೈಸಲಾರದಷ್ಟು ಕೆಲಸ.

ಮಕರ: ಎಂದಿನಂತೆ ಕಾರ್ಯದ ಒತ್ತಡ. ಸಹನೆ, ಜಾಣತನಗಳಿಂದ ಕಾರ್ಯಸಾಧನೆ. ಸಹೋದ್ಯೋಗಿಗಳಿಂದ ಅಪೇಕ್ಷಿತ ಸಹಕಾರ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ರೂಪದರ್ಶಿಗಳ ವ್ಯವ ಹಾರ ದಲ್ಲಿ ಹಿನ್ನಡೆ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ.

ಕುಂಭ: ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸೇವಾ ಕಾರ್ಯಗಳ ವಿಸ್ತರಣೆಗೆ ಸಮಾನ ಮನಸ್ಕ ರಿಂದ ಸಕ್ರಿಯ ಸಹಕಾರ. ಶಿಕ್ಷಣ ಕ್ಷೇತ್ರ ದಲ್ಲಿ ದುಡಿಯು ವವರಿಗೆ ಹೊಸ ಜವಾಬ್ದಾರಿಗಳು ಸನ್ನಿಹಿತ. ಸರಕಾರಿ ನೌಕರರಿಗೆ ವರ್ಗಾವಣೆಯ ಚಿಂತೆ. ಹಿರಿಯ ಅಧಿಕಾರಿ ಗಳಿಗೆ ರಾಜಕಾರಣಿಗಳ ಕಾಟ.

ಮೀನ: ನಿಶ್ಚಿಂತೆಯ ದಿನವೆನ್ನಬಹುದು. ಎಣಿಸಿದ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತವೆ. ಉದ್ಯೋಗಸ್ಥರಿಗೆ ನಿರಾತಂಕವಾದ ಸ್ಥಿರ ವಾತಾವರಣ. ವ್ಯವಹಾರಸ್ಥರಿಗೆ ಸರಕಾರಿ ಅಧಿಕಾರಿಗಳಿಂದ ಮತ್ತು ನೌಕರರಿಂದ ಒಳ್ಳೆಯ ರೀತಿಯಲ್ಲಿ ಸ್ಪಂದನ. ಕೆಲವು ವರ್ಗಗಳ ವ್ಯವಹಾರಸ್ಥರಿಗೆ ಅನಿರೀಕ್ಷಿತ ರೀತಿಯಲ್ಲಿ ಪ್ರಗತಿ. ವ್ಯವಹಾರ ನಿರ್ವಹಣೆಯಲ್ಲಿ ಸಂಗಾತಿಯಿಂದ ಸಕ್ರಿಯ ಸಹಕಾರ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next