Advertisement

Daily Horoscope: ಉದ್ಯೋಗಸ್ಥರಿಗೆ ಮೇಲಿನವರಿಂದ ಹೊಸ ಜವಾಬ್ದಾರಿ ನೀಡಿಕೆ

07:30 AM Sep 10, 2023 | Team Udayavani |

ಮೇಷ: ಅಭಿವೃದ್ಧಿಯ ಪಥದಲ್ಲಿ ಕ್ಷಿಪ್ರಗತಿಯ ನಡಿಗೆ. ಉದ್ಯೋಗಸ್ಥರ ಕಾರ್ಯಕ್ಕೆ ಪ್ರಶಂಸೆ. ವ್ಯವಹಾರ ಕ್ಷೇತ್ರದಲ್ಲಿ ಜಯ. ಹಿರಿಯರ ಆರೋಗ್ಯದ ಮೇಲೆ ಹವಾಮಾನ ಏರುಪೇರಿನ ಪರಿಣಾಮ. ಪಾಲುದಾರಿಕೆ ವ್ಯವಹಾರದಲ್ಲಿ ಮುನ್ನಡೆ.

Advertisement

ವೃಷಭ: ಮನೆಯಲ್ಲಿ ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ಉತ್ತಮ. ದೇವತಾ ರ್ಚನೆಯಿಂದ ವಿಘ್ನಗಳ ಹಾಗೂ ಸಂಕಷ್ಟಗಳ ನಿವಾರಣೆ. ಸಹೋದ್ಯೋಗಿಗಳ ಸಹಕಾರ. ಕೃಷ್ಯುತ್ಪನ್ನ ಮಾರಾಟಗಾರರಿಗೆ ಶುಭ.

ಮಿಥುನ: ದೈವಪ್ರೀತಿ, ಆತ್ಮವಿಶ್ವಾಸಗಳಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುವುದರಲ್ಲಿ ಅನುಮಾನವಿಲ್ಲ. ಉದ್ಯೋಗಸ್ಥರಿಗೆ ಮೇಲಿನವರಿಂದ ಹೊಸ ಜವಾಬ್ದಾರಿ ನೀಡಿಕೆ. ಕಟ್ಟಡ ನಿರ್ಮಾಣ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ.

ಕರ್ಕಾಟಕ: ಕೌಟುಂಬಿಕ ಸಮಸ್ಯೆಗೆ ಸೂಕ್ತ ಪರಿಹಾರ ಲಭಿಸಿ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ. ಉದ್ಯೋಗಸ್ಥರಿಗೆ ಪದೋನ್ನತಿ ಸಂಭವ. ವ್ಯವಹಾರಸ್ಥರಿಗೆ ಅಕಸ್ಮಾತ್‌ ಲಾಭ. ದೀರ್ಘಾವಧಿ ಹೂಡಿಕೆಗಳಿಂದ ಲಾಭ.

ಸಿಂಹ: ಪ್ರಗತಿ ಯಾತ್ರೆ ನಿರಾತಂಕ. ನಿರಂತರ ಚಟುವಟಿಕೆಗಳ ನಡುವೆಯೂ ಹೊಸ ಪ್ರಸ್ತಾವಗಳ ಸ್ವೀಕೃತಿಗೆ ಹಿಂಜರಿಯದ ಮನಸ್ಥಿತಿ. ಉತ್ತರದಿಂದ ಶುಭವಾರ್ತೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಲಾಭ. ಸುಖಕರ ಅನುಭವಗಳ ದಿನ.

Advertisement

ಕನ್ಯಾ: ಜಾಣತನ ಮತ್ತು ಸಹನೆಯಿಂದ ಉದ್ಯೋಗ ಕ್ಷೇತ್ರ ಹಾಗೂ ಮನೆಯಲ್ಲಿ ವಾತಾವರಣ ತಿಳಿಯಾಗಿರುವಂತೆ ನೋಡಿಕೊಳ್ಳಿ. ಆಶ್ರಿತರ ಯೋಗಕ್ಷೇಮದ ಕಡೆಗೆ ಹೆಚ್ಚು ಗಮನ ಕೊಡಿ. ಹತ್ತಿರದ ದೇವತಾ ಸನ್ನಿಧಿಯನ್ನು ಸಂದರ್ಶಿಸುವ ಯೋಗ.

ತುಲಾ: ದೇವತಾರಾಧನೆಯಿಂದ ಮನಸ್ಸಿನ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯ ತ್ನಿಸಿರಿ. ಉದ್ಯೋಗಸ್ಥರಿಗೆ, ಕುಟುಂಬಸ್ಥರಿಗೆ ದಿನದ ಕೊನೆ ಯಲ್ಲಿ ಶುಭವಾರ್ತೆ. ಹಣಕಾಸು ವ್ಯವಹಾರ ನಿರ್ವಹಿಸು ವವರು ಎಚ್ಚರವಾಗಿರಬೇಕು. ದೇವಿ ಆರಾಧನೆ ಮಾಡಿ.

ವೃಶ್ಚಿಕ: ದೇವತಾರಾಧನೆಯಲ್ಲಿ ವಿಶೇಷ ಆಸಕ್ತಿ. ಗೃಹಿಣಿಯರಿಂದ ವಸ್ತ್ರಾಭರಣ ಖರೀದಿ. ಉದ್ಯೋಗಸ್ಥರಿಂದ ಸವಾಲುಗಳ ಯಶಸ್ವೀ ನಿರ್ವಹಣೆ. ಗೃಹೋದ್ಯಮಗಳು, ಗ್ರಾಮೋದ್ಯೋಗ, ಖಾದ್ಯ ಪದಾರ್ಥಗಳ ವಿತರಣೆ‌.

ಧನು: ಕಾರ್ಯದಲ್ಲಿ ಪರಿಪೂರ್ಣತೆ ಸಾಧಿಸುವ ಪ್ರಯತ್ನದಲ್ಲಿ ಯಶಸ್ಸು. ಆರೋಗ್ಯ ಸುಧಾರಣೆ. ಹೂಡಿಕೆ ಮಾಡುವುದರಿಂದ ಶುಭ. ತಾತ್ಕಾಲಿಕ ಆತಂ ಕಗಳು ದೂರ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಃಪ್ರಾಪ್ತಿ. ಕುಟುಂಬದಲ್ಲಿ ನೆಮ್ಮದಿ.

ಮಕರ: ಮಕ್ಕಳ ಭವಿಷ್ಯದ ಕುರಿತಾದ ಚಿಂತೆಗೆ ಪರಿಹಾರ ಲಭ್ಯ. ಆಪ್ತರಿಂದ ಕಾರ್ಯಸಾಧ್ಯ ಸಲಹೆ. ಉದ್ಯೋಗ, ವ್ಯವಹಾರಗಳಲ್ಲಿ ಪೈಪೋಟಿ ಎದುರಿಸುವುದರಲ್ಲಿ ಯಶಸ್ವಿಯಾಗುವಿರಿ. ಕೃಷ್ಯಾಧಾರಿತ ಉದ್ಯಮಗಳಲ್ಲಿ ಆಸಕ್ತರಿಗೆ ಶುಭ ಸಮಾಚಾರ.

ಕುಂಭ: ನಿಮ್ಮ ಆಸಕ್ತಿಯ ಕ್ಷೇತ್ರವಾಗಿರುವ ಸಮಾಜ ಸೇವೆಯಲ್ಲಿ ಹೊಸ ಅವಕಾಶಗಳು ಲಭ್ಯ.ವಿವಾದಗಳಿಂದ ದೂರವುಳಿಯುವ ಪ್ರಯತ್ನ. ಸ್ವಂತದ ಹಾಗೂ ಮನೆಯವರ ಆರೋಗ್ಯ ಗಮನಿಸಿ. ದೂರದ ಅತಿಥಿಗಳ ಆಗಮನ.

ಮೀನ: ಮನೆಯಲ್ಲಿ ಎಲ್ಲರ ಆರೋಗ್ಯ ಸಮಾಧಾನಕರ. ಉದ್ಯೋಗ ದಲ್ಲಿ ನೆಮ್ಮದಿ.ವ್ಯವಹಾರದಲ್ಲಿ ಸುಧಾರಣೆ.ಹಣಕಾಸು ಪರಿಸ್ಥಿತಿ ಕೊಂಚ ಉತ್ತಮ. ಹಿರಿಯರ ಅಪೇಕ್ಷೆ ಈಡೇರಿಸುವ ಪ್ರಯತ್ನದಲ್ಲಿ ಯಶಸ್ಸು ಲಭ್ಯ. ಕುಟುಂಬದ ಬಂಧುಗಳ ಆಗಮನ ನಿರೀಕ್ಷೆ. ಉದ್ಯೋಗ ಅರಸುತ್ತಿರುವವರಿಗೆ ಯಶಸ್ಸು. ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಪ್ರಯತ್ನ ಅವಶ್ಯ.

Advertisement

Udayavani is now on Telegram. Click here to join our channel and stay updated with the latest news.

Next