Advertisement

Daily Horoscope: ಸರಕಾರಿ ನೌಕರರಿಗೆ ಸಾಮಾನ್ಯ ಉತ್ಸಾಹ, ವರ್ಗಾವಣೆಯ ಚಿಂತೆ

07:27 AM Oct 30, 2023 | Team Udayavani |

ಮೇಷ: ಮಂದಗತಿಯಲ್ಲಿ ದಿನಾರಂಭ. ಉದ್ಯೋಗ ಸ್ಥಾನದಲ್ಲಿ ಸಹಜ ವಾತಾವರಣ. ಸರಕಾರಿ ನೌಕರರಿಗೆ ಸಾಮಾನ್ಯ ಉತ್ಸಾಹ. ವರ್ಗಾವಣೆಯ ಚಿಂತೆ. ಕೃಷಿಕರಿಗೆ ಹೊಸ ಪ್ರಯೋಗದ ಆಸಕ್ತಿ. ಹೈನುಗಾರಿಕೆ ವೃದ್ಧಿಗೆ ಪ್ರೋತ್ಸಾಹ. ನಿವೇಶನ ಖರೀದಿಗೆ ಚಿಂತನೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ.

Advertisement

ವೃಷಭ: ದಿನವಿಡೀ ಕುಗ್ಗದ ಉತ್ಸಾಹ. ಉದ್ಯೋಗದಲ್ಲಿ ಪೂರ್ಣ ಮನಸ್ಸಿನಿಂದ ಪಾಲುಗೊಳ್ಳುವಿಕೆ. ಮೇಲಧಿಕಾರಿಗಳಿಗೆ ಹರ್ಷ. ಸ್ವಂತ ಉದ್ಯಮದ ನೌಕರರಿಗೆ ಉತ್ತೇಜನ. ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಹೊಸ ಪಾಲುದಾರರ ಸೇರ್ಪಡೆಗೆ ಸಲಹೆ. ಹಿರಿಯ ಬಂಧುಗಳ ಭೇಟಿ.

ಮಿಥುನ: ಗೃಹದಲ್ಲಿ ಶಾಂತಿಗಾಗಿ ದೇವತಾ ಪ್ರಾರ್ಥನೆ. ಹಿರಿಯ ಬಂಧುಗಳ ಆಗಮನ. ಉದ್ಯೋಗದ ಸ್ಥಾನದಲ್ಲಿ ಗೌರವ. ಅಧ್ಯಾತ್ಮ ಸಾಧನೆಯಲ್ಲಿ ಮನಸ್ಸು ಲೀನ. ಸ್ವಂತ ಉದ್ಯಮದಲ್ಲಿ ಮಧ್ಯಮ ಯಶಸ್ಸು. ಉತ್ಪನ್ನಗಳ ಮಾರಾಟಕ್ಕೆ ಪೈಪೋಟಿ. ಕುಶಲಕರ್ಮಿಗಳಿಗೆ ಬೇಡಿಕೆ.

ಕರ್ಕಾಟಕ: ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ. ಹೊಸ ಉದ್ಯೋಗ ಅರಸುವ ಪ್ರಯತ್ನದಲ್ಲಿ ಪ್ರಗತಿ. ಸ್ವಂತ ಉದ್ಯಮದ ಅಭಿವೃದ್ಧಿಗೆ ಸಮಾಲೋಚನೆ. ಉತ್ಪನ್ನಗಳ ಮಾರಾಟ ಜಾಲ ವಿಸ್ತರಣೆ. ಉತ್ತರ ದಿಕ್ಕಿನಲ್ಲಿರುವ ಬಂಧುಗಳಿಂದ ಶುಭವಾರ್ತೆ.

ಸಿಂಹ: ಉದ್ಯೋಗ, ಉದ್ಯಮ ಎರಡಲ್ಲೂ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ. ಪದೋನ್ನತಿ ಸಂಭವ. ಸರಕಾರಿ ಅಧಿಕಾರಿಗಳಿಗೆ ಇಷ್ಟದ ಸ್ಥಳಕ್ಕೆ ವರ್ಗಾವಣೆ. ದೀರ್ಘ‌ಕಾಲದಿಂದ ಕಾಯುತ್ತಿದ್ದ ಸಂದೇಶ ಆಗಮನ. ಸ್ವಂತ ಉದ್ಯಮ ದಾಪುಗಾಲಿನಲ್ಲಿ ಪ್ರಗತಿ.

Advertisement

ಕನ್ಯಾ: ಉದ್ಯೋಗದಲ್ಲಿ ಸ್ಥಿರವಾಗಿ ನೆಲೆಗೊಳ್ಳುವ ಪ್ರಯತ್ನ. ಕಾರ್ಯಕ್ಷಮತೆ ವೃದ್ಧಿಗೆ ಸಾಧನೆ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಕೃಷಿ ಕ್ಷೇತ್ರಕ್ಕೆ ಪ್ರವೇಶಿಸುವುದರಿಂದ ಅನುಕೂಲ. ಔಷಧ ವ್ಯಾಪಾರಿಗಳಿಗೆ ಮಧ್ಯಮ ಲಾಭ. ವಸ್ತ್ರ, ಆಭರಣ ಖರೀದಿಯಲ್ಲಿ ಆಸಕ್ತಿ. ಹೈನುಗಾರಿಕೆ ಕೈಗೊಳ್ಳುವುದರಿಂದ ಶುಭ.

ತುಲಾ: ಮನಸ್ಸನ್ನು ಸ್ಥಿರವಾಗಿ ನೆಲೆಗೊಳಿಸುವ ಪ್ರಯತ್ನದಲ್ಲಿ ಮುನ್ನಡೆ. ಉದ್ಯೋಗದಲ್ಲಿ ಸಣ್ಣ ಪದೋನ್ನತಿ. ಸರಕಾರಿ ನೌಕರರಿಗೆ ವರ್ಗಾವಣೆಯ ಭೀತಿ. ಉದ್ಯಮ ಕ್ಷೇತ್ರದಲ್ಲಿ ಪೈಪೋಟಿ ಎದುರಿಸಲು ಯೋಗ್ಯ ಸಿದ್ಧತೆ. ವಸ್ತ್ರ, ಆಭರಣ, ಹೂ ಹಣ್ಣು ವ್ಯಾಪಾರಿಗಳಿಗೆ ಹೇರಳ ಲಾಭ.

ವೃಶ್ಚಿಕ: ಉದ್ಯೋಗದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫ‌ಲ, ಪ್ರತಿಭೆಗೆ ತಕ್ಕ ಗೌರವ ಪ್ರಾಪ್ತಿ. ಉದ್ಯಮದ ಪಾಲು ದಾರಿಕೆಯಲ್ಲಿ ಪಾರದರ್ಶಕತೆಗೆ ಪ್ರಾಶಸ್ತ್ಯ. ಹೊಸಬರ ಸೇರ್ಪಡೆ ಸಂಭವ. ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ಹೆಚ್ಚಳ, ಮಾರಾಟ ಜಾಲ ವಿಸ್ತರಣೆ. ಮಕ್ಕಳ ಉದ್ಯಮಗಳ ಪ್ರಗತಿ.

ಧನು: ಹೊಂದಾಣಿಕೆಯ ಬದುಕಿನ ಉದ್ಯೋಗದಲ್ಲಿ ಮುನ್ನಡೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಸರಕಾರಿ ನೌಕರರಿಗೆ ಪದೋನ್ನತಿ. ಮನೆಯಲ್ಲಿ ದೇವತಾರ್ಚನೆಗೆ ಚಿಂತನೆ. ಉದ್ಯೋಗ ಅರಸುತ್ತಿರುವವರಿಗೆ ಹೊಸ ಅವಕಾಶಗಳು ಗೋಚರ. ಸ್ವಂತ ಉದ್ಯಮ ಮಂದಗತಿಯಲ್ಲಿ ಪ್ರಗತಿ.

ಮಕರ: ಉದ್ಯೋಗ ಸ್ಥಾನದಲ್ಲಿ ಒತ್ತಡ ಇಳಿಕೆ. ಉದ್ಯೋಗ ಬದಲಾವಣೆಯ ಪ್ರಯತ್ನ ಮುಂದುವರಿಕೆ. ದೇವತಾ ಸಾನ್ನಿಧ್ಯದಲ್ಲಿ ಪ್ರಾರ್ಥನೆ. ಸಹೋ ದ್ಯೋಗಿಗಳೊಂದಿಗೆ ಸಂತೋಷ ಆಚರಣೆ. ತಾಯಿ ಕಡೆಯ ಬಂಧುಗಳ ಭೇಟಿ. ಹೊಸ ಗೆಳೆಯರ ಪರಿಚಯ.

ಕುಂಭ: ದೀರ್ಘ‌ ಪ್ರಯತ್ನದ ಬಳಿಕ ಕೈಗೂಡಿದ ಆಕಾಂಕ್ಷೆ. ಸಂಗ್ರಹಿಸಿದ ಸಂಪತ್ತಿನ ಸದ್ವಿನಿಯೋಗಕ್ಕೆ ಯೋಜನೆ. ಕುಟುಂಬದ ಸದಸ್ಯರೆಲ್ಲರ ಸಹಕಾರದಿಂದ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು. ಹಿರಿಯ ಬಂಧುಗಳ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ.

ಮೀನ: ಶುಭಫ‌ಲಗಳ ದಿನ. ಉದ್ಯೋಗ ಸ್ಥಾನದಲ್ಲಿ ಸಹಕಾರ. ಮೇಲಧಿಕಾರಿಗಳಿಂದ ಮೆಚ್ಚುಗೆಯ ನುಡಿಗಳು. ಸರಕಾರಿ ಅಧಿಕಾರಿಗಳು ಮತ್ತು ನೌಕರರಿಂದ ಸಕಾಲಿಕ ಸ್ಪಂದನ. ಗ್ರಾಹಕರಿಂದ ಮೆಚ್ಚುಗೆಯ ನುಡಿಗಳು. ಸಾಮೂಹಿಕ ಕ್ಷೇತ್ರದಲ್ಲಿ ಇನ್ನಷ್ಟು ಹೊಣೆಗಾರಿಕೆಗಳನ್ನು ವಹಿಸಿಕೊಳ್ಳುವ ಅನಿವಾರ್ಯತೆ. ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ. ಸಂಗಾತಿ ಮತ್ತು ಮಕ್ಕಳ ಪೂರ್ಣ ಸಹಕಾರ.

Advertisement

Udayavani is now on Telegram. Click here to join our channel and stay updated with the latest news.

Next