Advertisement

Daily Horoscope: ಪ್ರಾಪಂಚಿಕ ಸಮಸ್ಯೆ ನಿವಾರಣೆಗೆ ದೈವಕ್ಕೆ ಮೊರೆ, ಉದ್ಯೋಗ ಸ್ಥಾನದಲ್ಲಿ ಶುಭ

07:25 AM Oct 28, 2023 | Team Udayavani |

ಮೇಷ: ಶುಭಫ‌ಲಗಳ ದಿನ. ದೈವಾನುಗ್ರಹ ಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ಶುಭ. ಮಿತ್ರವರ್ಗದವರಿಂದ ಶುಭ ಸಮಾಚಾರ. ಬಂಧುಗಳ ಭೇಟಿ. ಸ್ವಂತ ಉದ್ಯಮ ಅಭಿವೃದ್ಧಿ ಪಥದಲ್ಲಿ. ಆಪ್ತರ ಸಹಕಾರ. ಉತ್ಪನ್ನಗಳ ಮಾರುಕಟ್ಟೆ ಜಾಲ ವಿಸ್ತರಣೆ. ಕಾರ್ಯಕ್ಷೇತ್ರದಲ್ಲಿದ್ದ ವಿಘ್ನ ನಿವಾರಣೆ.

Advertisement

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಕಾರ್ಯಗಳು ನಿರಾತಂಕ.ಎಲ್ಲರ ನಡುವೆ ಸೌಹಾರ್ದ. ಸ್ವಂತ ಉದ್ಯಮದ ವ್ಯವಹಾರ ಕ್ಷೇತ್ರ ವಿಸ್ತರಣೆ. ಆಡಳಿತವರ್ಗ- ನೌಕರರ ನಡುವೆ ಬಾಂಧವ್ಯ ವೃದ್ಧಿ.ವಿತ್ತ ಸಂಸ್ಥೆಯ ಆರ್ಥಿಕ ನೆರವು ಸಕಾಲದಲ್ಲಿ ಲಭ್ಯ.

ಮಿಥುನ: ಪ್ರಾಪಂಚಿಕ ಸಮಸ್ಯೆ ನಿವಾರಣೆಗೆ ದೈವಕ್ಕೆ ಮೊರೆ. ಉದ್ಯೋಗ ಸ್ಥಿತಿ ಸ್ಥಿರ. ಸ್ವಂತ ಉದ್ಯಮ ಆರಂಭ ಕಷ್ಟಸಾಧ್ಯ. ಹಳೆಯ ಉದ್ಯಮಗಳಿಗೆ ಒಳ್ಳೆ ಕಾಲ ಮುಗಿದಿಲ್ಲ. ನೂತನ ಗೃಹ ನಿರ್ಮಾಣ ಯೋಜನೆಗೆ ಚಾಲನೆ. ಪರ್ಯಾಯ ಚಿಕಿತ್ಸೆಯ ಮೂಲಕ ಹಳೆಯ ಸಮಸ್ಯೆಗೆ ಪರಿಹಾರ.

ಕರ್ಕಾಟಕ: ಅನವಶ್ಯ ಚಿಂತೆಯನ್ನು ದೂರವಿಟ್ಟರೆ ಕ್ಷೇಮ. ಬಂಧುವರ್ಗದಲ್ಲಿ ವಿವಾಹ ಯೋಗ. ಉದ್ಯೋಗದಲ್ಲಿ ಸ್ಥಿರತೆ. ಸಹೋದ್ಯೋಗಿ ವರ್ಗದಲ್ಲಿ ನೆಮ್ಮದಿ. ಸ್ವಂತ ಉದ್ಯಮದ ಅಭಿವೃದ್ಧಿ. ಉತ್ಪನ್ನಗಳ ಜನಪ್ರಿಯತೆ ಹೆಚ್ಚಳ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.

ಸಿಂಹ: ಕ್ಷಿಪ್ರಗತಿಯ ವೃದ್ಧಿಯ ದಿನ. ಆಪ್ತವರ್ಗದ ಸಹಕಾರ. ಉದ್ಯೋಗದಲ್ಲಿ ಸಾಧನೆಗಾಗಿ ಮೇಲಿನವರಿಂದ ಪ್ರಶಂಸೆ. ಸ್ವಂತ ಉದ್ಯಮದ ವ್ಯವಹಾರ ಕ್ಷೇತ್ರ ವಿಸ್ತರಣೆಯೊಂದಿಗೆ ಉತ್ಪನ್ನಗಳ ಗುಣಮಟ್ಟ ಏರಿಸಲು ಸರ್ವಪ್ರಯತ್ನ. ಮಕ್ಕಳ ಕಿರಿಯ ಉದ್ಯಮ ಪ್ರಗತಿಯ ಪಥದಲ್ಲಿ.

Advertisement

ಕನ್ಯಾ: ಅಕಸ್ಮಾತ್‌ ಭೇಟಿಯಾದ ಗೆಳೆಯನ ಸಲಹೆ ಹೂಡಿಕೆಗೆ ಸಹಕಾರಿ. ಉದ್ಯೋಗದಲ್ಲಿ ಸ್ಥಿರವಾಗಿ ನೆಲೆಗೊಳ್ಳಲು ಯೋಜನೆ. ಹಿರಿಯರ ಸಲಹೆ ಪಾಲನೆಯಿಂದ ಕ್ಷೇಮ.ಉದ್ಯೋಗ ಅರಸುತ್ತಿರುವವರಿಗೆ ಹೊಸ ಅವಕಾಶಗಳು ಗೋಚರ. ಸ್ವಂತ ಉದ್ಯಮಕ್ಕೆ ಪಾಲುದಾರರ ಸೇರ್ಪಡೆ.

ತುಲಾ: ಅಸಂಸ್ಕೃತರನ್ನು ನಿರ್ಲಕ್ಷಿಸುವುದರಿಂದ ಕ್ಷೇಮ. ಉದ್ಯೋಗದಲ್ಲಿ ಸುರಕ್ಷೆಯ ಸ್ಥಿತಿ. ಸಂಸಾರದಲ್ಲಿ ಶಾಂತಿ, ಸಾಮರಸ್ಯದ ವಾತಾವರಣ. ಗೃಹೋತ್ಪನ್ನಗಳ ಜನಪ್ರಿಯತೆ ವೃದ್ಧಿ. ದೀರ್ಘ‌ಕಾಲೀನ ಹೂಡಿಕೆಗಳಿಂದ ಲಾಭ. ಸರಕಾರಿ ಯೋಜನೆಗಳ ಲಾಭ ಪಡೆಯುವ ಪ್ರಯತ್ನ ವಿಫ‌ಲ.

ವೃಶ್ಚಿಕ: ಶುಭದಿನ. ಸಂಸಾರದಲ್ಲಿ ಹರ್ಷದ ವಾತಾವರಣ. ಉದ್ಯೋಗಸ್ಥರಿಗೆ ಶುಭಫ‌ಲ ಪ್ರಾಪ್ತಿ. ಮಕ್ಕಳಿಗೆ ಉದ್ಯೋಗ, ವ್ಯವಹಾರ ಎರಡರಲ್ಲೂ ಪ್ರಗತಿ. ವಸ್ತ್ರ, ಆಭರಣ ಖರೀದಿ.ವಾಸದ ಕಟ್ಟಡ ನವೀಕರಣ ಹಾಗೂ ವಿಸ್ತರಣೆಗೆ ಯೋಜನೆ. ಹೊಸ ನಿವೇಶನ ಖರೀದಿಗೆ ಚಿಂತನೆ.

ಧನು: ನಿಶ್ಚಿಂತೆಯ ದಿನ. ಉದ್ಯೋಗ ಸ್ಥಾನದಲ್ಲಿ ಕಿರಿಕಿರಿ ಇಲ್ಲ. ಸಹೋದ್ಯೋಗಿಗಳಿಂದ ಸಹಕಾರ. ಹಳೆಯ ಒಡನಾಡಿಯೊಬ್ಬರ ಭೇಟಿಯಿಂದ ಸಮಾಧಾನ. ಸಂಗಾತಿಯ ಆರೋಗ್ಯ ಸುಧಾರಣೆ. ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಸಿದ್ಧತೆ. ಕಾಡು ಪ್ರಾಣಿಗಳಿಂದ ರಕ್ಷಣೆಗೆ ಯೋಜನೆ.

ಮಕರ: ಉದ್ಯೋಗ ಸ್ಥಾನದಲ್ಲಿ ಶಾಂತ ವಾತಾವರಣ. ಸಹೋದ್ಯೋಗಿಗಳಿಂದ ಉಪ ಯುಕ್ತ ಸಲಹೆ. ಸರಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ನೆಮ್ಮದಿಯ ದಿನ. ಔಷಧ ವ್ಯಾಪಾರಿಗಳಿಗೆ ಶುಭದಿನ. ವಸ್ತ್ರ, ಆಭರಣ ಖರೀದಿಗೆ ಚಿಂತನೆ.ಹೊಸ ನಿವೇಶನದಲ್ಲಿ ಜಲಮೂಲ ಲಭ್ಯ.

ಕುಂಭ: ಆದಾಯ ವೃದ್ಧಿ. ಉದ್ಯೋಗ ಸ್ಥಾನದಲ್ಲಿ ಅನುಕೂಲಕರ ವಾತಾವರಣ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ದೊಡ್ಡ ಗಾತ್ರದಲ್ಲಿ ಆದಾಯ ಹೆಚ್ಚಳ. ಮನೆಯಲ್ಲಿ ಹಿರಿಯರ ಆರೋಗ್ಯ ಸುಧಾರಣೆ. ವ್ಯವಹಾರ ನಿರ್ವಹಣೆಯಲ್ಲಿ ಸಂಗಾತಿಯ ಪೂರ್ಣ ಸಹಕಾರ.

ಮೀನ: ಕಗ್ಗಂಟುಗಳನ್ನು ಒಂದೊಂದಾಗಿ ಬಿಡಿಸುವ ಯತ್ನದಲ್ಲಿ ಯಶಸ್ವಿಯಾಗುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ. ಸರಕಾರಿ ಕಾರ್ಯಾಲಯಗಳಲ್ಲಿ ಉತ್ತಮ ಸ್ಪಂದನೆ. ಹೊಸ ವೃತ್ತಿ ಸೇರ್ಪಡೆಯ ಬಗ್ಗೆ ಆಸಕ್ತರೊಂದಿಗೆ ಸಮಾಲೋಚನೆ. ಗುರು ಸ್ಥಾನಕ್ಕೆ ಭೇಟಿ ಸಂಭವ. ಇಷ್ಟದೇವತಾರ್ಚನೆಯಿಂದ ಹಳೆಯ ಸಮಸ್ಯೆ ಪರಿಹಾರ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next