Advertisement

Daily Horoscope: ಆಪತ್ತುಗಳಿಂದ ವಿಮೋಚನೆ, ಮನೋಬಲ ವರ್ಧನೆಗೆ ಆಪ್ತರ ಸಹಾಯ

07:22 AM Oct 13, 2024 | Team Udayavani |

ಮೇಷ: ನಾಳೆಯ ಕುರಿತು ಯೋಚಿಸದೆ ಆರಾಮವಾಗಿರಿ. ದಿನವಿಡೀ ಕೆಲಸ ಕಾರ್ಯಗಳಲ್ಲಿ ಮಗ್ನತೆ. ಸಾಮಾಜಿಕ ವ್ಯವಹಾರಗಳ ಚಿಂತೆ. ಬಂಧುವರ್ಗದವರಿಂದ ಶುಭ ಸಮಾಚಾರ. ಸೇವಾ ಕಾರ್ಯಕ್ರಮಗಳಲ್ಲಿ ಭಾಗಿ.

Advertisement

ವೃಷಭ: ಅನೇಕ ಸಂತೋಷದ ಘಟನೆಗಳು ನಡೆಯುವ ದಿನ. ಸಹೋದ್ಯೋಗಿಗಳೊಡನೆ ಕೌಟುಂಬಿಕ ಸಮ್ಮಿಲನ. ಉದ್ಯಮ ಸ್ಥಾನಕ್ಕೆ ಹೊಸ ವ್ಯವಸ್ಥೆಗೆ ಪ್ರಯತ್ನ. ವಿದೇಶದಲ್ಲಿರುವ ಬಂಧುಗಳೊಡನೆ ದೂರವಾಣಿ ಸಂಭಾಷಣೆ. ಸಾಮಾಜಿಕ ಕಾರ್ಯಕ್ಕೆ ಪ್ರೋತ್ಸಾಹ.

ಮಿಥುನ: ಆಪತ್ತುಗಳಿಂದ ವಿಮೋಚನೆ. ಮನೋಬಲ ವರ್ಧನೆಗೆ ಆಪ್ತರ ಸಹಾಯ. ಧಾರ್ಮಿಕ ನಾಯಕರ ಭೇಟಿ.ಉದ್ಯೋಗಾನ್ವೇಷಿಗಳಿಗೆ ಶುಭಕಾಲ. ಊರಿನ ಶಿವಾಲಯಕ್ಕೆ ಸಂದರ್ಶನ. ಮದುವೆ ಮಾತುಕತೆಗಾಗಿ ಪ್ರಯಾಣ.

ಕರ್ಕಾಟಕ: ಸಾಮಾಜಿಕ ರಂಗದ ಚಟುವಟಿಕೆ ಗಳಲ್ಲಿ ಆಸಕ್ತಿ. ಸಿವಿಲ್‌ ಎಂಜಿನಿಯರ್‌ಗೆ ಕೆಲಸದ ಒತ್ತಡವಸ್ತ್ರ ಹಾಗೂ ಖಾದ್ಯವಸ್ತು ವ್ಯಾಪಾ ರಿಗಳಿಗೆ ಲಾಭ. ಊರಿನ ದೇವಾಲಯಕ್ಕೆ ಭೇಟಿ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ

ಸಿಂಹ: ವಿರಾಮದ ದಿನವಾದರೂ ಸಹಚರ ರನ್ನು ಕ್ರಿಯೆಯಲ್ಲಿ ತೊಡಗಿಸುವ ಹುಮ್ಮಸ್ಸು. ಲೇವಾದೇವಿ ವ್ಯವಹಾರದಲ್ಲಿ ಅತ್ಯಲ್ಪ ಲಾಭ. ಅವಿವಾ ಹಿತರಿಗೆ ಶೀಘ್ರ ವಿವಾಹ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ.

Advertisement

ಕನ್ಯಾ: ಚಿತ್ತಚಾಂಚಲ್ಯದಿಂದ ಮುಕ್ತರಾಗಿರಿ. ಉದ್ಯೋಗ ಬದಲಾವಣೆ ಸಂಭವ. ಪಶುಪಾಲನೆ, ಹೈನುಗಾರಿಕೆಯಿಂದ ಪ್ರಯೋಜನ. ದಂಪತಿಗಳ ನಡುವೆ ಸಾಮರಸ್ಯ ವೃದ್ಧಿ. ಎಲ್ಲರಿಗೂ ಆನಂದ, ಆರೋಗ್ಯಗಳ ಅನುಭವ.

ತುಲಾ: ಹಿರಿಯರಿಂದ ಸಕಾಲದಲ್ಲಿ ಧೈರ್ಯ ವಚನ. ಆಪ್ತಮಿತ್ರರ ಭೇಟಿಯಿಂದ ಸಮಾಧಾನ. ಗೃಹೋದ್ಯಮದ ಕ್ಷೇತ್ರಕ್ಕೆ ಪದಾರ್ಪಣೆಗೈಯುವ ನಿರ್ಧಾರ. ಭಾವನೆಗಳನ್ನು ಬರೆದಿಡುವುದರಿಂದ ಮನಸ್ಸು ಹಗುರ. ವಿನಾಯಕನ ಕ್ಷೇತ್ರ ಸಂದರ್ಶನ.

ವೃಶ್ಚಿಕ: ಸಾರ್ಥಕ ಬದುಕಿನ ಆನಂದ. ಬಂಧುವರ್ಗದವರಿಗೆ ಸಕಾಲಿಕ ಸಹಾಯ. ಪಿತ್ರಾರ್ಜಿತ ಕೃಷಿಭೂಮಿಯ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ರೋಗಿಗಳಿಗೆ ಸಾಂತ್ವನ ಹೇಳಲು ಆಸ್ಪತ್ರೆಗೆ ಭೇಟಿ.

ಧನು: ಕ್ರಿಯಾಶೀಲತೆಯ ಮೂಲಕ ಯಶಃಪ್ರಾಪ್ತಿ. ಪರೋಪಕಾರ ಗುಣದಿಂದ ಸಮಾಜದಲ್ಲಿ ಗೌರವದ ಸ್ಥಾನ. ಒಡೆದ ಮನಸ್ಸುಗಳನ್ನು ಬೆಸೆದ ತೃಪ್ತಿ. ಆಸ್ಪತ್ರೆ, ಅನಾಥಾಶ್ರಮಗಳಿಗೆ ಭೇಟಿ, ನೊಂದವರಿಗೆ ಸಾಂತ್ವನ.

ಮಕರ: ಉದ್ಯೋಗದ ಜಂಜಾಟಗಳಿಗೆ ವಿರಾಮ. ಹೊಸ ಉದ್ಯೋಗ ಅರಸುವ ಕಾರ್ಯ ಮುಂದುವರಿಕೆ. ಅಂಚೆ ಮೂಲಕ ಶಿಕ್ಷಣ ಪ್ರಗತಿಯಲ್ಲಿ. ತಾಯಿಯ ಕಡೆಯ ಬಂಧುಗಳ ಆಗಮನ. ವಸ್ತ್ರ, ಆಭರಣ, ಶೋಕಿವಸ್ತು ವ್ಯಾಪಾರಿಗಳಿಗೆ ಲಾಭ.

ಕುಂಭ: ಉದ್ಯಮದ ಹೊಸ ಉತ್ಪನ್ನಗಳ ಪ್ರಚಾರಕ್ಕೆ ಕ್ರಮ. ಬರಬೇಕಾದ ಬಾಕಿ ಕೈಸೇರಿದ ಸಮಾಧಾನ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ವಿವಿಧ ಬಗೆಯ ಸಮಾಜ ಸೇವಾ ಕಾರ್ಯಗಳ ಮುಂದುವರಿಕೆ. ಅವಿವಾಹಿತರಿಗೆ ವಿವಾಹ ಯೋಗ.

ಮೀನ: ಸಂತೃಪ್ತಿಯೊಂದಿಗೆ ವಿರಾಮ ಆಚರಣೆ. ಸಮಾಜದ ಹಿರಿಯರ ಸಮ್ಮಾನಕ್ಕೆ ಸಿದ್ಧತೆ. ಕೃಷಿಭೂಮಿಯಲ್ಲಿ ಕೈಗೊಂಡ ಪ್ರಯೋಗ ಪ್ರಗತಿಯಲ್ಲಿ. ಕುಟುಂಬದ ವ್ಯವಹಾರದ ಸಂಬಂಧ ದೂರ ಪ್ರಯಾಣ ಸಾಧ್ಯ. ಅಸಹಾಯಕರ ಸಹಾಯದ ಕರೆಗೆ ಸ್ಪಂದನ.

Advertisement

Udayavani is now on Telegram. Click here to join our channel and stay updated with the latest news.

Next