Advertisement

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:18 AM Apr 22, 2022 | Team Udayavani |

ಮೇಷ:

Advertisement

ಹಿರಿಯರಿಂದ ಸುಖ ಸಂತೋಷ. ಸರಕಾರೀ ಕೆಲಸಗಳಲ್ಲಿ ಪ್ರಗತಿ. ಗಣ್ಯರ ಸಂಪರ್ಕ ಮಾನ್ಯತೆ. ಸ್ವಸಾಮರ್ಥ್ಯದಿಂದ ಧನ ಸಂಪಾದನೆ. ಸಹೋದ್ಯೋಗಿಗಳ ಸಹಕಾರ. ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ.

ವೃಷಭ:

ದೈರ್ಯ ಶೌರ್ಯ ಪರಾಕ್ರಮದಿಂದ ಕೂಡಿದ ಸ್ವಾಭಿಮಾನಕ್ಕೆ ದಕ್ಕೆಯಾಗದಂತೆ ಕಾರ್ಯ ವೈಖರಿ. ಸಂಪತ್ತು ವೃದ್ಧಿ. ದಾನ ಧರ್ಮದಲ್ಲಿ ಆಸಕ್ತಿ ಶ್ರದ್ಧೆ. ಬಂಧುಮಿತ್ರರ ಸಹಕಾರ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ.

ಮಿಥುನ:

Advertisement

ಸಂಶೋಧನಾತ್ಮಕ ಪ್ರವೃತ್ತಿ. ಆರೋಗ್ಯ ಗಮನಿಸಿ. ವ್ಯವಹರಿಸುವಾಗ ಮಾತಿನಲ್ಲಿ ಕಠೊರತೆಗೆ ಆಸ್ಪದ ನೀಡದಿರಿ. ಹಣಕಾಸಿನ ಸಂಪತ್ತಿನ ವಿಚಾರದಲ್ಲಿ ಸಾಹಸ ಪ್ರವೃತ್ತಿ ಸಲ್ಲದು. ಅನಿರೀಕ್ಷಿತ ಧನಾಗಮನ ಸಂಭವ.

ಕರ್ಕ:

ಸಾಂಸಾರಿಕ ಸುಖ ವೃದ್ಧಿ. ದಂಪತಿಗಳಲ್ಲಿ ಅನುರಾಗ ಹೆಚ್ಚಾದೀತು. ದೀರ್ಘ‌ ಪ್ರಯಾಣ ಸಂಭವ. ಉತ್ತಮ ಜನರ ಒಡನಾಟದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಪ್ರಾಪ್ತಿ.

ಸಿಂಹ:

ಆರೋಗ್ಯ ತೃಪ್ತಿದಾಯಕ. ಸದಾ ವಿದ್ಯಾರ್ಜನೆಯಲ್ಲಿ ಆಸಕ್ತಿ. ಉತ್ತಮ ಗೌರವದಿಂದ ಕೂಡಿದ ಧನ ಸಂಪತ್ತಿನ ವೃದ್ಧಿ. ಮಕ್ಕಳಲ್ಲಿ ವಿಶೇಷ ಪ್ರೀತಿ ಸುಖ ಸಂತೋಷ. ದೂರದ ವ್ಯವಹಾರದಲ್ಲಿ ಪ್ರಗತಿ. ಸ್ಥಾನ ಸುಖಾದಿ ಲಭ್ಯ.

ಕನ್ಯಾ:

ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ಮಾಡಿ ನಿರ್ಣಯ ಮಾಡಿ. ಉದ್ಯೋಗ, ಸಂಪತ್ತು ವಿಚಾರದಲ್ಲಿ ಉತ್ತಮ ಪ್ರಗತಿದಾಯಕ ಬದಲಾವಣೆ ತೋರಿ ಬರುವುವು. ಸಂಶೋದಕರಿಗೆ ಅನುಕೂಲಕರ ಪರಿಸ್ಥಿತಿ.

ತುಲಾ:

ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಕಾರ್ಯ ಸಾಧಿಸಿದ ಸಂತೋಷ. ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ದೂರದ ವ್ಯವಹಾರಗಳಿಂದ ಅಧಿಕ ಧನಾರ್ಜನೆ. ಉತ್ತಮ ವಾಕ್‌ ಚತುರತೆ. ಮನೆಯಲ್ಲಿ ಸಂತಸದ ವಾತಾವರಣ. ಗುರುಹಿರಿಯರಿಗೆ ಹೆಚ್ಚಿನ ಜವಾಬ್ದಾರಿ.

ವೃಶ್ಚಿಕ:

ದೀರ್ಘ‌ ಪ್ರಯಾಣದಿಂದ ದೇಹಾಯಾಸ ಸಂಭವ. ಆರೋಗ್ಯದ ಬಗ್ಗೆ ಉದಾಸೀನ ಪ್ರವೃತ್ತಿ ಸಲ್ಲದು. ನೂತನ ಮಿತ್ರರ ಭೇಟಿ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸಕಾರ್ಯಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ ಗೃಹೋಪಕರಣಗಳ ಸಂಗ್ರಹ.

ಧನು:

ಸರಿಯಾದ ನಿಯಮ ಪಾಲನೆಯಿಂದ ಆರೋಗ್ಯ ವೃದ್ಧಿ. ಉತ್ತಮ ಧನಾರ್ಜನೆ. ನಿರೀಕ್ಷಿತ ಸಹಾಯ ಲಭ್ಯ. ಸಣ್ಣ ಪ್ರಯಾಣ ಯೋಗ. ಸಾಂಸಾರಿಕ ಸುಖ ಮಧ್ಯಮ. ವಿದ್ಯಾರ್ಥಿಗಳು ಪರರ ಸಹಾಯ ಪಡೆದು ನಿರೀಕ್ಷಿತ ಗುರಿ ಸಾಧಿಸಿರಿ.

ಮಕರ:

ಆರೋಗ್ಯ ಸುದಾರಣೆ. ದೂರದ ವ್ಯವಹಾರದಿಂದ ಉತ್ತಮ ಧನಾರ್ಜನೆ. ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ಸಾಂಸಾರಿಕ ಸುಖ ಮಧ್ಯಮ. ಮಕ್ಕಳ ಬಗ್ಗೆ ಹಚ್ಚಿನ ಗಮನ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಒದಗುವ ಸಂಭವ.

ಕುಂಭ:

ದೀರ್ಘ‌ ಪ್ರಯಾಣದಲ್ಲಿ ನಿರೀಕ್ಷಿತ ಸಫ‌ಲತೆ. ಉತ್ತಮ ಸ್ಥಾನ ಗೌರವಾದಿ ಲಭ್ಯ. ಅಧಿಕ ಧನಾರ್ಜನೆ. ನೂತನ ಮಿತ್ರರ ಭೇಟಿ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ.

ಮೀನ:

ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆ ಅಗತ್ಯ. ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದಿರಿ. ಸರಿಯಾದ ದಾಖಲಾತಿಯೊಂದಿಗೆ ವ್ಯವಹರಿಸಿ. ದೂರದ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ.

Advertisement

Udayavani is now on Telegram. Click here to join our channel and stay updated with the latest news.

Next