Advertisement

Daily Horoscope: ಹಿತಶತ್ರುಗಳ ಪಿತೂರಿಗೆ ಅಂಜದಿರಿ, ಉದ್ಯೋಗ ಸ್ಥಾನದಲ್ಲಿ ಭರವಸೆಯ ಸನ್ನಿವೇಶ

07:40 AM May 23, 2024 | Team Udayavani |

ಮೇಷ: ದೈಹಿಕ, ಮಾನಸಿಕ ಆರೋಗ್ಯದ ಕಡೆಗೆ ಗಮನವಿರಲಿ. ಉದ್ಯೋಗಸ್ಥರ ಪ್ರತಿಭೆಗೆ ಗೌರವ. ಉದ್ಯಮಗಳ ಯೋಜನಾಬದ್ಧ ಬೆಳವಣಿಗೆ. ಆಪ್ತವರ್ಗದಿಂದ ಸಕಾಲಿಕ ನೆರವು ಲಭ್ಯ. ತಾಯಿಯ ಆರೋಗ್ಯದ ಕಡೆಗೆ ಲಕ್ಷ್ಯ ಇರಲಿ.

Advertisement

ವೃಷಭ: ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿ ಪದೋನ್ನತಿ. ಸರಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ. ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ಷೇರು ವ್ಯವಹಾರದಲ್ಲಿ ಮಧ್ಯಮ ಲಾಭ. ಹತ್ತಿರದಲ್ಲಿರುವ. ದೇವತಾ ಸಾನ್ನಿಧ್ಯಕ್ಕೆ ಭೇಟಿ.

ಮಿಥುನ: ಹಿತಶತ್ರುಗಳ ಪಿತೂರಿಗೆ ಅಂಜದಿರಿ. ಉದ್ಯೋಗ ಸ್ಥಾನದಲ್ಲಿ ಭರವಸೆಯ ಸನ್ನಿವೇಶ. ಸ್ವಂತ ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ. ವ್ಯವಹಾರ ನಿಮಿತ್ತ ದಕ್ಷಿಣ ದಿಕ್ಕಿಗೆ ಪ್ರಯಾಣ.

ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ, ಕೆಲವೊಮ್ಮೆ ಕಿರಿಕಿರಿ, ಕೆಲವೊಮ್ಮೆ ನೆಮ್ಮದಿ. ಉದ್ಯಮದ ಉತ್ಪಾದನೆಗಳಲ್ಲಿ ವೈವಿಧ್ಯ ಪಾಲನೆಗೆ ಪ್ರಾಶಸ್ತ್ಯ. ದೀರ್ಘಾವಧಿ ಹೂಡಿಕೆಯಲ್ಲಿ ಲಾಭ. ಎಲ್ಲ ಮನೆಮಂದಿಗೂ ಉÇÉಾಸದ ವಾತಾವರಣ.

ಸಿಂಹ: ಸ್ವಲ್ಪ ಮಂದಗತಿಯಾದರೂ ಸ್ಥಿರವಾದ ಪ್ರಗತಿ. ಉದ್ಯೋಗಸ್ಥರಿಗೆ ಹೆಚ್ಚು ಶ್ರಮಿಸಲು ಉತ್ತೇಜನ. ಮೌಖೀಕ ಪ್ರಚಾರದಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ. ಮನೆಯಲ್ಲಿ ಮಂಗಲ ಕಾರ್ಯದ ಪ್ರಸ್ತಾವ.

Advertisement

ಕನ್ಯಾ: ಬಹುಪಾಲು ನೆಮ್ಮದಿಯ ದಿನ. ಉದ್ಯೋಗ ಸ್ಥಾನದಲ್ಲಿ ಅನುಕೂಲದ ವಾತಾವರಣ. ಉದ್ಯಮದಲ್ಲಿ ಶೀಘ್ರ ಪ್ರಗತಿ. ಕುಟುಂಬಸ್ಥರ ಮನೆಯಲ್ಲಿ ದೇವತಾಕಾರ್ಯ. ಉದ್ಯೋಗಾಸಕ್ತರನ್ನು ಅರಸಿ ಬರುವ ಅವಕಾಶಗಳು.

ತುಲಾ: ವೃತ್ತಿರಂಗದಲ್ಲಿ ಯೋಗ್ಯತೆಗೆ ಸರಿಯಾದ ಗೌರವ. ಅಕಸ್ಮಾತ್‌ ಧನಪ್ರಾಪ್ತಿ. ವಿತ್ತ ಸಂಸ್ಥೆಯ ನೆರವಿನಿಂದ ವ್ಯವಹಾರ ವಿಸ್ತರಣೆ. ಅವಿವಾಹಿತರಿಗೆ ವಿವಾಹ ನಿಶ್ಚಯ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಕೀರ್ತನೆ, ಸತ್ಸಂಗಗಳಲ್ಲಿ ಆಸಕ್ತಿ.

ವೃಶ್ಚಿಕ: ಉದ್ಯೋಗಸ್ಥರಿಗೆ ಸ್ವಯಂ ಯೋಗ್ಯತೆ ಯಿಂದ ಗೌರವ. ಉದ್ಯಮ ಭರದಲ್ಲಿ ಮುನ್ನಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಸರ್ವತ್ರ ಶ್ಲಾಘನೆ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.

ಧನು: ಪರಿಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ. ಆತ್ಮೀಯರಿಂದ ಸಕಾಲದಲ್ಲಿ ಸಹಾಯ. ಉದ್ಯೋಗ ಸ್ಥಾನದಲ್ಲಿ ಸದ್ಭಾವನೆಗೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ಹೈನುಗಾರಿಕೆ, ಜೇನು ವ್ಯವಸಾಯ ಅಭಿವೃದ್ಧಿ.

ಮಕರ: ಉದ್ಯೋಗ ಸ್ಥಾನದಲ್ಲಿ ನೆಮ್ಮದಿ. ಉದ್ಯಮಿಗಳಿಗೆ ಶುಭದಿನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.

ಕುಂಭ: ಹಲವು ಮೂಲಗಳಿಂದ ಆದಾಯ ವೃದ್ಧಿ. ಸರಕಾರಿ ನೌಕರರಿಗೆ ಕೆಲಸದ ಹೊರೆ. ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಯಂತ್ರೋಪಕರಣ ಬಿಡಿಭಾಗ ಮಾರಾಟಗಾರರ ವ್ಯಾಪಾರ ವೃದ್ಧಿ. ಆರೋಗ್ಯ ಉತ್ತಮ.

ಮೀನ: ಗುರುಕೃಪೆಯಿಂದ ಕಡಿಮೆಯಾದ ಶನಿಮಹಾತ್ಮನ ಕಾಟ. ಉದ್ಯೋಗ ಸ್ಥಾನದಲ್ಲಿ ಅನುಕೂಲ. ಸರಕಾರಿ ಅಧಿಕಾರಿ ಗಳಿಗೆ ಜನಗೌರವ. ಬಂಧುವರ್ಗದಲ್ಲಿ ದೇವತಾಕಾರ್ಯ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next