Advertisement

Daily Horoscope: ಉದ್ಯೋಗದಲ್ಲಿ ಮೇಲಿನವರಿಗೆ ತೃಪ್ತಿ, ನ್ಯಾಯಾಲಯ ವ್ಯವಹಾರದಲ್ಲಿ ಜಯ

07:30 AM Mar 06, 2024 | Team Udayavani |

ಮೇಷ: ಉದ್ಯೋಗ ಸ್ಥಾನದಲ್ಲಿ ಹಿತಕರ ಅನುಭವ. ಜಾಣತನದ ವರ್ತನೆಯಿಂದ ಕಾರ್ಯಸಿದ್ಧಿ. ಕಾರ್ಯವ್ಯಾಪ್ತಿ ವಿಸ್ತರಣೆಯಿಂದ ಅನುಕೂಲ. ಆಹಾರ ಧಾನ್ಯ ವ್ಯಾಪಾರಿಗಳಿಗೆ ಹೇರಳ ಲಾಭ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ.

Advertisement

ವೃಷಭ: ವ್ಯವಹಾರ ಕ್ಷೇತ್ರದಲ್ಲಿ ಹಲವು ಮೂಲಗಳಿಂದ ಸಹಾಯ. ಉದ್ಯೋಗ ಸ್ಥಾನದಲ್ಲಿ ತಕ್ಕಮಟ್ಟಿಗೆ ಸಮಾಧಾನ. ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ. ದೀರ್ಘ‌ಕಾಲದ ಕೌಟುಂಬಿಕ ವಿರಸ ಅಂತ್ಯ.

ಮಿಥುನ: ಉದ್ಯೋಗದಲ್ಲಿ ಮೇಲಿನವರಿಗೆ ತೃಪ್ತಿ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಶುಭದಿನ. ಗೃಹೋಪಯೋಗಿ ಸಾಮಗ್ರಿ ಖರೀದಿ. ಹಿರಿಯರಿಗೆ, ಗೃಹಿಣಿಯರಿಗೆ ನೆಮ್ಮದಿಯ ದಿನ.

ರ್ಕಾಟಕ: ದೃಢ ಮನಸ್ಸಿನಿಂದ ಕಾರ್ಯ ರಂಗಕ್ಕೆ ಪ್ರವೇಶ. ಹೊಸ ಉದ್ಯೋಗಕ್ಕೆ ಕರೆ. ಹಿರಿಯರ ದೇಹಾರೋಗ್ಯ ಸುಧಾರಣೆ. ಸಹಾಯದ ಕರೆಗೆ ಆಪ್ತರಿಂದ ಸಕಾಲದಲ್ಲಿ ಸ್ಪಂದನ. ವಿದ್ಯಾರ್ಥಿಗಳ ಅಧ್ಯಯನದಲ್ಲಿ ಹೆಚ್ಚು ಪರಿಶ್ರಮಕ್ಕೆ ಒತ್ತು.

ಸಿಂಹ: ಸಂದಭೋìಚಿತ ನಡೆಗಳಿಂದ ಕಾರ್ಯ ಯಶಸ್ವಿ . ಗುರು ದೇವತಾನುಗ್ರಹಕ್ಕಾಗಿ ತೀವ್ರ ಪ್ರಾರ್ಥನೆ. ಕಟ್ಟಡ ನಿರ್ಮಾಪಕರಿಗೆ ಕೆಲಸ ಮುಗಿಸುವ ಒತ್ತಡ. ವಿದ್ಯಾರ್ಥಿಗಳ ಲೋಕಜ್ಞಾನ ವೃದ್ಧಿಗೆ ಅನುಕೂಲ ವಾತಾವರಣ.

Advertisement

ಕನ್ಯಾ: ಉದ್ಯೋಗದಲ್ಲಿ ಕೆಲವರ ಪರಿಸ್ಥಿತಿ ಸುಧಾರಣೆ ಮಕ್ಕಳ ವಿವಾಹ ಪ್ರಯತ್ನ ಸಫ‌ಲ. ಕುಶಲ ಕರ್ಮಿಗಳಿಗೆ ಉದ್ಯೋಗಾವಕಾಶ. ಗೃಹಿಣಿಯರ ಸೊÌàದ್ಯೋಗ ಯೋಜನೆ ಪ್ರಗತಿ. ಹಿರಿಯರ ಆರೋಗ್ಯ ಸುಧಾರಣೆ.

ತುಲಾ: ಮುನ್ನೆಚ್ಚರಿಕೆಯ ಕ್ರಮಗಳಿಂದ ಮಕ್ಕಳ ಭವಿಷ್ಯ ಭದ್ರ. ಉದ್ಯೋಗ ಸ್ಥಾನದಲ್ಲಿ ನಿರ್ವಿಘ್ನವಾಗಿ ಕಾರ್ಯ ಮುಕ್ತಾಯ. ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಕೃಷಿ ಭೂಮಿಯಲ್ಲಿ ಉತ್ತಮ ಫ‌ಸಲಿನ ನಿರೀಕ್ಷೆ. ಎಲ್ಲರಿಗೂ ಆರೋಗ್ಯ ಭಾಗ್ಯ.

ವೃಶ್ಚಿಕ: ಶೀಘ್ರ ಕೊನೆಗೊಳ್ಳದ ಹಿತಶತ್ರುಗಳ ಕಾಟ. ತಾಳ್ಮೆಯ ವರ್ತನೆಯಿಂದ ಹಿರಿಯರ ಬೆಂಬಲ ಲಭ್ಯ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಗಮನಾರ್ಹ ಸುಧಾರಣೆ. ವ್ಯವಹಾರದ ಸಂಬಂಧ ಉತ್ತರ ದಿಕ್ಕಿನಲ್ಲಿ ಪಯಣ ಸಂಭವ.

ಧನು: ದೈವಾನುಗ್ರಹವಾಗಿ ಆತಂಕ ನಿವಾರಣೆ. ಕೆಲವು ದಿನಗಳಿಂದ ಕಾಡುತ್ತಿದ್ದ ಆರೋಗ್ಯದ ಸಮಸ್ಯೆ ಪರಿಹಾರ.ದಂಪತಿಗಳ ನಡುವೆ ಅನುರಾಗ ವೃದ್ಧಿ. ಶಿಕ್ಷಿತರಿಗೆ ಯೋಗ್ಯ ಉದ್ಯೋಗ ಪ್ರಾಪ್ತಿ. ಹೈನುಗಾರಿಕೆ ನಡೆಸುವವರಿಗೆ ತೃಪ್ತಿಕರ ಆದಾಯ.

ಮಕರ: ಆದಾಯ ವೃದ್ಧಿಗೆ ಹೊಸ ಅವಕಾಶಗಳು ಲಭ್ಯ. ಸಹೋದ್ಯೋಗಿಗಳ ನಡುವೆ ಸೌಹಾರ್ದ. ಕುಟುಂಬದ ಸದಸ್ಯರೊಂದಿಗೆ ಪ್ರೀತಿ, ವಾತ್ಸಲ್ಯದ ಸಂಬಂಧ ವೃದ್ಧಿ. ಮಹಿಳೆಯರ ಗೃಹೋದ್ಯಮ ಯೋಜನೆಗೆ ಉÇÉೇಖಾರ್ಹ ಯಶಸ್ಸು.

ಕುಂಭ: ಸೇವಾಕಾರ್ಯಗಳಿಗೆ ಜನ ಮನ್ನಣೆ. ವೈದ್ಯರ ಭೇಟಿಯಿಂದ ಸಣ್ಣ ತೊಂದರೆ ಪರಿಹಾರ. ವೃತ್ತಿಪರರಿಗೆ ಸರ್ವತ್ರ ಶ್ಲಾಘನೆ. ಸತ್ಕಾರ್ಯಗಳಿಗಾಗಿ ಧನ ವಿನಿಯೋಗ. ಅಪರೂಪದ ಬಂಧುಗಳು ಆಗಮನ. ಅನನುಭವಿ ಸಹೋದ್ಯೋಗಿ ಗಳಿಗೆ ಮಾರ್ಗದರ್ಶನದ ಹೊಣೆಗಾರಿಕೆ.

ಮೀನ: ಉದ್ಯೋಗದಲ್ಲಿ ವಿಶೇಷ ಪ್ರಗತಿ. ವ್ಯವಹಾರದಲ್ಲಿ ಅಪರಿಮಿತ ಮುನ್ನಡೆಯ ದಿನ. ಹಣಕಾಸು ವ್ಯವಹಾರ ಸುಧಾರಣೆ. ಸರಕಾರಿ ನೌಕರರಿಗೆ ಸಣ್ಣಪುಟ್ಟ ತೊಂದರೆ. ಹಳೆಯ ಗೆಳೆಯರ ಭೇಟಿ. ಕೆಲವು ವರ್ಗದ ವ್ಯಾಪಾರಿಗಳಿಗೆ ವಿಶೇಷ ಶುಭದಿನ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಮಕ್ಕಳಿಂದ ಹಿರಿಯರಿಗೆ ಆನಂದ.

Advertisement

Udayavani is now on Telegram. Click here to join our channel and stay updated with the latest news.

Next