Advertisement

Horoscope: ಅವಿವಾಹಿತರಿಗೆ ಬಾಳ ಸಂಗಾತಿ ಹಾಗೂ ಉದ್ಯೋಗಾಂಕ್ಷಿಗಳಿಗೆ ನೌಕರಿ ಲಭಿಸುವ ಚಿಂತೆ

07:30 AM Mar 03, 2024 | Team Udayavani |

ಮೇಷ: ಕಚೇರಿಗೆ ಮಾತ್ರವಿರಾಮ, ಚಟುವಟಿಕೆ ಗಳಿಗೆ ಅಲ್ಲ. ವ್ಯವಹಾರ ಕ್ಷೇತ್ರದಿಂದಲೂ ಹಲವು ಬಗೆಯ ಒತ್ತಡಗಳು. ಮನೆಯಲ್ಲಿ ಸಂಭ್ರಮದ ವಾತಾವರಣ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಮನೋಲ್ಲಾಸ.

Advertisement

ವೃಷಭ: ವಿರಾಮದ ಸಂದರ್ಭದಲ್ಲಿ ಓಡಾಟದಿಂದ ಹೊಸಬರ ಪರಿಚಯ. ಪರೀಕ್ಷೆ ಸಮೀಪಿಸುತ್ತಿರುವುದರಿಂದ ಮಕ್ಕಳ ಓದಿಗೆ ಗಮನ. ಸಂಸ್ಥೆಗೆ ಹೊಸ ನಿವೇಶನ ಖರೀದಿ ಮಾತುಕತೆ. ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಭೇಟಿ.

ಮಿಥುನ: ಉದ್ಯೋಗಸ್ಥರಿಗೆ ಬಾಕಿಯುಳಿ ದಿರುವ ಕೆಲಸಗಳನ್ನು ನಾಳೆ ಮುಗಿಸುವ ಚಿಂತೆ. ವ್ಯವಹಾರಸ್ಥರಿಗೆ ನಿರಾಳ ಮನೋಭಾವ. ಅವಿವಾಹಿತರಿಗೆ ಬಾಳ ಸಂಗಾತಿ ಹಾಗೂ ಉದ್ಯೋಗಾಂಕ್ಷಿಗಳಿಗೆ ನೌಕರಿ ಲಭಿಸುವ ಚಿಂತೆ.

ಕರ್ಕಾಟಕ: ದೇವತಾರಾಧನೆಯಿಂದ ಮನೆಯಲ್ಲಿ ಶಾಂತಿ. ಮಕ್ಕಳಿಗೆ ವ್ಯಾಸಂಗದಲ್ಲಿ ಸೂಕ್ತ ಮಾರ್ಗದರ್ಶನದ ಏರ್ಪಾಡು. ವ್ಯವಹಾರ ಕ್ಷೇತ್ರದ ಮಿತ್ರರೊಂದಿಗೆ ಭೇಟಿ. ಉದ್ಯೋಗ ಅರಸುತ್ತಿರುವ ಶಿಕ್ಷಿತರಿಗೆ ಅವಕಾಶಗಳು ಗೋಚರ.

ಸಿಂಹ: ವ್ಯವಹಾರ ಮತ್ತು ಕಾರ್ಯ ಸುಧಾರಣೆಯ ಚಿಂತೆ. ನೂತನ ಗೃಹ ನಿರ್ಮಾಣ ಪ್ರಗತಿಯಲ್ಲಿ. ವೈದ್ಯರು, ಎಂಜಿನಿಯರರು, ನ್ಯಾಯವಾದಿಗಳು ಮೊದಲಾದ ವೃತ್ತಿಪರರಿಗೆ ಕೆಲಸದ ಒತ್ತಡ. ಗೃಹಿಣಿಯರ ಆದಾಯ ಹೆಚ್ಚಳ.

Advertisement

ಕನ್ಯಾ: ಎಲ್ಲರ ದೇಹಾರೋಗ್ಯ ಉತ್ತಮ. ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸಮಾಚಾರ. ಹೊಸ ರೀತಿಯ ಉದ್ಯಮದ ಕಲ್ಪನೆಗೆ ಮೂರ್ತರೂಪ. ಗೃಹಿಣಿಯರು ಮತ್ತು ಮಕ್ಕಳಿಗೆ ಸಂಭ್ರಮದ ದಿನ.

ತುಲಾ: ದೃಢಸಂಕಲ್ಪದಲ್ಲಿ ಮುಂದುವರಿದರೆ ಜಯ ಖಚಿತ. ಹಿರಿಯ ಬಂಧುವಿನಿಂದ ಭರವಸೆಯ ಮಾರ್ಗದರ್ಶನ. ದೂರದ ಬಂಧುಗಳ ಕಡೆಯಿಂದ ಶುಭ ಸಮಾಚಾರ. ಬೌದ್ಧಿಕ ಕಾರ್ಯ ಮಾಡುವವರ ಆರೋಗ್ಯದ ಬಗ್ಗೆ ಎಚ್ಚರ.

ವೃಶ್ಚಿಕ: ವೈಭೋಗದ ತುತ್ತತುದಿಗೆ ಏರದಿದ್ದರೂ ನೆಮ್ಮದಿಯ ಜೀವನಕ್ಕೆ ಕೊರತೆಯಿಲ್ಲ. ಮಹಿಳೆ ಯರಿಗೆ ವಸ್ತ್ರಾಭರಣ ಖರೀದಿಯಲ್ಲಿ ಆಸಕ್ತಿ. ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಚೇತರಿಕೆ . ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ.

ಧನು: ಗೃಹಸಂಬಂಧಿ ಕಾರ್ಯಗಳಲ್ಲಿ ತಲ್ಲೀನ ರಾಗುವಿರಿ. ಪಾಲುದಾರಿಕೆ ವ್ಯವಹಾರಗಳಲ್ಲಿ ಮಂದಗತಿಯ ಪ್ರಗತಿ. ಉದ್ಯಮಿಗಳಿಗೆ ತಾತ್ಕಾಲಿಕ ವಿರಾಮ. ಸಣ್ಣ ಪ್ರವಾಸದ ಸಾಧ್ಯತೆ. ಗೃಹಾಲಂಕಾರದ ಕೆಲಸಗಾರರಿಗೆ ಕೈತುಂಬಾ ಕೆಲಸ ಹಾಗೂ ಸಂಪಾದನೆ.

ಮಕರ: ಸಾವಧಾನದಿಂದ ಮುಂದುವರಿದು ಕಾರ್ಯಸಿದ್ಧಿ. ಸಾಧನೆಯ ಮಾರ್ಗದಲ್ಲಿ ಅಚಲವಾಗಿ ನಿಲ್ಲುವುದರಿಂದ ಇಷ್ಟಾರ್ಥ ಸಿದ್ಧಿ. ನಿಗದಿತ ಸಮಯದಲ್ಲಿ ಕಾರ್ಯ ಪೂರ್ತಿಯಾದುದರಿಂದ ಸಮಾಧಾನ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ.

ಕುಂಭ: ಹೊಸ ಅವಕಾಶಗಳ ಅನ್ವೇಷಣೆ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನದಲ್ಲಿ ವಿಶೇಷ ಆಸಕ್ತಿ. ಮನೆಯಲ್ಲಿ ದೇವತಾರಾಧನೆಯ ಸಂಭ್ರಮ. ಸಮಾಜದಲ್ಲಿ ಗೌರವ ಪ್ರಾಪ್ತಿ. ಹಿರಿಯರಿಗೆ ಸ್ವಾವಲಂಬಿ ಬದುಕು. ಮಕ್ಕಳಿಗೆ ಸೂಕ್ತ ಮಾರ್ಗದರ್ಶನ.

ಮೀನ: ಶುಭಫ‌ಲಗಳ ದಿನ. ಕರ್ಮಕಾರಕನಾದ ಶನಿಯು ಸತ್ಕರ್ಮಗಳಿಗೆ ಪ್ರೇರಣೆ ನೀಡಿ ಸನ್ಮಾರ್ಗದಲ್ಲಿ ಮುನ್ನಡೆಸುತ್ತಾನೆ. ಗಳಿಕೆಯ ಮಾರ್ಗಗಳು ಸುಲಭದಲ್ಲಿ ಗೋಚರ. ಇಷ್ಟದೇವತಾರ್ಚನೆಯಿಂದ ಸಮಸ್ಯೆಗಳು ದೂರ. ಹಿರಿಯರ ಆರೋಗ್ಯ ಉತ್ತಮ. ಸಂಗಾತಿಯಿಂದ ವ್ಯವಹಾರದಲ್ಲಿ ಸಕ್ರಿಯ ಸಹಕಾರ. ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next