Advertisement

Daily Horoscope: ಉತ್ತಮ ವಾಕ್‌ಚತುರತೆ, ದಾಕ್ಷಿಣ್ಯ ಪ್ರವೃತ್ತಿಯಿಂದ ನಷ್ಟ ಸಂಭವ

07:08 AM Jun 08, 2023 | Team Udayavani |

ಮೇಷ: ತಾಳ್ಮೆ ಸಹನೆ ಕಳೆದುಕೊಳ್ಳದೇ ಕಾರ್ಯ ನಿರ್ವಹಿಸಿ. ಆರ್ಥಿಕ ಪರಿಶ್ರಮ ಎದುರಾದೀತು. ಹಣಕಾಸಿನ ವಿಚಾರದಲ್ಲಿ ಏರುಪೇರು ಸಂಭವ. ಮನೆ, ಆಸ್ತಿ ವಿಚಾರದಲ್ಲಿ ಉತ್ತಮ ಅಭಿವೃದ್ಧಿದಾಯಕ ಬದಲಾವಣೆ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ.

Advertisement

ವೃಷಭ: ಅನಿರೀಕ್ಷಿತ ಸ್ಥಾನಮಾನ ಗೌರವಾದಿ ಸುಖ ಸಂಭವ. ಉದ್ಯೋಗ ವ್ಯವಹಾರದಲ್ಲಿ ಸಫ‌ಲತೆ. ದೈನಂದಿನ ಚಟುವಟಿಕೆಗಳಲ್ಲಿ ಪರಿಶುದ್ಧತೆಯಿಂದ ಮಾನಸಿಕ ನೆಮ್ಮದಿ. ಗೃಹದಲ್ಲಿ ಸಂತಸದ ವಾತಾವರಣ. ಪತಿಪತ್ನಿಯರಲ್ಲಿ ಅನುರಾಗ ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ.

ಮಿಥುನ: ಉತ್ತಮ ವಾಕ್‌ಚತುರತೆ. ದಾಕ್ಷಿಣ್ಯ ಪ್ರವೃತ್ತಿಯಿಂದ ನಷ್ಟ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಪ್ರಗತಿ. ಗುರು ಹಿರಿಯರಿಂದ ಸಹಾಯ ಸಹಕಾರ ಮಾರ್ಗದರ್ಶನದ ಲಾಭ. ಗೃಹದಲ್ಲಿ ಅನಗತ್ಯ ಚಚೆಗೆ ಆಸ್ಪದ ನೀಡದಿರಿ.

ಕರ್ಕ: ನಿರೀಕ್ಷೆಯಂತೆ ಅಧಿಕ ಧನಾಗಮನ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ದಾಂಪತ್ಯ ಸುಖಕರ. ದೂರ ಪ್ರಯಾಣ ಸಂಭವ. ಆಸ್ತಿ ಹೂಡಿಕೆ ವಿಚಾರಗಳಲ್ಲಿ ಪ್ರಗತಿ. ದೂರದ ಮಿತ್ರರಿಂದ ಸಹಾಯ ಸುವಾರ್ತೆ.

ಸಿಂಹ: ಹಲವಾರು ವಿಳಂಬಿತ ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಂಭವ. ದೂರದ ವ್ಯವಹಾರಗಳಿಂದ ಧನಲಾಭ. ಮಾತಿನಲ್ಲಿ ಜಾಗ್ರತೆ ವಹಿಸುವುದರಿಂದ ಅಧಿಕ ಲಾಭ ಸಂಭವ. ವಿದ್ಯೆ ಜ್ಞಾನ ಗುರು ಹಿರಿಯರಿಂದ ಅನುಕೂಲಕರ ಪರಿಸ್ಥಿತಿ. ದಾಂಪತ್ಯ ತೃಪ್ತಿದಾಯಕ.

Advertisement

ಕನ್ಯಾ: ಆರೋಗ್ಯ ವೃದ್ಧಿ. ನಿರೀಕ್ಷಿತ ಸ್ಥಾನಮಾನ ಗೌರವ ಪ್ರಾಪ್ತಿ. ದಂಪತಿಗಳಲ್ಲಿ ಪ್ರೀತಿ ಅನುರಾಗ ವೃದ್ಧಿ. ಮಕ್ಕಳಿಂದ ಸಂತೋಷ ವಾರ್ತೆ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಮನೆಯಲ್ಲಿ ಕೌಟುಂಬಿಕ ಸುವಾರ್ತೆ. ಧಾರ್ಮಿಕ ವಿಚಾರಗಳಲ್ಲಿ ಶ್ರದ್ಧೆ ವೃದ್ಧಿ.

ತುಲಾ: ಆರೋಗ್ಯ ವೃದ್ಧಿ. ಅತೀ ಆಸೆ ಮಾಡದೇ ಬಂದ ಅವಕಾವ ಉಪಯೋಗಿಸಿಕೊಳ್ಳಿ. ಉತ್ತಮ ಜನಮನ್ನಣೆ. ನಿರೀಕ್ಷೆಗಿಂತಲೂ ಅಧಿಕ ಧನಾರ್ಜನೆ. ನಿರೀಕ್ಷಿಸಿದ ಕಾರ್ಯ ಸಾಧಿಸಿದ ಸಮಾದಾನ. ವಿದ್ಯಾರ್ಥಿ, ದಂಪತಿಗಳಿಗೆ ಶುಭ ಫ‌ಲದ ದಿನ. ಗುರುಹಿರಿಯರ ಪ್ರೋತ್ಸಾಹ.

ವೃಶ್ಚಿಕ: ರಾಜಕೀಯ ನಾಯಕರಿಗೆ ಉತ್ತಮ ಜನಮನ್ನಣೆ. ಹೆಚ್ಚಿನ ಜವಾಬ್ದಾರಿ ಸಿಗುವ ಅವಕಾಶ. ನೂತನ ಮಿತ್ರರ ಸಮಾಗಮ. ಬಂಧುಗಳಿಂದ ಪ್ರೋತ್ಸಾಹ. ಸಾಂಸಾರಿಕರಿಗೆ, ವಿದ್ಯಾರ್ಥಿಗಳಿಗೆ ಸ್ಥಾನ ಗೌರವಾದಿ ಸುಖ. ಧಾರ್ಮಿಕ ಸೇವೆಯಲ್ಲಿ ಕಾರ್ಯ ನಿರಂತರ.

ಧನು: ಪಾಲುದಾರಿಕಾ ವ್ಯವಹಾರಸ್ಥರೂ, ದಂಪತಿಗಳು ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಪ್ರಯಾಣ ಅವಕಾಶ. ಸ್ಥಾನಮಾನ ಕೊರತೆ ಕಾಣದು. ಜಲೋತ್ಪನ್ನ ವಸ್ತುಗಳಿಂದ ಲಾಭ. ಆರೋಗ್ಯ ಅನುಕೂಲಕರ.

ಮಕರ: ಪರದೇಶದ ಕಾರ್ಯಗಳಲ್ಲಿ ನಿರೀಕ್ಷಿತ ಗೌರವಾದಿ ಪ್ರಾಪ್ತಿ. ಉತ್ತಮ ಧನಾರ್ಜನೆ. ಆರೋಗ್ಯ ವೃದ್ಧಿ. ಮಿತ್ರರಲ್ಲಿ, ಮಕ್ಕಳಲ್ಲಿ ತಾಳ್ಮೆಯಿಂದ ವರ್ತಿಸಿ. ನೀರಿನಿಂದ ಉತ್ಪನ್ನ ವಸ್ತುಗಳಿಂದ, ಆಹಾರೋದ್ಯಮ, ಆಭರಣ ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ.

ಕುಂಭ: ಅನ್ಯರ ಸಹಾಯ ನಿರೀಕ್ಷಿಸದೆ ತಾಳ್ಮೆಯಿಂದ ಕಾರ್ಯ ನಿರ್ವಹಿಸಿ ಗುರಿ ಸಾಧಿಸಿ. ಧನಾರ್ಜನೆಗೆ ಅನುಕೂಲಕರ ಪರಿಸ್ಥಿತಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ ಯಶಸ್ಸು. ದಾಂಪತ್ಯ ಸುಖ ತೃಪ್ತಿದಾಯಕ. ಗಣಿ, ಭೂವ್ಯವಹಾರ, ಆಹಾರೋದ್ಯಮದವರಿಗೆ ಅನುಕೂಲ.

ಮೀನ: ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ದೇಶ ವಿದೇಶದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ದೀರ್ಘ‌ ಪ್ರಯಾಣದಿಂದ ಲಾಭ. ರಾಜಕೀಯ ಕಾರ್ಯ ಕ್ಷೇತ್ರ ರಹಸ್ಯ ವ್ಯವಹಾರದಿಂದ ನಿರೀಕ್ಷಿತ ಸಾಧನೆ. ದಂಪತಿಗಳು ಅನ್ಯೋನ್ಯತೆಗೆ ಸಹಕರಸಿ. ಅಭಿವೃದ್ಧಿದಾಯಕ ಧನಾರ್ಜನೆ.

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next