Advertisement

Daily Horoscope: ಆರೋಗ್ಯದ ಬಗ್ಗೆ ಗಮನವಿರಲಿ, ಅತಿಯಾದ ಕಾರ್ಯ ಒತ್ತಡ ಎದುರಾದೀತು

07:24 AM Jun 19, 2023 | Team Udayavani |

ಮೇಷ: ವಾಹನ ಭೂಮಿ ಇತ್ಯಾದಿ ಆಸ್ತಿ ವಿಚಾರದಲ್ಲಿಯೂ, ಉದ್ಯೋಗ, ಸರಕಾರೀ ವ್ಯವಹಾರಗಳಲ್ಲಿ ಕೂಡಿದ ಚಟುವಟಿಕೆ. ಕಾರ್ಯಗಳಲ್ಲಿ ಮುನ್ನಡೆ ಸಾಧಿಸಿದ ತೃಪ್ತಿ. ಧನಾರ್ಜನೆಗೆ ಕೊರತೆಯಾಗದು. ಸಂತೋಷದಿಂದ ಸಮಯ ಕಳೆಯುವ ಅವಕಾಶ ಲಭ್ಯ.

Advertisement

ವೃಷಭ: ಜವಾಬ್ದಾರಿಯುತ ಕಾರ್ಯವೈಖರಿ ಯಿಂದ ಸ್ಥಾನ ಗೌರವಾದಿ ಸುಖ ಪ್ರಶಂಸೆ. ಆರೋಗ್ಯ ವೃದ್ಧಿ. ಗೃಹೋಪವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ಸಾಂಸಾರಿಕ ಸುಖದಲ್ಲಿ ವೃದ್ಧಿ. ಪಾಲುದಾರಿಕಾ ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ.

ಮಿಥುನ: ಆರೋಗ್ಯದ ಬಗ್ಗೆ ಗಮನವಿರಲಿ. ಅತಿಯಾದ ಕಾರ್ಯ ಒತ್ತಡ ಎದುರಾದೀತು. ಮಾನಸಿಕವಾಗಿ ಸುದೃಢರಾಗಿದ್ದರೂ ದೈಹಿಕ ಶ್ರಮ ಅಧಿಕವೆನಿಸೀತು. ಮಾತಿನಲ್ಲಿ ಸಹನೆ ಹಾಗೂ ಎಚ್ಚರವಿರಲಿ. ಹಣಕಾಸಿನ ಬಗ್ಗೆ ಮತ್ತೂಬ್ಬರಲ್ಲಿ ವ್ಯವಹರಿಸುವಾಗ ಜಾಗೃತೆ.

ಕರ್ಕ: ದೀರ್ಘ‌ ಪ್ರಯಾಣಕ್ಕೆ ಅವಕಾಶ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಶ್ರಮ ಜವಾಬ್ದಾರಿ. ವಿದ್ಯಾರ್ಥಿಗಳಿಗೆ ಅಧ್ಯಯನಶೀಲರಿಗೆ ಹೆಚ್ಚಿನ ಅವಕಾಶ ತೋರೀತು. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ.

ಸಿಂಹ: ದೇಹಾರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದಿರಿ. ಉದ್ಯೋಗ ವ್ಯವಹಾರಗಳಲ್ಲಿ ಯೋಜಿತ ಗುರಿ ಸಾಧಿಸಿದ ತೃಪ್ತಿ. ಪತ್ರ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿದರಿಂದಲೂ ದೃಢ ನಿರ್ಧಾರದಿಂದ ಕಾರ್ಯ ಸಫ‌ಲತೆ. ದಾಂಪತ್ಯ ಸಮಾಧಾನಕರ. ವಿದ್ಯಾರ್ಥಿಗಳಿಗೆ ಅನುಕೂಲಕರ.

Advertisement

ಕನ್ಯಾ: ಆರೋಗ್ಯ ವೃದ್ಧಿ. ಆಸ್ತಿ ವಾಹನಾದಿ ವಿಚಾರಗಳಲ್ಲಿ ಧನ ವ್ಯಯ. ಬೇರೆಯವರ ವಿಚಾರದಲ್ಲಿ ಜವಾಬ್ದಾರಿ ವಹಿಸುವಾಗ ಎಚ್ಚರಿಕೆಯ ನಡೆ ಅಗತ್ಯ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸ್ಥಾನ ಪ್ರಾಪ್ತಿ. ಅನ್ಯರಿಗೆ ಸಹಾಯ ಮಾಡುವಾಗ ಸ್ಪಷ್ಟತೆ ಇರಲಿ.

ತುಲಾ: ಉದ್ಯೋಗ ವ್ಯವಹಾರದಲ್ಲಿ ಗಣನೀಯ ವೃದ್ಧಿ ಕೀರ್ತಿ ಸಂಪಾದನೆ. ನಿರೀಕ್ಷೆಗೂ ಮೀರಿದ ಧನಾರ್ಜನೆ. ದೂರ ಪ್ರಯಾಣ ಸಂಭವ. ಆರೋಗ್ಯ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಪ್ರಗತಿ. ಗುರುಹಿರಿಯರಿಂದ ಮನಃ ಸಂತೋಷ.

ವೃಶ್ಚಿಕ: ಆರೋಗ್ಯ ಗಮನಿಸಿ. ಉದ್ಯೋಗದಲ್ಲಿ ಪ್ರಗತಿ. ಪಾಲುದಾರಿಕಾ ವ್ಯವಹಾರದವರು ಚರ್ಚೆಗೆ ಅವಕಾಶ ನೀಡದೇ ಇದ್ದರೆ ಅಭಿವೃದ್ಧಿ ಅವಕಾಶಗಳು ದೊರಕುವುದು. ಎಲ್ಲಾ ವಿಚಾರದಲ್ಲೂ ಜಾಗೃತೆಯ ನಡೆ ಅಗತ್ಯ.

ಧನು: ಪರಿಶ್ರಮ ಜವಾಬ್ದಾರಿಯಿಂದ ಕೂಡಿದ ಕಾರ್ಯ ವೈಖರಿ. ನಿರೀಕ್ಷಿತ ಗೌರವ ಆದರಾದಿ ಪ್ರಾಪ್ತಿ. ನೂತನ ಮಿತ್ರರ ಸಮಾಗಮ. ದಾಂಪತ್ಯ ಸುಖ ವೃದ್ಧಿ. ಅಧ್ಯಯನ ಪ್ರವೃತ್ತರಿಗೆ ಸರ್ವ ವಿಧದ ಸೌಲಭ್ಯ ಲಭ್ಯ. ಆರೋಗ್ಯ ಉತ್ತಮ.

ಮಕರ: ಆಸ್ತಿ ವಿಚಾರದಲ್ಲಿ ಬದಲಾವಣೆಗಳು ತೋರಿ ಬಂದಾವು. ಉದ್ಯೋಗ ವ್ಯವಹಾರ ಗಳಲ್ಲಿ ಗಣ್ಯರ ಮೇಲಧಿಕಾರಿಗಳ ಸಹಾಯ ಸಹಕಾರದಿಂದ ಪ್ರಗತಿ. ದೀರ್ಘ‌ ಹಾಗೂ ಸಣ್ಣ ಪ್ರಯಾಣ ಸಂಭವ. ಆರ್ಥಿಕ ಸ್ಥಿತಿ ವೃದ್ಧಿದಾಯಕ. ಹಿರಿಯರ ಸೂಕ್ತ ಪ್ರೋತ್ಸಾಹ.

ಕುಂಭ: ಆರೋಗ್ಯ ಉತ್ತಮ. ದೇವತಾನು ಗ್ರಹದಿಂದ ಕೂಡಿದ ದಿನ. ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಫ‌ಲತೆ ಶ್ರೇಯಸ್ಸು ತೋರಿಬರುವುವು. ದೂರದ ವ್ಯವಹಾರದಿಂದ ಧನ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ.

ಮೀನ: ಹೆಚ್ಚಿದ ಜವಾಬ್ದಾರಿ. ದೇಹಕ್ಕೆ ಆಯಾಸ ಆಗದಂತೆ ಕರ್ತವ್ಯ ನಿರ್ವಹಿಸಿ. ಆರೋಗ್ಯ ಗಮನಿಸಿಕೊಳ್ಳಿ. ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ. ಆಸ್ತಿ ವಿಚಾರದಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ದಂಪತಿಗಳಲ್ಲಿ ಪರಸ್ಪರ ಅನ್ಯೋನ್ಯತೆ. ಮಕ್ಕಳಿಂದ ಸುಖ ಸಂತೋಷ.

Advertisement

Udayavani is now on Telegram. Click here to join our channel and stay updated with the latest news.

Next