Advertisement

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಮನೋಬಲದಿಂದ ಕಾರ್ಯಸಿದ್ದಿ

07:19 AM Jun 18, 2024 | Team Udayavani |

ಮೇಷ: ಉದ್ಯೋಗ ಸ್ಥಾನದಲ್ಲಿ ತಕ್ಕಮಟ್ಟಿಗೆ ನೆಮ್ಮದಿ. ಉದ್ಯಮದ ಉತ್ಪನ್ನಗಳಿಗೆ ಅಧಿಕ ಬೇಡಿಕೆ. ಹಣದ ಬೆಳೆಗಳ ಫ‌ಸಲು ಉತ್ತಮ. ವಸ್ತ್ರ, ಆಭರಣ ಖರೀದಿಗೆ ಧನವ್ಯಯ. ವ್ಯವಹಾರದ ಸಂಬಂಧ ಸಮೀಪದ ಊರಿಗೆ ಪ್ರಯಾಣ.

Advertisement

ವೃಷಭ: ಅನಿರೀಕ್ಷಿತವಾಗಿ ಒದಗಿಬಂದ ಧನ ಸಹಾಯ. ಉದ್ಯೋಗ ಸ್ಥಾನದಲ್ಲಿ ವಿಭಾಗ ಬದಲಾವಣೆ. ಹೊಸಬರ ಪರಿಚಯದಿಂದ ಲಾಭ. ಅಸಹಾಯಕ ವೃದ್ಧರಿಗೆ ನೆರವು. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂತೋಷದ ಅನುಭವ.

ಮಿಥುನ: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ. ಮನೋಬಲದಿಂದ ಕಾರ್ಯಸಿದ್ದಿ. ವಾಹನ ದುರಸ್ತಿಗೆ ಹಣ ಖರ್ಚು. ವಸ್ತ್ರ, ಉಡುಪು ವ್ಯಾಪಾರಿಗಳಿಗೆ ಲಾಭ. ಹಿರಿಯರಿಗೆ, ಗೃಹಿಣಿಯರಿಗೆ ನೆಮ್ಮದಿ, ಮಕ್ಕಳಿಗೆ ಸಂತೋಷ.

ಕರ್ಕಾಟಕ: ಸ್ಥಿರ ಉದ್ಯೋಗ ಪ್ರಾಪ್ತಿ. ದೂರದಲ್ಲಿರುವ ಹಿತೈಷಿಗಳಿಂದ ಸಹಾಯ. ವ್ಯವಹಾರ ಸಂಬಂಧ ಸಂವಾದ ಫ‌ಲಪ್ರದ. ಆಭರಣ, ಯಂತ್ರೋಪಕರಣ ವ್ಯಾಪಾರಿಗಳಿಗೆ ಶುಭಯೋಗ. ದಿನವಿಡೀ ಶುಭಫ‌ಲಗಳ ಅನುಭವ.

ಸಿಂಹ: ಸಂದರ್ಭಕ್ಕೆ ಸರಿಯಾಗಿ ಸ್ಪಂದಿಸಿ. ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ. ಕಟ್ಟಡ ನಿರ್ಮಾಪಕರಿಗೆ ಕೆಲಸ ಮುಗಿಸುವ ಆತುರ. ಪತ್ರಕರ್ತರಿಗೆ, ಮಾಧ್ಯಮದವರಿಗೆ ಸಣ್ತೀಪರೀಕ್ಷೆ. ಹಿರಿಯರ ಆರೋಗ್ಯ ಸುಧಾರಣೆ.

Advertisement

ನ್ಯಾ: ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಹೊಲಿಗೆ, ಮರದ ಕೆಲಸ ಬಲ್ಲವರಿಗೆ ಉದ್ಯೋಗಕ್ಕೆ ಕರೆ. ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯ. ಗೃಹಿಣಿಯರ ಸೊÌàದ್ಯೋಗ ಯೋಜನೆ ಪ್ರಗತಿ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ.

ತುಲಾ: ಉದ್ಯೋಗ ಸ್ಥಾನದಲ್ಲಿ ಜಾಡ್ಯದ ವಾತಾವರಣ. ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಮಕ್ಕಳ ವಿದ್ಯಾರ್ಜನೆ ಆಸಕ್ತಿ ವೃದ್ಧಿ. ಕೃಷಿ, ಹೈನುಗಾರಿಕೆ, ಜೇನು ಸಾಕಣೆಯಲ್ಲಿ ಆಸಕ್ತಿ. ವ್ಯವಹಾರದ ಸಂಬಂಧ ತುರ್ತು ಪ್ರಯಾಣ ಸಂಭವ.

ವೃಶ್ಚಿಕ: ಸಹನೆ, ಸಮಾಧಾನದಿಂದ ಯಶಸ್ಸು. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಗಮನಾರ್ಹ ಸುಧಾರಣೆ. ಜನಸೇವಾ ಕಾರ್ಯಗಳಲ್ಲಿ ಆಸಕ್ತಿ. ಹಿರಿಯರ ಆರೋಗ್ಯ ಪ್ರಕೃತಿ ಚಿಕಿತ್ಸೆಯಿಂದ ಸುಧಾರಣೆ. ನೆರೆಯವರೊಡನೆ ಸದ್ಭಾವನಾ ಸಂಬಂಧ.

ಧನು: ಹಿತೈಷಿಗಳ ಸಹಾಯದಿಂದ ಸಮಸ್ಯೆ ಪರಿಹಾರ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. ಕುಶಲಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಹೈನುಗಾರಿಕೆ, ತೋಟಗಾರಿಕೆ ಅಭಿವೃದ್ಧಿಗೆ ಪ್ರಯತ್ನ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂತಸ.

ಮಕರ: ಮಾತಿನಲ್ಲಿ ಸಂಯಮ ಇರಲಿ. ಸಣ್ಣ ಉದ್ಯಮಿಗಳ ಆದಾಯ ಹೆಚ್ಚಳ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಪ್ರಮಾಣದ ಲಾಭ. ಮಹಿಳೆಯರ ಗೃಹೋದ್ಯಮ ಯೋಜನೆಗೆ ಪ್ರಚಂಡ ಯಶಸ್ಸು.

ಕುಂಭ: ಅರ್ಹರಿಗೆ ಮಾಡಿದ ಸಹಾಯ ಸಾರ್ಥಕ. ಕಿರಿಯರಿಗೆ ಮಾರ್ಗದರ್ಶನ, ಹಿರಿಯರಿಗೆ ಸಂದಭೋìಚಿತ ಸಲಹೆ. ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಗೌರವ ಮತ್ತು ಜನಪ್ರಿಯತೆ ವೃದ್ಧಿ. ವೃತ್ತಿಪರರಿಗೆ ಸರ್ವತ್ರ ಶ್ಲಾಘನೆ.

ಮೀನ: ಉದ್ಯೋಗದಲ್ಲಿ ಸಾಧನೆಯ ತೃಪ್ತಿ. ವ್ಯವಹಾರದಲ್ಲಿ ಅಪರಿಮಿತ ಮುನ್ನಡೆ. ಹಣಕಾಸು ವ್ಯವಹಾರ ಸುಧಾರಣೆ. ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ. ಬಾಕಿ ಕೆಲಸಗಳನ್ನು ಮುಗಿಸುವ ಪ್ರಯತ್ನ. ದಂಪತಿಗಳ ನಡುವೆ ಅನುರಾಗ ವೃದ್ಧಿ

Advertisement

Udayavani is now on Telegram. Click here to join our channel and stay updated with the latest news.

Next