Advertisement

Horoscope: ಆರಿಸಿಕೊಂಡ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

07:41 AM Jun 10, 2024 | Team Udayavani |

ಮೇಷ: ಬಹುಮಟ್ಟಿಗೆ ಸಂತೋಷದ ದಿನ. ವ್ಯವಹಾರಗಳು ಸುಗಮ. ಉದ್ಯೋಗಸ್ಥರಿಗೆ ಆಪ್ತರಿಂದ ಅನುಕೂಲ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ವ್ಯವಹಾರದ ಸಂಬಂಧ ತಿರುಗಾಟ. ಗೃಹಿಣಿಯರಿಗೆ, ಮಕ್ಕಳಿಗೆ ಆನಂದ.

Advertisement

ವೃಷಭ: ವ್ಯವಹಾರ ಕ್ಷೇತ್ರ ವಿಸ್ತರಣೆ. ವಧೂ- ವರಾನ್ವೇಷಿಗಳಿಗೆ ಶುಭವಾರ್ತೆ. ವ್ಯಾಪಾರಿಗಳು, ಸಿವಿಲ್‌ ಎಂಜಿನಿಯರ್‌, ಲೆಕ್ಕ ಪರಿಶೋಧಕರು, ನ್ಯಾಯವಾದಿಗಳೇ ಮೊದಲಾದ ವೃತ್ತಿಪರರಿಗೆ ಕೆಲಸಗಳ ತರಾತುರಿ.

ಮಿಥುನ: ಆರಿಸಿಕೊಂಡ ಮಾರ್ಗದ ಬಗೆಗೆ ಆತಂಕ ಬೇಡ. ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ. ಸ್ವತಂತ್ರ ವ್ಯವಹಾರ ಕೈಹಿಡಿಯದು. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಸದ್ಗ†ಂಥ ಅಧ್ಯಯನದಲ್ಲಿ ಆಸಕ್ತಿ.

ರ್ಕಾಟಕ: ಮಿಶ್ರಫಲಗಳ ದಿನ. ಸರಕಾರಿ ನೌಕರರಿಗೆ ವಿರಾಮ ದೂರ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಅವಿವಾಹಿತರಿಗೆ ತಕ್ಕ ಜೋಡಿ ಸಿಗುವ ಸಾಧ್ಯತೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ.

ಸಿಂಹ: ಎಲ್ಲ ಕಾರ್ಯಕ್ಷೇತ್ರಗಳಲ್ಲೂ ಶುಭ. ಕೊಟ್ಟು ಮರೆತಿದ್ದ ಸಾಲ ಅಯಾಚಿತವಾಗಿ ವಸೂಲಿ. ಅಧಿಕಾರಿಗಳ ಸಕಾಲಿಕ ಕ್ರಮದಿಂದ ಕಾರ್ಯಗಳು ಮುಕ್ತಾಯ.ವ್ಯವಹಾರಾರ್ಥವಾಗಿ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ.

Advertisement

ಕನ್ಯಾ: ಜನಪರ ಕಾರ್ಯಗಳಿಂದ ಗೌರವ ಪ್ರಾಪ್ತಿ. ಕಾರ್ಯಾರ್ಥವಾಗಿ ಬೇರೆಬೇರೆ ಸ್ಥಳಗಳಿಗೆ ಭೇಟಿ. ಸಂಸಾರ ಸುಖ ತೃಪ್ತಿಕರ.ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುವ ಆಸಕ್ತಿ.

ತುಲಾ: ಪರಿಸರ ಸ್ವತ್ಛತೆ ಚಟುವಟಿಕೆಗಳಲ್ಲಿ ಆಸಕ್ತಿ. ಜೇನು ವ್ಯವಸಾಯ, ತೋಟಗಾರಿಕೆಯಲ್ಲಿ ಆಸಕ್ತರಿಗೆ ಉತ್ಸಾಹ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಲಾಭ.ಸಂಸಾರದಲ್ಲಿ ಸಾಮರಸ್ಯ.

ವೃಶ್ಚಿಕ: ವಸ್ತ್ರಾಭರಣ ಖರೀದಿ ಸಂಭವ. ಗೃಹಾಲಂಕಾರದಲ್ಲಿ ಆಸಕ್ತಿ.ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ಅನಾಥಾಲಯ, ವೃದ್ಧಾಶ್ರಮಗಳಿಗೆ ಭೇಟಿ. ಸತ್ಪಾತ್ರರಿಗೆ ದಾನ ಮಾಡುವ ಅವಕಾಶ.

ಧನು: ಸರಕಾರಿ ಉದ್ಯೋಗಸ್ಥರಿಗೆ ಗೊಂದಲ. ಉಳಿತಾಯ ಯೋಜನೆಗಳ ಏಜೆಂಟರಿಗೆ ಆದಾಯ ವೃದ್ಧಿ ಯೋಗ. ಅಲ್ಪಾವಧಿ ಹೂಡಿಕೆಗಳು ಹಿತಕರವಲ್ಲ.. ಗೃಹಿಣಿಯರ ಸೊÌàದ್ಯೋಗ ಯೋಜನೆಗಳ ಕ್ಷಿಪ್ರಗತಿಯ ಮುನ್ನಡೆ. ಹೆಚ್ಚುವರಿ ಆದಾಯದ ಮಾರ್ಗ ಅನ್ವೇಷಣೆ.

ಮಕರ: ವಿವಿಧ ಮೂಲಗಳಿಂದ ಆದಾಯ ವೃದ್ಧಿ. ಕಾರ್ಯರಂಗದಲ್ಲಿ ಸಹನೆಗೆ ಪ್ರಾಧಾನ್ಯ. ಮಕ್ಕಳ ಭವಿಷ್ಯ ಚಿಂತನೆ.ಸಂಗೀತ ಶ್ರವಣ, ಸತYಂಗದಿಂದ ಮನಸ್ಸಿಗೆ ನೆಮ್ಮದಿ. ಔಷಧ ವ್ಯಾಪಾರಿಗಳಿಗೆ ಉತ್ತಮ ಲಾಭ.

ಕುಂಭ: ಸೇವಾಕಾರ್ಯಗಳಿಂದ ಜನಪ್ರಿಯತೆ ವೃದ್ಧಿ ಉದ್ಯೋಗದಲ್ಲಿ ಪದೋನ್ನತಿ ಅಥವಾ ವೇತನ ಏರಿಕೆಯ ಸಾಧ್ಯತೆ. ಸಾಮಾಜಿಕರ ಅಭಿಮಾನಕ್ಕೆ ಪಾತ್ರರಾಗುವಿರಿ. ಸ್ಥಿರಾಸ್ತಿಯೊಂದರ ಖರೀದಿ ಪ್ರಯತ್ನದಲ್ಲಿ ಮುನ್ನಡೆ. ನ್ಯಾಯಾಲಯ ವ್ಯವಹಾರದಲ್ಲಿ ಜಯ.

ಮೀನ: ಹಲವು ಬಗೆಯ ಸತ್ಕಾರ್ಯಗಳಲ್ಲಿ ಪಾಲುಗೊಳ್ಳುವಿರಿ. ಇಲಾಖೆಗಳವರಿಂದ ಉತ್ತಮ ಸ್ಪಂದನ. ಸಂಸಾರದಲ್ಲಿ ಸಹಕಾರ, ಸೌಜನ್ಯ ವೃದ್ಧಿ. ಎಲ್ಲರ ಆರೋಗ್ಯ ಉತ್ತಮ. ಅಸಹಾಯಕರಿಗೆ ನೆರವಾಗುವ ಸಂದರ್ಭ.

Advertisement

Udayavani is now on Telegram. Click here to join our channel and stay updated with the latest news.

Next