Advertisement

Daily Horoscope: ಆರೋಗ್ಯ ಸುಧಾರಣೆ, ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ

07:20 AM Jul 30, 2023 | Team Udayavani |

ಮೇಷ: ಆರೋಗ್ಯ ಸುದೃಢ. ಉದ್ಯೋಗ ವ್ಯವಹಾರದಲ್ಲಿ ಸಂತೋಷ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಅನಾವಶ್ಯಕ ತೊಂದರೆಯಿಂದ ದೂರವಿರಿ. ಸ್ವಪ್ರಯತ್ನಕ್ಕೆ ಆದ್ಯತೆ ನೀಡಿ. ಗುರು ಹಿರಿಯರ ಮಾರ್ಗದರ್ಶನ. ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಲಭ್ಯ.

Advertisement

ವೃಷಭ: ಆರೋಗ್ಯ ಉತ್ತಮ. ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ಅಧಿಕ ಜವಾಬ್ದಾರಿ ಮತ್ತು ಪರಿಶ್ರಮ ಅವಶ್ಯ. ಗೌರವಯುತ ಹಣ ಗಳಿಕೆ. ಅನ್ಯರ ಸಹಾಯ ನಿರೀಕ್ಷಿಸದಿರಿ. ದಾಂಪತ್ಯ ಸಾಮರಸ್ಯಕ್ಕೆ ಶ್ರಮ. ಧಾರ್ಮಿಕ ಶ್ರದ್ಧೆ , ಭಕ್ತಿ ವೃದ್ಧಿ.

ಮಿಥುನ: ಆರೋಗ್ಯ ಸುಧಾರಣೆ. ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ಪಾಲುಗಾರಿಕಾ ಸಹಕಾರ ಅನಿವಾರ್ಯ. ಸ್ಥಿರಾಸ್ತಿಯಿಂದ ಧನವೃದ್ಧಿ. ಬಂಧುಗಳಿಂದ ಸಹಕಾರ. ದಂಪತಿಗಳಿಗೆ ಪರಸ್ಪರ ಲಾಭ. ದೇವತಾ ಕಾರ್ಯಗಳಿಗೆಗಾಗಿ ಸಂಚಾರ.

ಕರ್ಕ: ಉತ್ತಮ ಆರೋಗ್ಯ. ವಾಕ್‌ ಚಾತುರ್ಯ. ಪಾಲುಗಾರಿಕಾ ವ್ಯವಹಾರದಿಂದ ನಿರೀಕ್ಷೆಗೂ ಮೀರಿದ ಸಫ‌ಲತೆ. ಹಣಕಾಸು ವಿಚಾರದಲ್ಲಿ ಸ್ಪಷ್ಟತೆ ಇರಲಿ. ದೂರದ ಮಿತ್ರರಿಂದ ಸಹಕಾರ. ಸಣ್ಣ ಪ್ರಯಾಣ ಧಾರ್ಮಿಕ ಕಾರ್ಯಗಳು ಸಫ‌ಲ.

ಸಿಂಹ: ಸ್ಥಿರ ಆರೋಗ್ಯ. ಕೆಲಸ ಕಾರ್ಯಗಳಲ್ಲಿ ಜವಾಬ್ದಾರಿಯ ಕಾರ್ಯನಿರ್ವಹಣೆ. ಹಣಕಾಸು ವಿಚಾರದಲ್ಲಿ ಪರಾವಲಂಬನೆ. ವಿದೇಶ ಮೂಲದ ಸಂಪಾದನೆ. ಅನ್ಯರ ಸಹಾಯ ಪಡೆಯುವಾಗ ಎಚ್ಚರ. ಧರ್ಮ ಕಾರ್ಯಗಳಿಗೆ ಪ್ರಯಾಣ.

Advertisement

ಕನ್ಯಾ: ಆರೋಗ್ಯ ನಿರ್ಲಕ್ಷಿಸದಿರಿ. ಉದ್ಯೋಗ ವ್ಯವಹಾರಗಳಲ್ಲಿ ಗುರು ಹಿರಿಯರ ಮೇಲಾಧಿಕಾರಿಗಳ ಸಹಕಾರ. ಗಣನೀಯ ಅಭಿವೃದ್ಧಿ. ದೀರ್ಘ‌ ಪ್ರಯಾಣ ಸಂಭವ. ಸ್ಥಾನ ಗೌರವ ಪ್ರಾಪ್ತಿ. ಜಲೋತ್ಪನ್ನಗಳಿಂದ ಧನವೃದ್ಧಿ.

ತುಲಾ: ದೀರ್ಘ‌ ಪ್ರಯಾಣ. ಹೂಡಿಕೆಗಳಲ್ಲಿ ಆಸಕ್ತಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಸತಿ ಪತಿಗಳಲ್ಲಿ ಅನುರಾಗ ವೃದ್ಧಿ. ಆರೋಗ್ಯ ಗಮನಿಸಿ. ಹಣಕಾಸು ವಿಚಾರದಲ್ಲಿ ಸರಿಯಾದ ಲೆಕ್ಕಾಚಾರ ಅಗತ್ಯ. ಮಾತಿನಲ್ಲಿ ಸ್ಪಷ್ಟತೆ ಇರಲಿ.

ವೃಶ್ಚಿಕ: ನಿರೀಕ್ಷಿತ ಧನಲಾಭ. ಆರೋಗ್ಯದಲ್ಲಿ ಗಣನೀಯ ವೃದ್ಧಿ. ಗೃಹದಲ್ಲಿ ಸಂಭ್ರಮದ ವಾತಾವರಣ. ನೂತನ ಬಂಧುಮಿತ್ರರ ಆಗಮನ. ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯ. ಭೂಮಿ ಆಸ್ತಿ ವ್ಯವಹಾರದಲ್ಲಿ ಪ್ರಗತಿ.

ಧನು: ಪಾಲುಗಾರಿಕೆ ವ್ಯವಹಾರಗಳಲ್ಲಿ ಅಭಿವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ಯಶಸ್ಸು. ಆರ್ಥಿಕ ಪ್ರಗತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಗುರು ಹಿರಿಯರಿಂದ ಸಹಕಾರ ಮಾರ್ಗದರ್ಶನ ಲಭ್ಯ. ಗೃಹದಲ್ಲಿ ಸಂತೋಷದ ವಾತಾವರಣ.

ಮಕರ: ಸಣ್ಣ ಪ್ರಯಾಣ. ಲೆಕ್ಕಾಚಾರದ ಆರ್ಥಿಕ ಸ್ಥಿತಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮ. ಜವಾಬ್ದಾರಿಯ ನಡೆಯಿಂದ ಪ್ರಗತಿ ಸಂಭವ. ಸಹೋದರ ಸಮಾನರಿಂದ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಶಿಸ್ತಿನ ಜೀವನದಲ್ಲಿ ಆಸಕ್ತಿ.

ಕುಂಭ: ಹೆಚ್ಚಿದ ಪರಿಶ್ರಮ. ದೇಹಾಯಾಸ ಆಗದಂತೆ ನಿಗಾ ವಹಿಸಿ. ಗೃಹದಲ್ಲಿ ಸಂತಸದ ವಾತಾವರಣ. ಬಂಧು ಮಿತ್ರರ ಭೇಟಿ, ಸಹಕಾರ. ಗುರು ಹಿರಿಯರ ಉತ್ತಮ ಮಾರ್ಗದರ್ಶನ. ದಂಪತಿಗಳಲ್ಲಿ ಪ್ರೀತಿ, ಪ್ರೋತ್ಸಾಹ ವೃದ್ಧಿ.

ಮೀನ: ಸಮಾಜದಲ್ಲಿ ಹೆಚ್ಚಿದ ಗೌರವ. ಅಧಿಕ ಮನಃ ಸಂತೋಷ. ಸಂದರ್ಭಕ್ಕೆ ಸರಿಯಾಗಿ ಸಿಗುವ ಸಹಾಯದಿಂದ ಕೆಲಸ ಕಾರ್ಯಗಳಲ್ಲಿ ಗಣನೀಯ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಸರಿಯಾದ ಲೆಕ್ಕಾಚಾರ ಅಗತ್ಯ.

 

Advertisement

Udayavani is now on Telegram. Click here to join our channel and stay updated with the latest news.

Next