Advertisement

Daily Horoscope: ಕೆಲಸದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕಿದ್ದರಿಂದ ಮನ ತೃಪ್ತಿ

07:17 AM Jul 16, 2023 | Team Udayavani |

ಮೇಷ: ಉದ್ಯೋಗ ವ್ಯವಹಾರಗಳಲ್ಲಿ ಸಾಹಸ ಪ್ರವೃತ್ತಿ. ಅಧಿಕ ಪರಿಶ್ರಮದಿಂದ ಸಫ‌ಲತೆ ಸ್ಥಾನ ಗೌರವಾದಿ ಲಭ್ಯ. ನೆಮ್ಮದಿ ಕಮ್ಮಿ. ಬಂಧುಮಿತ್ರರಿಗೆ ಹೆಚ್ಚಿದ ಒತ್ತಡ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಸ್ಪಷ್ಟ ಸಹಕಾರದಿಂದ ನಿರೀಕ್ಷಿತ ಫ‌ಲ ಲಭ್ಯ.

Advertisement

ವೃಷಭ: ಮನೋರಂಜನೆಯಲ್ಲಿ ಕಾಲಕಳೆಯು ವಿಕೆ. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನಮಾನ ಗೌರವಾದಿ ಪ್ರಗತಿ. ಅವಿವಾಹಿತರಿಗೆ ವಿವಾಹ ಯೋಗ. ಯೋಗ್ಯ ಸಂಬಂಧ ಒದಗಿ ಬರುವುದು. ಬಹುವಿಧದಿಂದ ಧನ ಸಂಚಯನ.

ಮಿಥುನ: ಕೆಲಸದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕಿದ್ದರಿಂದ ಮನಃ ತೃಪ್ತಿ. ಕೀರ್ತಿ ಸಂಪಾದನೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ. ಆರೋಗ್ಯದಲ್ಲಿ ಸುಧಾರಣೆ. ದಾಂಪತ್ಯ ಸುಖ ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿ ಬರುವುದು.

ಕರ್ಕ: ಹಣಕಾಸಿನ ನಿರೀಕ್ಷೆಯಲ್ಲಿ ಸಫ‌ಲತೆ. ಉತ್ತಮ ವಾಕ್‌ಚತುರತೆಯಿಂದ ಕಾರ್ಯವೈಖರಿ. ದೂರದ ವಿದೇಶದ ವ್ಯವಹಾರಗಳಲ್ಲಿ ಪ್ರಗತಿ. ಸಹೋದರ ಸಮಾನರಿಂದ ಸಹೋದ್ಯೋಗಿಗಳಿಗೆ ಉತ್ತಮ ಸಹಕಾರ ಲಭ್ಯ. ಗೃಹದಲ್ಲಿ ಸಂಭ್ರಮದ ವಾತಾವರಣ.

ಸಿಂಹ: ದೂರ ಸಂಚಾರ. ಸ್ಥಾನ ಗೌರವಾದಿ ವಿಚಾರಗಳಲ್ಲಿ ಅಭಿವೃದ್ಧಿದಾಯಕ ಪ್ರಗತಿ. ಗುರುಹಿರಿಯರ ಸಂದಭೋìಚಿತ ಸಹಾಯ ಸಹಕಾರ ಲಭ್ಯ. ಜವಾಬ್ದಾರಿಯುತ ಮಾತಿನಿಂದ ವ್ಯವಹಾರಗಳಲ್ಲಿ ಶ್ರೇಯಸ್ಸು ಸಂಭವ.

Advertisement

ಕನ್ಯಾ: ಅವಿವಾಹಿತರಿಗೆ ಯೋಗ್ಯ ನೆಂಟಸ್ಥಿಕೆ ಒದಗುವುದು. ಪಾಲುಗಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಆರೋಗ್ಯದಲ್ಲಿ ಗಣನೀಯ ವೃದ್ಧಿ. ಬಂಧುಮಿತ್ರರ ಸಹಕಾರ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಆಸ್ತಿ ವಾಹನಾದಿ ವಿಚಾರಗಳಲ್ಲಿ ಅಭಿವೃದ್ಧಿ.

ತುಲಾ: ಆಸ್ತಿ ವಿಚಾರಗಳಲ್ಲಿ ತಲ್ಲೀನತೆ ಹಾಗೂ ನಿರೀಕ್ಷಿತ ಅಭಿವೃದ್ಧಿಯಿಂದ ಹೆಚ್ಚಿದ ಸಂತೋಷ. ಬಂಧುಮಿತ್ರರ ಮಾತೃ ಸಮಾನರಿಂದ ಸಹಕಾರ ಪ್ರೋತ್ಸಾಹ ಲಭ್ಯ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ಸರಕಾರಿ ಕಾರ್ಯಗಳಲ್ಲಿ ಮುನ್ನಡೆ. ದಾಂಪತ್ಯ ಮಧ್ಯಮ.

ವೃಶ್ಚಿಕ: ಆರೋಗ್ಯ ಗಮನಿಸಿ. ಹೆಚ್ಚಿದ ದೇಹಾಯಾಸ. ಗುರುಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹಣಕಾಸಿನ ವಿಚಾರದಲ್ಲಿ ಗೊಂದಲವಾಗದಂತೆ ಗಮನಿಸಿ. ಅತಿ ಉದಾರತನದಿಂದ ಕಿರಿಕಿರಿ ಆದೀತು. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ.

ಧನು: ಅತಿಯಾದ ಆತ್ಮ ವಿಶ್ವಾಸದಿಂದ ಆರೋಗ್ಯವನ್ನು ಗಮನಹರಿಸದಿರುವುದರಿಂದ ಏರುಪೇರು ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಸ್ವಜನರೊಂದಿಗೆ ಪಾರದರ್ಶಕತೆಯಿಂದ ಕಾರ್ಯೋನ್ಮುಖರಾಗಿ ನಿಷ್ಠುರ ಆಗದಂತೆ ಎಚ್ಚರ. ನಿರೀಕ್ಷಿತ ಧನಲಾಭ.

ಮಕರ: ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಸಂತೋಷ. ಭೂಮ್ಹಾರಿ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ. ಸಾಂಸಾರಿಕ ಸುಖ ಮಧ್ಯಮ. ಮಕ್ಕಳ ಅಭಿವೃದ್ಧಿಗಾಗಿ ಅಧಿಕ ಧನವ್ಯಯ. ಆರೋಗ್ಯ ವಿಚಾರದಲ್ಲಿ ನಿಗಾವಹಿಸಿ.

ಕುಂಭ: ನಾಯಕತ್ವ ಗುಣ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಚರ್ಚೆಯಾದರೂ ಯಶಸ್ಸು ನಿಮ್ಮದಾಗುವ ಸಂಭವ. ಉತ್ತಮ ವರಮಾನ. ವಾಕ್‌ ಚತುರತೆಯಿಂದ ಪ್ರದರ್ಶನ. ಗುರುಹಿರಿಯರ ಆರೋಗ್ಯ ಮದ್ಯಮ. ಸಾಂಸಾರಿಕ ಸುಖಕ್ಕೆ ಹೆಚ್ಚು ಪರಿಶ್ರಮ ಸಂಭವ.

ಮೀನ: ಆರೋಗ್ಯ ವೃದ್ಧಿ. ಸಣ್ಣ ಪ್ರಯಾಣದಿಂದ ಲಾಭ. ಉದ್ಯೋಗದಲ್ಲಿ ಪರಿಶ್ರಮಕ್ಕೆ ಸರಿಯಾಗಿ ಅಭಿವೃದ್ಧಿ. ಧನಾರ್ಜನೆ ತೃಪ್ತಿಕರ. ಅತಿಯಾದ ಉದಾರತೆ ಸಮಸ್ಯೆ ತಂದೀತು. ವಸ್ತುನಿಷ್ಠೆಗೆ ಆದ್ಯತೆ ನೀಡಿ ವ್ಯವಹರಿಸುವುದರಿಂದ ಸಫ‌ಲತೆ. ಸಾಂಸಾರಿಕ ಸುಖ ಮಧ್ಯಮ.

Advertisement

Udayavani is now on Telegram. Click here to join our channel and stay updated with the latest news.

Next