Advertisement

Daily Horoscope: ಎಂತಹ ಪರಿಸ್ಥಿತಿಯಲ್ಲಾದರೂ ಕೆಲಸ ಮಾಡುವ ಧೈರ್ಯ

07:35 AM Jan 31, 2024 | Team Udayavani |

ಮೇಷ: ಹೆಚ್ಚಿನ ಬಯಕೆಗಳು ಈಡೇರಬಹುದು. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಕೆಲಸಕ್ಕೆ ಉತ್ತೇಜನ. ಹೊಸ ಹೂಡಿಕೆಗಳ ವಿಷಯದಲ್ಲಿ ಎಚ್ಚರ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಕುಟುಂಬ ಕಲಹ ಕೆರಳದಂತೆ ಎಚ್ಚರ.

Advertisement

ವೃಷಭ: ಹೊಸ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ಉದ್ಯೋಗಸ್ಥರಿಗೆ ಶುಭ ವಾರ್ತೆ. ಹೊಸ ಕೃಷಿ ಭೂಮಿ ಖರೀದಿಗೆ ನಿರ್ಧಾರ. ಸರಕಾರಿ ಅಧಿಕಾರಿಗಳಿಗೆ ದೂರದೂರಿಗೆ ವರ್ಗಾವಣೆಯ ಶಂಕೆ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ.

ಮಿಥುನ: ಎಂತಹ ಪರಿಸ್ಥಿತಿಯಲ್ಲಾದರೂ ಕೆಲಸ ಮಾಡುವ ಧೈರ್ಯ. ಉದ್ಯೋಗ ಸ್ಥಾನದಲ್ಲಿ ತರಲೆ. ಹಿತಶತ್ರುಗಳ ಅಡ್ಡಗಾಲು. ಧ್ಯಾನ, ಸ್ವಾಧ್ಯಾಯ ಗಳಲ್ಲಿ ಮನಸ್ಸು. ಉದ್ಯಮ ಅಭಿವೃದ್ಧಿಗೆ ಮೊದಲ ಹಂತ ಆರಂಭ. ಸಂಗಾತಿಯಿಂದ ಉತ್ತಮ ಸಹಕಾರ.

ಕರ್ಕಾಟಕ: ದೇವತಾರ್ಚನೆಯಿಂದ ಆನಂದಾನು ಭೂತಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ. ಉದ್ಯಮದ ಅಭಿವೃದ್ಧಿಗೆ ಪಾಲುದಾರರ ಸಹಮತ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕುದುರುವ ಸಾಧ್ಯತೆ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ.

ಸಿಂಹ: ಸಹನೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ. ಹಿತಶತ್ರುಗಳಿಂದ ಮತ್ತೆ ಪಿತೂರಿ. ಉದ್ಯಮದ ಎಲ್ಲ ವಿಭಾಗಗಳಲ್ಲೂ ಲಾಭದಾಯಕವಾಗಿ ಮುನ್ನಡೆ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ.ವ್ಯವಹಾರಕ್ಕಾಗಿ ಸಣ್ಣ ಪ್ರಯಾಣ ಸಂಭವ.

Advertisement

ಕನ್ಯಾ: ಹಿತಾನುಭವದ ದಿನ. ಮೇಲಧಿಕಾರಿಗಳಿಂದ ಮೆಚ್ಚುಗೆಯ ಮಾತುಗಳು. ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ. ಸಣ್ಣ ಉದ್ಯಮಗಳಿಗೆ ಒಳ್ಳೆಯ ದಿನ. ಕೃಷಿಭೂಮಿ ಅಭಿವೃದ್ಧಿಗೆ ಕಾಲಮಿತಿಯ ಯೋಜನೆ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.

ತುಲಾ: ಮುಂದೇನಾಗಬಹುದೆಂಬ ಚಿಂತೆ ಯಿಂದ ದೂರವಿರಿ. ದೈವಾನುಗ್ರಹ ಉತ್ತಮ. ಉದ್ಯೋಗದಲ್ಲಿ ಸ್ವಲ್ಪ ಸುಧಾರಣೆ. ಉದ್ಯಮದ ಹಳೆಯ ಸಮಸ್ಯೆ ಪರಿಹಾರ. ಪೂರ್ವಜರ ಊರಿಗೆ ಭೇಟಿ. ಮಹಿಳೆಯರ ಸ್ವಾವಲಂಬನೆ ಯೋಜನೆಗಳ ಪ್ರಗತಿ.

ವೃಶ್ಚಿಕ: ಲಾಭ- ನಷ್ಟಗಳ ಲೆಕ್ಕಾಚಾರವನ್ನು ಮಾಡದಿ¨ªಾಗ ನಿರಾಶೆ ದೂರವಾಗುದು. ಉದ್ಯೋಗದಲ್ಲಿ ಭಾರೀ ಉನ್ನತಿಯಾಗದಿದ್ದರೂ ಯಾವುದೇ ಕೊರತೆ ಇರಲಾರದು. ಮಕ್ಕಳ ಉದ್ಯಮಕ್ಕೆ ಒಳ್ಳೆಯ ಹೆಸರು. ವಸ್ತ್ರಾಭರಣ ಖರೀದಿ. ದೂರದಲ್ಲಿರುವ ಬಂಧುಗಳ ಆಗಮನ.

ಧನು: ಸುಧಾರಣೆಯ ಹಾದಿಯಲ್ಲಿ ಜೀವನ ಯಾನ. ಉದ್ಯೋಗದಲ್ಲಿ ಮುನ್ನಡೆಯಲು ಅನಕೂಲ ಪರಿಸರ. ಸ್ವಂತ ಉದ್ಯಮದ ಕ್ರಮಾಗತ ಪ್ರಗತಿ. ದೀರ್ಘಾವಧಿ ಯೋಜನೆಗಳಲ್ಲಿ ಹಣ ಹೂಡಿಕೆಯಿಂದ ಲಾಭ. ನಿತ್ಯ ಚಟುವಟಿಕೆಗಳಿಂದ ಕಾರ್ಯಸಾಮರ್ಥ್ಯ ವೃದ್ಧಿ.

ಮಕರ: ಆಶಾವಾದವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಜಯ. ಒತ್ತಡದ ವಾತಾವರಣದಲ್ಲಿ ಕ್ಲಪ್ತ ಸಮಯದಲ್ಲಿ ಕಾರ್ಯ ಮುಗಿಸಿದ ತೃಪ್ತಿ. ಅಧ್ಯಾತ್ಮ ಸಾಧನೆಯಲ್ಲಿ ಆಸಕ್ತಿ.ವಸ್ತ್ರ, ಉಡುಪು , ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ಅಧಿಕ ಲಾಭ. ಹತ್ತಿರದ ದೇವಾಲಯಕ್ಕೆ ಸಂದರ್ಶನ.

ಕುಂಭ: ಶೀಘ್ರ ಕಾರ್ಯಸಾಧನೆಯ ತೃಪ್ತಿ. ಉದ್ಯೋಗ, ವ್ಯವಹಾರಗಳ ಕುರಿತು ಆತಂಕ. ಮರುದಿನದ ಕಾರ್ಯಗಳಿಗೆ ಸಿದ್ಧತೆ. ಹಿರಿಯರ ಮನೆಯಲ್ಲಿ ಶುಭಕಾರ್ಯ. ಬಂಧು, ಮಿತ್ರರೊಂದಿಗೆ ಸಮಾಗಮ. ಸೇವಾ ಚಟುವಟಿಕೆಗಳಲ್ಲಿ ಪಾಲುಗೊಳ್ಳುವಿರಿ.

ಮೀನ: ಉದ್ಯೋಗದಲ್ಲಿ ಯಶಸ್ಸು. ಸರಕಾರಿ ನೌಕರರ ಪೂರ್ಣ ಸಹಕಾರ. ಹಳೆಯ ಬಂಧುಗಳೊಂದಿಗೆ ಪುನರ್ಮಿಲನ. ಸೋದರಿಯ ಮಕ್ಕಳಿಗೆ ದೈವಾನುಗ್ರಹ. ಉದ್ಯೋಗ, ವಿವಾಹ ಯೋಗ. ಸಾಮಾಜಿಕ ಕಾರ್ಯಕ್ಕೆ ಮನೆಮಂದಿಯ ಉತ್ತೇಜನ. ಮರುದಿನದ ಮುಖ್ಯ ವ್ಯವಹಾರದ ಚಿಂತನೆ. ಎಲ್ಲರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next