Advertisement

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ

07:16 AM Feb 26, 2024 | Team Udayavani |

ಮೇಷ: ಭಗವಂತನ ಅನುಗ್ರಹದಿಂದ ಲಾಭವೇ ಅಧಿಕ. ಉದ್ಯೋಗದಲ್ಲಿ ಆನಂದಾನುಭವ. ಬಹುಪಾಲು ಉದ್ಯಮಿಗಳಿಗೆ ಅಧಿಕ ಲಾಭ. ವ್ಯವಹಾರ ವಿಸ್ತರಣೆಯಿಂದ ಅನುಕೂಲ ವೃದ್ಧಿ. ಶೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭ.

Advertisement

ವೃಷಭ: ಎಲ್ಲ ಆದಾಯ ಮೂಲಗಳಲ್ಲೂ ಅಭಿವೃದ್ಧಿ. ಉದ್ಯೋಗಸ್ಥರಿಗೆ ಶೀಘ್ರ ಕಾರ್ಯ ಮುಗಿಸಲು ಒತ್ತಡ. ವಸ್ತ್ರ, ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಗೆ ಪೋತ್ಸಾಹ.

ಮಿಥುನ: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ. ನ್ಯಾಯಾಲಯ ವ್ಯವಹಾರ ವಿಳಂಬ. ಉತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಗಮನ ಅವಶ್ಯ. ಧಾರ್ಮಿಕ ಸಾಹಿತ್ಯ ಅಧ್ಯಯನ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಯಿಂದ ಸಮಾಧಾನ.

ಕರ್ಕಾಟಕ: ನಿಮ್ಮ ಮೇಲಿನ ವಿಶ್ವಾಸದಿಂದ ಇನ್ನಷ್ಟು ಜವಾಬ್ದಾರಿಗಳು. ಉದ್ಯೋಗದಲ್ಲಿ ಹೊಸ ಕಾರ್ಯಗಳ ಜವಾಬ್ದಾರಿ. ಮಾಲಕರು ಮತ್ತು ನೌಕರರ ನಡುವೆ ಸಾಮರಸ್ಯ ವೃದ್ಧಿ.ವಸ್ತ್ರ,, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ.

ಸಿಂಹ: ಎಲ್ಲ ವಿಭಾಗಗಳಲ್ಲೂ ಯಶಸ್ವಿಯಾಗಿ ಕಾರ್ಯ ನಿರ್ವಹಣೆ. ಸರಕಾರಿ ನೌಕರರಿಗೆ ಆತಂಕದ ಭಾವ. ಸೊÌàದ್ಯೋಗಿ ಮಹಿಳೆಯರಿಗೆ ಸರ್ವವಿಧದಲ್ಲೂ ಯಶಸ್ಸು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ.

Advertisement

ಕನ್ಯಾ: ಎಲ್ಲ ನಿಯೋಜಿತ ಕಾರ್ಯಗಳು ಸಕಾಲದಲ್ಲಿ ಮುಕ್ತಾಯ.ಉದ್ಯೋಗದಲ್ಲಿ ನಿಯತ್ತಿನ ದುಡಿಮೆಗೆ ಗೌರವ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಬಂಧುಗಳ ಮನೆಯಲ್ಲಿ ದೇವಾರಾಧನೆ. ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ.

ತುಲಾ: ಕೆಲವು ತಿಂಗಳುಗಳಿಂದ ಪೀಡಿಸುತ್ತಿದ್ದ ಅನಾರೋಗ್ಯದಿಂದ ಬಿಡುಗಡೆ. ಅನಾಯಾಸವಾಗಿ ಉದ್ಯೋಗ ನಿರ್ವಹಣೆ. ಸಣ್ಣ ಉದ್ಯಮ ಘಟಕಗಳಿಗೆ ಏಳಿಗೆಯ ಕಾಲ. ವಿವಾಹಾಸಕ್ತರಿಗೆ ಯೋಗ್ಯ ಬಾಳ ಸಂಗಾತಿ ಲಭಿಸುವ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ.

ವೃಶ್ಚಿಕ: ನೀವೇ ಭಾಗ್ಯವಂತರೆಂಬ ಸಮಾಧಾನ ವಿರಲಿ. ವೈಯಕ್ತಿಕ ಬದುಕಿನಲ್ಲಿ ಎಲ್ಲ ಬಗೆಯ ಸಂತೃಪ್ತಿಯ ಅನುಭವ. ಉದ್ಯೋಗ, ವ್ಯವಹಾರ, ಎರಡರಲ್ಲೂ ಯಶಸ್ಸು. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.

ಧನು: ಜೀವನೋಪಾಯದ ಬಗ್ಗೆ ಚಿಂತೆ ಬೇಡ. ಉದ್ಯೋಗ ಸ್ಥಾನದಲ್ಲಿ ಕಾರ್ಯಗಳು ಶೀಘ್ರಗತಿಯಲ್ಲಿ ಮುಂದುವರಿಕೆ. ಕೃಷಿ ಕ್ಷೇತ್ರದಲ್ಲಿ ಸಾಧಾರಣ ಲಾಭ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಯಥೇತ್ಛ ಆದಾಯ .ಉತ್ತರದ ಬಂಧುಗಳಿಂದ ಶುಭ ಸಮಾಚಾರ.

ಮಕರ: ನಿಯೋಜಿತ ಕಾರ್ಯಗಳು ನಿರ್ವಿಘ್ನ ವಾಗಿ ನೆರವೇರಿಕೆ. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯ ವಾತಾವರಣ. ಕಟ್ಟಡ ನಿರ್ಮಾಪಕರಿಗೆ ಕೊನೆಯ ಹಂತದ ಕಾರ್ಯ ಮುಗಿಸುವ ಒತ್ತಡ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಅಧಿಕ ಲಾಭ.

ಕುಂಭ: ಶೀಘ್ರ ಕಾರ್ಯ ಮುಗಿಸಲು ಪೂರಕವಾದ ವಾತಾವರಣ. ಉದ್ಯಮದ ಉತ್ಪನ್ನಗಳಿಗೆ ಎÇÉೆಡೆಗಳಿಂದ ಬೇಡಿಕೆ. ಯಂತ್ರೋಪಕರಣ ಮತ್ತು ವಾಹನ ಬಿಡಿಭಾಗಗಳ ವ್ಯಾಪಾರಿಗಳಿಗೆ ಲಾಭ. ಗೃಹೋತ್ಪನ್ನಗಳ ಹೆಚ್ಚಿದ ಜನಪ್ರಿಯತೆ.

ಮೀನ: ದೇವರ ದಯೆಯಿಂದ ಎಲ್ಲ ಕಾರ್ಯಗಳು ಅನಾಯಾಸವಾಗಿಳ ಮುಂದುವರಿಕೆ. ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಹಿತಾನುಭವ. ಸಮಯಕ್ಕೆ ಸರಿಯಾದ ಸೇವೆಯಿಂದ ಗ್ರಾಹಕರಿಗೆ ಹರ್ಷ. ಪೂರಕ ವೃತ್ತಿಯ ಆಯ್ಕೆಯಲ್ಲಿ ಗೊಂದಲ. ಮಕ್ಕಳ ಶಿಕ್ಷಣದಲ್ಲಿ ಪ್ರಗತಿ. ಹಿರಿಯರಿಗೆ, ಸಂಗಾತಿಗೆ ನೆಮ್ಮದಿ.

 

Advertisement

Udayavani is now on Telegram. Click here to join our channel and stay updated with the latest news.

Next