Advertisement
ವೃಷಭ: ವಿರಾಮದ ಸಂದರ್ಭದಲ್ಲಿ ಓಡಾಟ ದಿಂದ ಹಲವರು ಹೊಸಬರ ಪರಿಚಯ. ವ್ಯವಹಾರ ಕ್ಷೇತ್ರಕ್ಕೆ ಹೊಸಬರ ಪ್ರವೇಶ. ವಿವಾಹ ಮಾತುಕತೆ. ಕುಟುಂಬದಲ್ಲಿ ಉಲ್ಲಾಸದ ಮನೋಭಾವ. ಮಕ್ಕಳ ವ್ಯಾಸಂಗಾಸಕ್ತಿ ವೃದ್ಧಿಗೆ ಪ್ರಯತ್ನ.
Related Articles
Advertisement
ಕನ್ಯಾ: ಸತ್ಪಾತ್ರರಿಗೆ ದಾನ ಮಾಡುವ ಅವಕಾಶ ಪ್ರಾಪ್ತಿ. ಎಲ್ಲರ ದೇಹಾರೋಗ್ಯ ಉತ್ತಮ. ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸಮಾಚಾರ. ಹತ್ತಿರದ ಪ್ರಾಕೃತಿಕ ತಾಣಕ್ಕೆ ಭೇಟಿ.
ತುಲಾ: ದೃಢವಾದ ಚಿತ್ತದೊಂದಿಗೆ ಭವಿಷ್ಯದ ಹಾದಿಯಲ್ಲಿ ಸ್ಪಷ್ಟ ಹೆಜ್ಜೆ. ಹಿರಿಯ ಬಂಧುವಿನಿಂದ ಭರವಸೆಯ ಮಾರ್ಗದರ್ಶನ. ದೂರದ ಬಂಧುಗಳ ಕಡೆ ಯಿಂದ ಶುಭ ಸಮಾಚಾರ. ಬಾಲ್ಯಕಾಲದ ಒಡನಾಡಿಯ ಅಕಸ್ಮಾತ್ ಭೇಟಿ.
ವೃಶ್ಚಿಕ: ವೈಭೋಗದ ತುತ್ತತುದಿಗೆ ಏರದಿದ್ದರೂ ಸುಖಜೀವನಕ್ಕೆ ಕೊರತೆಯಿಲ್ಲ. ಮಹಿಳೆಯರಿಗೆ ವಸ್ತ್ರಾಭರಣ ಖರೀದಿಯಲ್ಲಿ ಆಸಕ್ತಿ. ವ್ಯವಹಾರಸ್ಥರಿಗೆ ಅನಿರೀಕ್ಷಿತ ಮೂಲದಿಂದ ಧನಾಗಮ. ಹಿರಿಯರ ಆರೋಗ್ಯ ಕೊಂಚ ಏರುಪೇರು.
ಧನು: ಗೃಹಸಂಬಂಧಿ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ಮಕ್ಕಳ ಮದುವೆಯ ಮಾತುಕತೆ. ದೂರದ ನೆಂಟರ ಆಗಮನ. ಪಾಲುದಾರಿಕೆ ವ್ಯವಹಾರ ಗಳಲ್ಲಿ ಮಂದಗತಿಯ ಪ್ರಗತಿ. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ.
ಮಕರ: ತಾಳ್ಮೆ, ಜಾಣ್ಮೆಗಳೇ ನಿಮ್ಮ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸಲಿ. ಕಾರ್ಯಕೌಶಲಕ್ಕೆ ಎಲ್ಲರ ಹರ್ಷ ಹಾಗೂ ಮೆಚ್ಚುಗೆ ಪ್ರಕಟ.ಸಾಧನೆಯ ಮಾರ್ಗದಲ್ಲಿ ಅಚಲವಾಗಿ ನಿಲ್ಲುವುದರಿಂದ ಇಷ್ಟಾರ್ಧ ಸಿದ್ಧಿ.
ಕುಂಭ: ಧಾರ್ಮಿಕ ಚಿಂತನೆಯೊಂದಿಗೆ ಜನಸೇವೆಯಲ್ಲಿ ಆಸಕ್ತಿ. ಹೊಸ ಅವಕಾಶಗಳ ಅನ್ವೇಷಣೆ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನದಲ್ಲಿ ವಿಶೇಷ ಪಾತ್ರ.ಸಮಾಜದಲ್ಲಿ ಗೌರವ ಪ್ರಾಪ್ತಿ.ಹಿರಿಯರಿಗೆ ಸ್ವಾವಲಂಬಿ ಬದುಕು.
ಮೀನ: ಹಲವು ಶುಭಫಲಗಳ ದಿನ. ಕರ್ಮಕಾರಕನಾದ ಶನಿಯಿಂದ ಸತ್ಕರ್ಮಗಳಿಗೆ ಪ್ರೇರಣೆ. ಶಿವ ವಿಷ್ಣು,ಆಂಜನೇಯರ ಉಪಾಸನೆಯಿಂದ ಸಮಸ್ಯೆಗಳು ದೂರ. ಹಿರಿಯರ ಆರೋಗ್ಯ ಉತ್ತಮ. ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ. ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶ.