Advertisement

ರಾಶಿ ಫಲ: ಬಹು ಮಾತನಾಡಿ ತೊಂದರೆಗೊಳಗಾಗದಿರಿ, ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ

07:41 AM Feb 12, 2023 | Team Udayavani |

ಮೇಷ: ರಾಜಕೀಯ ಕಾರ್ಯ ಕ್ಷೇತ್ರದವರಿಗೆ ಅಭಿವೃದ್ಧಿ. ಕ್ರಯ ವಿಕ್ರಯದಲ್ಲಿ ತಾಳ್ಮೆ ಸಹನೆ ಅಗತ್ಯ. ಸ್ವಪ್ರಯತ್ನದಿಂದ ಧನಾಗಮ. ಸಹೋದರಾದಿ ವರ್ಗದಲ್ಲಿ ಪ್ರೋತ್ಸಾಹ. ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಅರಣ್ಯ ಪ್ರದೇಶ ಸಂಚಾರ. ದೇವತಾ ಸ್ಥಳ ಸಂದರ್ಶನ.

Advertisement

ವೃಷಭ: ಬಂಧುಗಳಿಂದ ಪ್ರೋತ್ಸಾಹ. ಗಂಟಲು ಸಂಬಂಧ ಆರೋಗ್ಯ ಗಮನಿಸಿ. ಗೌರವದಿಂದ ಕೂಡಿದ ಸ್ಥಾನಮಾನ ಧನಾರ್ಜನೆ. ಕುಟುಂಬ ಸಮೇತ ಸಂಚಾರ. ಮಕ್ಕಳ ವಿಚಾರದಲ್ಲಿ ತೃಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಚಟುವಟಿಕೆ. ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿರಿ.

ಮಿಥುನ: ಬಹು ಮಾತನಾಡಿ ತೊಂದರೆಗೊಳಗಾಗದಿರಿ. ಆರೋಗ್ಯದ ಬಗ್ಗೆ ಗಮನ ವಿರಲಿ. ಉದ್ಯೋಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ. ಸ್ತ್ರೀಪುರುಷರು ಪರಸ್ಪರ ಪ್ರೋತ್ಸಾಹಿಸಿ ಕಾರ್ಯ ಸಾಧಿಸಿ. ಹಿರಿಯರ ಆರೋಗ್ಯ ಉತ್ತಮ. ವಿದ್ಯಾರ್ಥಿಗಳು ಪರಿಶ್ರಮಿಸಿದರೆ ನಿರೀಕ್ಷಿತ ಫ‌ಲ.

ಕರ್ಕ: ಮಕ್ಕಳಲ್ಲಿ ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಪ್ರಯತ್ನದಿಂದ ಸುಖ ಸಂತೋಷ. ಬರಬೇಕಾದ ಸಂಪತ್ತಿಗೆ ಪ್ರಯತ್ನಿಸಿದರೆ ಸಿಗುವ ಅವಕಾಶ. ಸಹೋದರರಿಂದ ಸಂತೋಷದ ವಾರ್ತೆ. ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನ ಗೌರವ ಪ್ರಾಪ್ತಿ. ಹಿರಿಯರ ಆರೋಗ್ಯ ಗಮನಿಸಿ.

ಸಿಂಹ: ಕೆಲಸ ಕಾರ್ಯಗಳ ಗುಣದೋಷ ಅರಿಯದೇ ಉತ್ಸಾಹದಿಂದ ಧುಮುಕದಿರಿ. ಸಮುದ್ರೋತ್ಪನ್ನ ವಸ್ತುಗಳಲ್ಲಿ ಆಸಕ್ತಿ. ದೇವತಾ ಕಾರ್ಯಕ್ಕೆ ಧನವ್ಯಯ. ಮಕ್ಕಳಿಂದ ಸಂತೋಷ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ. ಗೃಹೋಪ ವಸ್ತು ಸಂಗ್ರಹ. ಆರೋಗ್ಯ ನಿಗಾ ವಹಿಸಿ.

Advertisement

ಕನ್ಯಾ: ನೀರಿನಿಂದ ಉದ್ಭವಿಸಿದ ಪದಾರ್ಥಗಳ ಕ್ರಯವಿಕ್ರಯದಲ್ಲಿಯೂ, ವಿದೇಶ ವ್ಯವಹಾರ ದಲ್ಲಿಯೂ ಉತ್ತಮ ಲಾಭದಾಯಕ. ವಿದ್ಯಾರ್ಥಿಗಳಿಗೆ ಸಂಶೋಧಕರಿಗೆ ಅತ್ಯುತ್ತಮ ದಿನ. ದೇವತಾ ಕಾರ್ಯದಲ್ಲಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ.

ತುಲಾ: ಅವಿವಾಹಿತರಿಗೆ ಸೂಕ್ತ ಸಂಬಂಧ ಒದಗುವ ಸಮಯ. ದಾಂಪತ್ಯ ಸುಖ ವೃದ್ಧಿ. ರಾಜಕೀಯ ಕ್ಷೇತ್ರದವರಿಗೂ ಸರಕಾರಿ ವರ್ಗದವರಿಗೂ ಅಭ್ಯುದಯ. ವಿದ್ಯಾರ್ಥಿಗಳಿಗೆ ಸ್ವಾರಸ್ಯ ವೃದ್ಧಿ. ಅನಿರೀಕ್ಷಿತ ಧನಾಗಮನ. ಅಧಿಕ ವ್ಯಯ. ಆರೋಗ್ಯ ವೃದ್ಧಿ.

ವೃಶ್ಚಿಕ: ನಿರೀಕ್ಷಿತ ಸ್ಥಾನ ಸುಖ. ಮೇಲಧಿ ಕಾರಿಗಳಿಂದ ಸಹಾಯ. ಉತ್ತಮ ಧನ ಸಂಪತ್ತು. ಸಾಂಸಾರಿಕ ಸುಖ, ವಿದ್ಯಾರ್ಥಿಗಳಿಗೆ ಅವಿವಾಹಿತರಿಗೆ ಅನುಕೂಲಕರ ಪರಿಸ್ಥಿತಿ. ಆಹಾರೋದ್ಯಮ, ಹೈನುಗಾರಿಕೆ, ವಸ್ತ್ರೋದ್ಯಮ, ಆಭರಣ ವ್ಯವಹಾರಸ್ಥರಿಗೆ ಶುಭ.

ಧನು: ಆರೋಗ್ಯ ಗಮನಿಸಿ. ನಿರೀಕ್ಷಿತ ಸಹಾಯ ಸಿಗದು. ಸ್ವಂತ ಪ್ರಯತ್ನದಲ್ಲಿ ವಿಶ್ವಾಸವಿಟ್ಟು ಕಾರ್ಯ ಸಾಧಿಸಿಕೊಳ್ಳಿ. ಮೇಲಧಿಕಾರಿಗಳಲ್ಲಿ ಸಂಯಮದಿಂದ ವ್ಯವಹರಿಸಿ. ಪಾಲುದಾರಿಕಾ ಕ್ಷೇತ್ರದವರು ತಾಳ್ಮೆ ಕಳೆದುಕೊಳ್ಳಬಾರದು. ಗೃಹದಲ್ಲಿ ಸರ್ವರ ಸಹಕಾರ ಪ್ರೋತ್ಸಾಹ.

ಮಕರ: ಮಾತೃಸಮಾನರ ಕಾರ್ಯ ನಿರ್ವಹಿಸಿದ ಸಮಾದಾನ. ಆರೋಗ್ಯ ಸ್ಥಿರ. ಧನಾರ್ಜನೆಗೆ ಸಮನಾದ ವ್ಯಯ. ನೇರ ಮಾತುಗಾರಿಕೆ ಸಲ್ಲದು. ಅಧ್ಯಯನ ಪ್ರವೃತ್ತರಿಗೆ ಅನುಕೂಲಕರ ಸಮಯ. ಉದ್ಯೋಗದಲ್ಲಿ ಅಧಿಕ ಜವಾಬ್ದಾರಿ. ಸಂಸಾರದಲ್ಲಿ ಪರಸ್ಪರ ಪ್ರೋತ್ಸಾಹ.

ಕುಂಭ: ಬಂದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಆತುರತೆ ಸಲ್ಲದು. ಪ್ರಯತ್ನದಿಂದ ಸುಖ ಸಮೃದ್ಧಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ. ಆರೋಗ್ಯದಲ್ಲಿ ಗಮನ. ವ್ಯಾಪಾರಸ್ಥರಿಗೆ ಉತ್ತಮ ದಿನ. ಮಿತ್ರರ ಸಹಾಯದಿಂದ ನಿರೀಕ್ಷಿತ ಕಾರ್ಯ ಸಫ‌ಲತೆ.

ಮೀನ: ಮಕ್ಕಳ ಆರೋಗ್ಯದ ಕಡೆ ಗಮನಿಸಿ. ಪ್ರಯಾಣದಿಂದ ಲಾಭ. ದೂರದ ಕಾರ್ಯದಲ್ಲಿ ಜಯ. ವಿದ್ಯಾರ್ಥಿಗಳಿಗೆ ಅಧ್ಯಯನಶೀಲರಿಗೆ ನಿರೀಕ್ಷಿತ ಸ್ಥಾನ ಸುಖ. ಧನಾರ್ಜನೆಗೆ ಉತ್ತಮವಿದ್ದರೂ ವಿಳಂಬವಾಗಿ ಕೈ ದೊರೆಯುವುದು. ಉತ್ತಮ ಅಧಿಕಾರಿಗಳು ಗುರುಹಿರಿಯರ ಆಶೀರ್ವಾದರಿಂದ ಅಭಿವೃದ್ಧಿ

Advertisement

Udayavani is now on Telegram. Click here to join our channel and stay updated with the latest news.

Next