Advertisement

Daily Horoscope: ಕುಟುಂಬದಲ್ಲಿ ಕಿರಿಯರ ವಿವಾಹ ಪ್ರಸ್ತಾವ, ನೌಕರರಿಗೆ ಆರ್ಥಿಕ ಪ್ರೋತ್ಸಾಹ

07:27 AM Dec 12, 2024 | Team Udayavani |

ಮೇಷ: ಮನೋಬಲದ ಮೇಲೆ ಅವಲಂಬನೆಯಿಂದ ಯಾವುದನ್ನೂ ಸಾಧಿಸಬಹುದು. ಉದ್ಯೋಗ, ಉದ್ಯಮದ ಕುರಿತು ಚಿಂತನೆ. ಅಪರೂಪದ ನೆಂಟರೊಂದಿಗೆ ಸಮಾಗಮ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ.

Advertisement

ವೃಷಭ: ಕಾರ್ಯಕ್ಷೇತ್ರ ವಿಸ್ತರಣೆ ಸಂಬಂಧ ಸಮಾಲೋಚನೆ. ಅಪರೂಪದ ಅತಿಥಿಗಳ ಆಗಮನ. ದೇವತಾ ಸಾನ್ನಿಧ್ಯದಲ್ಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ. ಕೃಷಿ ಕ್ಷೇತ್ರದಲ್ಲಿ ಸಮಾರಂಭ ಆಯೋಜನೆ. ಹಿರಿಯ ವಿದ್ವಾಂಸರಿಗೆ ಸಮ್ಮಾನ.

ಮಿಥುನ: ಮನೆಮಂದಿಯಲ್ಲಿ ಉತ್ಸಾಹ ತುಂಬುವ ಕಾರ್ಯಕ್ರಮಗಳು. ದೇವತಾರ್ಚನೆಗೆ ಸಿದ್ಧತೆಗಳು. ಧರ್ಮಶಾಸ್ತ್ರಜ್ಞರ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗುವಿರಿ. ಕುಟುಂಬದಲ್ಲಿ ಕಿರಿಯರ ವಿವಾಹ ಪ್ರಸ್ತಾವ.

ಕರ್ಕಾಟಕ: ಕುಟುಂಬದ ಸದಸ್ಯರ ಸಮ್ಮಿಲನ ದಲ್ಲಿ ಸಂತೋಷ ಸಮಾರಂಭ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿಗಳ ಮಾರಾಟಗಾರರಿಗೆ ವ್ಯಾಪಾರದ ಭರಾಟೆ. ಮನೆಯ ಸಮಾರಂಭಕ್ಕೆ ಗಣ್ಯರ ಆಗಮನ. ಅವಿವಾಹಿತರಿಗೆ ವಿವಾಹದ ಪ್ರಸ್ತಾವ.

ಸಿಂಹ: ಉದ್ಯೋಗದ ಸ್ಥಾನದಲ್ಲಿ ಕಾರ್ಯಕ್ರಮಗಳ ನೇತೃತ್ವ. ಉದ್ಯಮದ ನೌಕರರಿಗೆ ಆರ್ಥಿಕ ಪ್ರೋತ್ಸಾಹ. ವ್ಯವಹಾರ ಅಭಿವೃದ್ಧಿಯ ಸಂಬಂಧ ಸಣ್ಣ ಪ್ರವಾಸ. ಕುಟುಂಬದ ಹಿರಿಯರ ಮನೆ ಯಲ್ಲಿ ದೇವತಾ ಕಾರ್ಯಕ್ರಮ.

Advertisement

ಕನ್ಯಾ: ತುರ್ತು ಕಾರ್ಯವೊಂದಕ್ಕೆ ಸಿದ್ಧತೆಗಳು. ಸಮಾಜದ ಗಣ್ಯರ ಸಮ್ಮಿಲನದಲ್ಲಿ ಭಾಗಿ ಯಾಗುವಿರಿ. ದೀರ್ಘ‌ಕಾಲದ ಆಸ್ತಿ ವಿವಾದಕ್ಕೆ ನಿರೀಕ್ಷಿತ ರೀತಿಯಲ್ಲಿ ಪರಿಹಾರ. ನೂತನ ವಾಹನ ಖರೀದಿಯಿಂದ ಮನೆಮಂದಿಗೆ ಹರ್ಷ.

ತುಲಾ: ದೇವತಾನುಗ್ರಹದಿಂದ ಸುಸೂತ್ರವಾಗಿ ನಡೆದ ಕಾರ್ಯಕ್ರಮಗಳು. ಅಪರೂಪ ದಲ್ಲಿ ಅತಿಥಿ ಸತ್ಕಾರ ಯೋಗ. ಆಧ್ಯಾತ್ಮಿಕ ಚಿಂತನೆ, ಸದ್ಗ್ರಂಥ ಪಾರಾಯಣ, ಸಂಗೀತ ಶ್ರವಣ, ಭಜನೆ, ಕೀರ್ತನೆಗಳಲ್ಲಿ ಕಾಲಯಾಪನೆ.

ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ಸಂಸ್ಥೆಯ ಸದಸ್ಯರ ಸಮ್ಮಿಲನ. ಸ್ವಂತ ಉದ್ಯಮದ ಸ್ಥಾನ ದಲ್ಲಿ ಸಂತೋಷಕೂಟ ಆಯೋಜನೆ. ಧಾರ್ಮಿಕ ಸ್ವರೂಪದ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಚಿಂತನೆಗೆ ಅವಕಾಶ ಕಲ್ಪನೆ. ಸಮಾಜದಲ್ಲಿ ಎಲ್ಲರಿಗೂ ಹರ್ಷ.

ಧನು: ಸಹೋದ್ಯೋಗಿಗಳ ಜತೆಯಲ್ಲಿ ಸಂತಸ ಆಚರಣೆ. ಉದ್ಯೋಗಾರ್ಥಿಗಳಿಗೆ ನೆರವು. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಹಳೆಯ ಒಡನಾಡಿಯ ಅನಿರೀಕ್ಷಿತ ಭೇಟಿಯ ಆನಂದ.

ಮಕರ: ಉದ್ಯೋಗ ಸ್ಥಾನದಲ್ಲಿ ಹರ್ಷದ ವಾತಾವರಣ. ದೇವತಾ ಸನ್ನಿಧಿಗೆ ಸಂದರ್ಶನ. ಇಷ್ಟದೇವರ ಅನುಗ್ರಹದಿಂದ ಸಂಕಲ್ಪ ಸಿದ್ಧಿ. ಮಕ್ಕಳ ಆನಂದಕ್ಕಾಗಿ ಸಂಭ್ರಮದಲ್ಲಿ ಭಾಗಿಯಾಗುವ ಅನಿವಾರ್ಯತೆ. ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.

ಕುಂಭ: ಸಂಪತ್ತಿನ ಸದ್ವಿನಿಯೋಗಕ್ಕೆ ಕಾರ್ಯಯೋಜನೆ. ತಂದೆಯ ಊರಿನ ಬಂಧುಗಳ ಆಗಮನ. ಹತ್ತಿರದ ದೇವಾಲಯಕ್ಕೆ ಭೇಟಿ. ಧಾರ್ಮಿಕ ಸಂಸ್ಥೆಯ ಸದಸ್ಯರೊಂದಿಗೆ ಆಸ್ಪತ್ರೆ, ಅನಾಥಾಲಯಗಳಿಗೆ ಸಂದರ್ಶನ.

ಮೀನ: ಕುಟುಂಬದ ಸದಸ್ಯರ ಸಮ್ಮಿಲನ. ತಾಯಿಗೆ ಅಥವಾ ತಾಯಿಯ ಸ್ಥಾನದಲ್ಲಿರುವ ವ್ಯಕ್ತಿಗೆ ಗೌರವಾರ್ಪಣೆ. ಉದ್ಯೋಗ ಸ್ಥಾನದಲ್ಲಿರುವ ಸಹಯೋಗಿಗಳಿಗೆ ಸತ್ಕಾರ. ಗುರುಸನ್ನಿಧಿಗೆ ತೆರಳಲು ಸಿದ್ಧತೆ. ಧಾರ್ಮಿಕ ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲುಗೊಳ್ಳುವ ಅವಕಾಶ.

Advertisement

Udayavani is now on Telegram. Click here to join our channel and stay updated with the latest news.

Next