Advertisement

Daily Horoscope: ಭಾವೋದ್ವೇಗಕ್ಕೆ ಒಳಗಾಗದಿರಿ, ಹಿರಿಯರ ಆಪ್ತ ಸಲಹೆಯನ್ನು ಮನ್ನಿಸಿ

07:20 AM Aug 14, 2023 | Team Udayavani |

ಮೇಷ: ಸಂಶಯ ಪ್ರವೃತ್ತಿಯನ್ನು ದೂರವಿಡಿ.ದೈವಭಕ್ತಿ,ಆತ್ಮ ವಿಶ್ವಾಸದಿಂದ ಕಾರ್ಯಸಿದ್ಧಿ. ದೂರದ ನೆಂಟರ ಆಗಮನ. ದಾಂಪತ್ಯ ಜೀವನದಲ್ಲಿ ಆಗೌರವಮಕ್ಕಳಿಗೆ ಸಂಭ್ರಮ.

Advertisement

ವೃಷಭ: ಮುನ್ನುಗ್ಗುವ ಪ್ರವೃತ್ತಿಗೆ ಕಡಿವಾಣ ಹಾಕಿ. ಉದ್ಯೋಗದಲ್ಲಿ ಹೊಸ ಅವಕಾಶ. ಹಿರಿಯರ ಆರೋಗ್ಯ ಗಮನಿಸಿ. ಸಂಗಾತಿಗೆ ಸಂತೃಪ್ತಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಯಶಸ್ಸು. ಗೃಹದಲ್ಲಿ ನೆಮ್ಮದಿ. ಮಕ್ಕಳೊಂದಿಗೆ ಹಿರಿಯರೊಂದಿಗೆ ಕಾಲ ಕಳೆಯಿರಿ.

ಮಿಥುನ: ಭಾವೋದ್ವೇಗಕ್ಕೆ ಒಳಗಾಗದಿರಿ. ಹಿರಿಯರ ಆಪ್ತ ಸಲಹೆಯನ್ನು ಮನ್ನಿಸಿ. ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ.ಮಕ್ಮಳಿಂದ ಸಂತೋಷ.ಅವಿವಾಹಿತರಿಗೆ ಶುಭ ವಾರ್ತೆ. ದೇವತಾ ಸ್ಥಳಕ್ಕೆ ಪ್ರಯಾಣ.

ರ್ಕ: ಹೊಸ ಹೂಡಿಕೆಗೆ ತೊಡಗುವಾಗ ಎಚ್ಚರ. ಹಿತಶತ್ರುಗಳ ವಿಷಯದಲ್ಲಿ ಜಾಗರೂಕರಾಗಿರಿ. ದೂರದಿಂದ ಶುಭವಾರ್ತೆ.ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ನೆಮ್ಮದಿಯ ವಾತಾವರಣ. ಹಳೆಯ ಮಿತ್ರರ ಭೇಟಿಯಾಗುವ ಸಮಯ.

ಸಿಂಹ: ಯಾವುದೇ ಕಾರಣಕ್ಕೂ ನಿರಾಶೆ ಸಲ್ಲದು. ಆತ್ಮಗೌರವ ಕಾಯ್ದುಕೊಳ್ಳಿರಿ. ಉದ್ಯಮದಲ್ಲಿ ಯಶಸ್ಸು.ಉತ್ತರ ದಿಕ್ಕಿನಿಂದ ಶುಭವಾರ್ತೆ.ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲ.ಹಿರಿಯರ ಆರೋಗ್ಯ ವೃದ್ಧಿ. ಪ್ರಯತ್ನಬಲದಿಂದ ದೈವಾನುಗ್ರಹದಿಂದ ಯಶಸ್ಸು.

Advertisement

ಕನ್ಯಾ: ಅಲ್ಪ ಲಾಭದಲ್ಲಿ ತೃಪ್ತರಾಗಿರಿ. ಕ್ಷಣಿಕ ವಿಘ್ನಗಳಿಂದ ವಿಚಲಿತರಾಗದಿರಿ. ಮನೆಯವರ ಸಹಕಾರ, ಪ್ರೋತ್ಸಾಹ ಲಭ್ಯ. ನೆರೆಯವರಿಂದ ಪ್ರೀತಿಯ ನಡವಳಿಕೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉತ್ತಮ ಸಂಪಾದನೆ.

ತುಲಾ: ಚಂಚಲ ಚಿತ್ತವನ್ನು ಸ್ಥಿರವಾಗಿಸಲು ಯತ್ನಿಸಿ. ದೇವತಾರ್ಚನೆಯಿಂದ ಸಂಕಲ್ಪ ಸಿದ್ಧಿ. ದೂರ ಪ್ರಯಾಣ ಸಂಭವ. ಆಪ್ತರಿಂದ ಸಹಾಯ. ಸಂಸಾರ ಸುಖದಲ್ಲಿ ತೃಪ್ತಿ. ಮಕ್ಕಳ ಬಗ್ಗೆ ತಾರತಮ್ಯ ಮಾಡದೇ ಸಮಾನವಾಗಿ ನೋಡಿ.

ವೃಶ್ಚಿಕ: ಸೇಡಿನ ಮನೋಭಾವದಿಂದ ದೂರವಿರಿ.ಪ್ರೀತಿಯಿಂದ ಕಾರ್ಯಸಿದ್ಧಿ.ಉತ್ತಮ ಆರೋಗ್ಯ ಭಾಗ್ಯ. ನೂತನ ಗೃಹ ನಿರ್ಮಾಣ ಯೋಗ. ಅವಿವಾಹಿತರಿಗೆ ಶುಭ ಯೋಗ. ಮಕ್ಕಳಿಂದ ನೆಮ್ಮದಿ. ರಾಜಕಾರಣಿಗಳಿಗೆ ಶುಭ ಯೋಗ.

ಧನು: ಆಪ್ತರ ಸಲಹೆಯ ಮೂಲಕ ಕಾರ್ಯ ಸಿದ್ಧಿ.ದಕ್ಷಿಣ ದಿಕ್ಕಿಗೆ ಪ್ರಯಾಣ ಸಂಭವ.ಹೊಸ ಉದ್ಯಮಕ್ಕೆ ಅವಸರ ಬೇಡ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಹಿರಿಯರ ಆರೋಗ್ಯದತ್ತ ಗಮನವಿರಲಿ.

ಮಕರ: ಕಾರ್ಯಕ್ಷೇತ್ರ ವಿಸ್ತರಣೆಗೆ ಸಕಾಲ. ಅಪರೂಪದ ವ್ಯಕ್ತಿಗಳ ಭೇಟಿ. ಹತ್ತಿರದ ದೇವತಾ ಸ್ಥಳ ಸಂದರ್ಶನದಿಂದ ಶುಭ. ಸಂಗಾತಿಯ ಆರೋಗ್ಯವನ್ನು ಗಮನಿಸಿ.ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸು.

ಕುಂಭ: ಸಂಚಿತ ಧನದ ಸದ್ವಿನಿಯೋಗ. ಉದ್ಯೋಗದಲ್ಲಿ ಉತ್ತಮ ಸಾಧನೆ.ಸಮಾಜದಲ್ಲಿ ಗೌರವ ವೃದ್ಧಿ.ಸ್ವಂತದ ಆರೋಗ್ಯ ಗಮನಿಸಿ. ಸಂಬಂಧವಿಲ್ಲದ ವಿಷಯಗಳಲ್ಲಿ ತಲೆ ಕೆಡಿಸಿಕೊಳ್ಳಬೇಡಿ. ಸಮಾಜ ಸೇವೆಗೆ ಆದ್ಯತೆ.

ಮೀನ: ಹಿರಿಯರ ಆರೋಗ್ಯ ಉತ್ತಮ. ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ. ಅನಿರೀಕ್ಷಿತ ಧನ ಲಾಭ. ದೂರ ಪ್ರಯಾಣ ಸಂಭವ.ಮನೆಯಲ್ಲಿ ಸಂತೋಷದ ವಾತಾವರಣ. ಪ್ರವಾಸ ಕಾರ್ಯಕ್ಕೆ ತೊಡಗುವಿರಿ.

Advertisement

Udayavani is now on Telegram. Click here to join our channel and stay updated with the latest news.

Next