Advertisement
ವೃಷಭ: ಆರಂಭದಲ್ಲಿದ್ದ ದೊಡ್ಡ ಪ್ರಮಾಣದ ಪ್ರಗತಿಯ ನಿರೀಕ್ಷೆ ಮುಂದುವರಿಕೆ. ಕೃಷಿ ಕ್ಷೇತ್ರದಲ್ಲಿ ಕೈಗೊಂಡ ಪ್ರಯೋಗಗಳ ಮುಂದಿನ ಹಂತ ಆರಂಭ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯುವ ಪ್ರಯತ್ನ ವಿಫಲ.ಸತ್ಯ ಹೇಳಿ ನಿಷ್ಠುರಕ್ಕೆ ಗುರಿಯಾಗುವಿರಿ.
Related Articles
Advertisement
ಕನ್ಯಾ: ಪರಿಣತಿ ಹೊಂದಿರುವ ವೃತ್ತಿಯಲ್ಲಿ ಸ್ಥಿರವಾಗುವ ಪ್ರಯತ್ನ. ಸಹೋದ್ಯೋಗಿಗಳಿಂದ ಪ್ರತಿಭೆಗೆ ಗೌರವ. ಕುಟುಂಬದ ಹಿರಿಯ ವ್ಯಕ್ತಿಯಿಂದ ಸಹಾನುಭೂತಿಯ ಸಹಕಾರ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿಗೆ ಪೂರಕ ವಾತಾವರಣ.
ತುಲಾ: ಆಡಂಬರ ಪ್ರದರ್ಶಿಸುವವರೆದುರು ಅಳುಕಬೇಡಿ. ಯೋಗ್ಯತೆಗೆ ಸರಿಯಾದ ಗೌರವ ಪ್ರಾಪ್ತಿ. ಹಿತಶತ್ರುಗಳ ಸಂಚಿಗೆ ಸೋಲು. ಗುರುಸ್ಥಾನದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ. ದೇವತಾ ಸಾನ್ನಿಧ್ಯ ದರ್ಶನ.
ವೃಶ್ಚಿಕ: ದೈಹಿಕ, ಮಾನಸಿಕ ಆರೋಗ್ಯ ಪಾಲನೆಗೆ ಚ್ಯುತಿಯಿಲ್ಲ. ಉದ್ಯೋಗ ಸ್ಥಾನ ದಲ್ಲಿ ಯಥಾಸ್ಥಿತಿ ಮುಂದುವರಿಕೆ. ಉದ್ಯಮಿಗಳಿಗೆ ಎದುರಾಳಿಗಳಿಂದ ಹೊಸ ಬಗೆಯ ಪೈಪೋಟಿ. ಸಹಕಾರಿ ಸಂಸ್ಥೆಗಳ ಸ್ಥಿತಿ ಸುಧಾರಣೆ.
ಧನು: ಛಲದಿಂದ ಕಂಡುಕೊಂಡ ಸಂಪಾದನೆಯ ಮಾರ್ಗದ ಕುರಿತು ತೃಪ್ತಿ. ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ . ಮಹಿಳೆಯರ ಉಸ್ತುವಾರಿಯ ಖಾದ್ಯ ಪದಾರ್ಥಗಳ ಘಟಕಕ್ಕೆ ದಾಖಲೆಯ ಪ್ರಮಾಣದಲ್ಲಿ ಲಾಭ.
ಮಕರ: ವೃತ್ತಿಯಲ್ಲಿ ಪರಿಣತಿ ಹೆಚ್ಚಿಸಿಕೊಂಡ ಕಾರಣ ಇಮ್ಮಡಿಯಾದ ಆತ್ಮವಿಶ್ವಾಸ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಕ್ತಾಯ. ಉದ್ಯಮ ಉತ್ಪನ್ನಗಳ ಗುಣಮಟ್ಟ ಸುಧಾರಣೆಯಿಂದಾಗಿ ಮಾರಾಟ ವೃದ್ಧಿ.
ಕುಂಭ: ವಾರಂತ್ಯದ ಮುನ್ನಾದಿನ ಕುಗ್ಗದ ಹುರುಪಿನೊಂದಿಗೆ ಕಾರ್ಯರಂಗಕ್ಕೆ ಪ್ರವೇಶ. ಟೈಲರಿಂಗ್ ವೃತ್ತಿ ಬಲ್ಲವರಿಗೆ ಉದ್ಯೋಗಾವ ಕಾಶ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯಗಳು ಬಹುಪಾಲು ಮುಕ್ತಾಯ. ಮಾರುಕಟ್ಟೆ ಜಾಲ ವಿಸ್ತರಣೆ. ಆಯೋಜಿತ ಸೇವಾ ಕಾರ್ಯಗಳಲ್ಲಿ ಭಾಗಿ.
ಮೀನ: ಸಪ್ತಾಹ ಮುಗಿಯುತ್ತಾ ಬಂದಂತೆ ಇನ್ನಷ್ಟು ಕಾರ್ಯಗಳ ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳ ಕಡೆಗೆ ಗಮನಹರಿಸಬೇಕಾದ ಸಂದರ್ಭ. ಸರಕಾರಿ ಇಲಾಖೆಗಳವರಿಂದ ಸಹಕಾರ. ಉಪಕೃತ ಸಾರ್ವಜನಿಕರಿಂದ ಪ್ರಶಂಸೆ. ಕೃಷಿಕರ ಅನುಕೂಲಕ್ಕೆ ಹೊಸ ಕ್ರಮಗಳು. ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ.