ನಾಗಾಲ್ಯಾಂಡ್: ಹಾರ್ನ್ ಬಿಲ್ ನಲ್ಲಿ ನಡೆದ 20ನೇ ವರ್ಷದ ಹಾರ್ನ್ ಬಿಲ್ ಫೆಸ್ಟಿವಲ್‌ಗೆ ತೆರೆ ಬಿದ್ದಿದೆ. ಡಿಸೆಂಬರ್ 1ರಿಂದ 6ರ ವರೆಗೆ ಈ ಹಬ್ಬ ನಡೆದಿತ್ತು. ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಯುವ ನಾಗಾಲ್ಯಾಂಡ್‌ನ ಅತೀ ದೊಡ್ಡ ವಾರ್ಷಿಕ ಹಬ್ಬವಾಗಿದೆ. ಇದು ವಿಶ್ವದೆಲ್ಲೆಡೆಯಿಂದ ಬೃಹತ್ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಪ್ರವಾಸೋದ್ಯಮ, ಕಲಾ ಮತ್ತು ಸಂಸ್ಕೃತಿ ಇಲಾಖೆಗಳು ಕೊಹಿಮಾದಿಂದ 12 ಕಿ.ಮೀ. ದೂರದಲ್ಲಿರುವ ನಾಗಾ ಹೆರಿಟೇಜ್ ವಿಲೇಜ್‌ನಲ್ಲಿ ಈ ಫೆಸ್ಟಿವಲ್ ಅನ್ನು ಆಯೋಜಿಸಲಾಗುತ್ತದೆ.
ಇದು ನಾಗಾ ಬುಡಕಟ್ಟು ಜನರ ಜೀವನ ಮತ್ತು ಇತಿಹಾಸದ ಕಡೆ ಸಂಪೂರ್ಣ ಬೆಳಕು ಚೆಲ್ಲುತ್ತದೆ. ಏಳು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ವಿವಿಧ ನಾಗಾ ಬುಡಕಟ್ಟು ಜನಾಂಗಗಳ ಶ್ರೀಮಂತ ಮತ್ತು ಸ್ಪಂದನಶೀಲ ಸಂಸ್ಕೃತಿಯನ್ನು ತೋರಿಸುತ್ತದೆ. ಹಾರ್ನ್ ಬಿಲ್ ಹಕ್ಕಿಯ ಗರಿಯನ್ನು ನಾಗಾ ಬುಡಕಟ್ಟು ಜನರು ತಮ್ಮ ಶಿರವಸ್ತ್ರದಲ್ಲಿ ಅಳವಡಿಸಿರುವ ಕಾರಣ ಈ ಹಬ್ಬಕ್ಕೆ ಹಾರ್ನ್ ಬಿಲ್ ಹೆಸರು ಬಂದಿದೆ.
ಆಚರಣೆಗಳು ನೃತ್ಯ ಪ್ರದರ್ಶನ, ಕರಕುಶಲ, ಮೆರವಣಿಗೆಗಳು, ಆಟಗಳು, ಕ್ರೀಡೆ, ಆಹಾರ ಜಾತ್ರೆಗಳು ಮತ್ತು ಧಾರ್ಮಿಕ ಸಮಾರಂಭಗಳು ಒಳಗೊಂಡಿತ್ತು. ಉತ್ಸವದಲ್ಲಿ ಭಾಗವಹಿಸುವ ಪ್ರವಾಸಿಗಳು ನಾಗಾ ಜೀವನದ ವಿವಿಧ ಅಂಶಗಳನ್ನು ಬಿಂಬಿಸುವ ಸಾಂಪ್ರದಾಯಿಕ ವರ್ಣಚಿತ್ರಗಳು, ಮರದ ಕೆತ್ತನೆಗಳು, ಶಾಲುಗಳು ಮತ್ತು ಶಿಲ್ಪಕಲೆಗಳು ಸೈರಿದಂತೆ ಮನೆ ವಿವಿಧ ನಾಗಾ ಸ್ಮರಣಿಕೆಗಳು ದೊರೆಯುತ್ತದೆ. ನಾಗಾ ವೀರರ ಕೆಚ್ಚೆದೆಯ ಕೆಲಸವನ್ನು ಹೊಗಳುವ ಹಾಡುಗಳು ಹಬ್ಬದ ಸಮಯದಲ್ಲಿ ದೊಡ್ಡ ಆಕರ್ಷಣೆಗಳಲ್ಲಿ ಒಂದಾಗಿದೆ.
ಈ ವರ್ಷ ಸುಮಾರು 1 ಲಕ್ಷ ಜನರು ಈ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಈ ವರ್ಷ 20ನೇ ವರ್ಷಾಚರಣೆಯಲ್ಲಿ ಈ ಸಂಭ್ರಮ ಕಳೆಗಟ್ಟಿದ್ದು, 1,09,945 ಮಂದಿ ಈ ವರ್ಷ ಭಾಗಿಯಾಗಿದ್ದಾರೆ. ಅದರಲಿ 87,427 ಮಂದಿ ಸ್ಥಳೀಯರಾಗಿದ್ದು, 20,095 ಇತರ ರಾಜ್ಯದವರಾಗಿದ್ದಾರೆ. 2,423 ವಿದೇಶಿಗರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಕಡೆಯ ದಿನವಾದ ಡಿಸೆಂಬರ್ 6ರಂದು ಸುಮಾರು 17 ಬುಡಗಟ್ಟು ಪಂಗಡದ ಜನರು ನಾನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.