Advertisement

ರೋಹಿತ್‌, ಧವನ್‌ ಯಂತ್ರಿಸಲು ಯೋಜನೆ: ಪೆರೆರ

06:05 AM Dec 17, 2017 | Team Udayavani |

ವಿಶಾಖಪಟ್ಟಣ: ಪಂದ್ಯಾವನ್ನು ಯಾವ ಕ್ಷಣದಲ್ಲಾದರೂ ತಿರುಗಿಸಬಲ್ಲ ಸಾಮಾರ್ಥ್ಯವಿರುವ ಭಾತರದ ಬ್ಯಾಟ್ಸ್‌ಮನ್‌ಗಳಾದ ನಾಯಕ ರೋಹಿತ್‌ ಶರ್ಮ ಮತ್ತು ಶಿಖರ್‌ ಧವನ್‌ ಅವರನ್ನು ಕಟ್ಟಿಹಾಲು ನಮ್ಮಲ್ಲಿ ತಂತ್ರಗಳಿವೆ ಎಂದು ಶ್ರೀಲಂಕಾ ತಂಡದ ನಾಯಕ ತಿಸರ ಪೆರೆರ ತಿಳಿಸಿದ್ದಾರೆ.

Advertisement

ಭಾತರ-ಶ್ರೀಲಂಕಾ ನಡುವಣ ಮೂರನೇ ಏಕದಿನ ಪಂದ್ಯದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅವರು, ಶ್ರೀಲಂಕಾ ಮತ್ತು ವಿಶಾಖಪಟ್ಟಣದ ಹವಾಗುಣ ಸಾಧಾರಣ ಒಂದೇರೀಯಿದ್ದು, ನಡೆಯಲಿರುವ ಪಂದ್ಯ ವಿಶೇಷದ್ದೆನಿಸಲಿದೆ. ರೋಹಿತ್‌ ಶರ್ಮ ಮತ್ತು ಶಿಖರ್‌ ಧವನ್‌ರನ್ನು ನಿಯಂತ್ರಿಸಲು ತಂತ್ರಗಳೂ ನಮ್ಮೊಂದಿಗಿದ್ದು, ಬೌಲರ್‌ಗಳು ಆ ತಂತ್ರಗಳನ್ನು ಹೇಗೆ ಕಾರ್ಯಗತಗೊಳಿಸಲಿದ್ದಾರೆ ಎಂಬುದರ ಮೇಲೆ ಅದು ನಿಂತಿದೆ ಎಂದಿದ್ದಾರೆ.

ಸರಣಿಯ ಅಂತಿಮ ಹಣಾಹಣಿಗೆ ಎಲ್ಲ ರೀತಿಯಲ್ಲಿ ತಂಡ ತಯಾರಾಗಿದೆ. ಮೊಹಾಲಿಯಲ್ಲಿನ ಸೋಲು ಮರುಕಳಿಸಲು ಬಿಡುವುದಿಲ್ಲ. ಪಂದ್ಯ ಗೆಲ್ಲುವ ನಿಟ್ಟಿನಲ್ಲಿ ನಾವು ಮಾನಸಿಕವಾಗಿಯೂ ತಯಾರಾಗಿದ್ದೇವೆ. ಧರ್ಮಶಾಲಾ ಪಂದ್ಯದಂತೆ ನಾವು ಬ್ಯಾಟ್ಸ್‌ಮನ್‌ಗಳನ್ನು ಶೀಘ್ರ ಪೆವಿಲಿಯನ್‌ಗಟ್ಟುವ ತಂತ್ರದ ಮೂಲಕ ಭಾರತ ಆಟಗಾರರನ್ನು ಕಟ್ಟಿಹಾಕಲಿದ್ದೇವೆ ಎಂದು ತಿಳಿಸಿದ್ದಾರೆ.

ಸರಣಿಯ ಅಂತಿಮ ಪಂದ್ಯವೆಂಬ ಒತ್ತಡ ಇದ್ದೇ ಇದೆ. ಆದರೆ ನಾವು ಈ ಪಂದ್ಯವನ್ನು ಮತ್ತೂಂದು ಪಂದ್ಯವಾಗಿ ಆಡುತ್ತಿದ್ದೇವೆ. ಪಂದ್ಯ ಸೋಲಲಿ ಗೆಲ್ಲಲಿ; ಒಟ್ಟಿನಲ್ಲಿ ನಾವು ಇನ್ನೊಂದು ಪಂದ್ಯ ಆಡಲು ಬಯಸಿದ್ದೇವೆ.  ಹಿಂದಿನ ಪಂದ್ಯಗಳಲ್ಲಿನ ಪಿಚ್‌ಗಳಂತೆ ವಿಶಾಖಪಟ್ಟಣದ ಪಿಚ್‌ ಕೂಡ ಬ್ಯಾಟ್ಸ್‌ಮನ್‌ಗಳ ಪರವಾಗುವ ಮೂಲಕ ಪಂದ್ಯ ತಿರುವು ಪಡೆಯಲಿದೆ ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next