Advertisement

ಭರವಸೆಯ ಯಕ್ಷಮೊಗ್ಗು

01:43 PM Sep 01, 2017 | Team Udayavani |

ಯಕ್ಷಗಾನ ರಂಗದಲ್ಲಿ ಪೆರುವಡಿ ಮನೆತನ ಸಾಕಷ್ಟು ಹೆಸರು ಮಾಡಿದೆ. ಇದೀಗ ಪೆರುವಡಿ ಮನೆಯಲ್ಲಿ ಮತ್ತೂಂದು ಪ್ರತಿಭೆ ಚಿಗುರಿ ನಿಂತಿದೆ. ಪೃಥ್ವೀ ಚಂದ್ರ ಶರ್ಮ ತನ್ನ ಸಾಧನೆಯಿಂದ ಮಿಂಚುತ್ತಿದ್ದಾರೆ. ತಂದೆ ನ್ಯಾಯವಾದಿ ರಾಮಕೃಷ್ಣ ಭಟ್‌ ಕಲಾವಿದರೂ ಹೌದು; ತಾಯಿ ಅಪರ್ಣಾ ಕುಮಾರಿ. ಪೃಥ್ವೀ ಕಲಾ ಗಂಧವನ್ನು ಹೀರುತ್ತ ಬೆಳೆದ ವನು. ಬಾಯಾರು ರಮೇಶ್‌ ಶೆಟ್ಟಿಯವರಲ್ಲಿ ನಾಟ್ಯಾಭ್ಯಾಸ ಮಾಡಿ ಅವರ ಮೆಚ್ಚುಗೆಗೆ ಪಾತ್ರನಾದ ಪೃಥ್ವೀ ಹಿಮ್ಮೇಳವನ್ನು ಬಗ್ಗೆ 

Advertisement

ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಜತೆಗೆ ಚೆ ಂಡೆ, ಮೃದಗವಾದನವನ್ನೂ ಕಲಿಯುತ್ತಿದ್ದಾನೆ. ಹಾಗೆಯೇ ರಂಗ ಮಾಹಿತಿಯನ್ನು ಸಕಾಲಕ್ಕೆ ನೀಡಿತಿದ್ದುತ್ತಿರುವವರು ಭಾಗವತ ಜಿ. ಕೆ. ನಾವಡರು. ಮೇಲಾಗಿ ದೊಡ್ಡಜ್ಜ ಪೆರುವಡಿ ನಾರಾಯಣ ಭಟ್ಟರ ಮಾರ್ಗದರ್ಶನ ಪೃಥ್ವಿಯ ಅರ್ಥಗಾರಿಕೆ ಹಾಗೂ ಭಾವ ಶುದ್ಧಿಯನ್ನು ಎತ್ತರಿಸಿದೆ.

ಪೃಥ್ವಿ ಮಕ್ಕಳ ಕೂಟದಲ್ಲಿದ್ದರೂ ದೊಡ್ಡವರ ಆಟಗಳಿಗೆ ಪಾಲ್ಗೊಳ್ಳುವಷ್ಟು ಕ್ಷಮತೆಯಿದೆ. ಆತನ ನಾಟ್ಯದಲ್ಲಿ ಪಾದರಸದ ಚುರುಕುತನವಿದೆ. ಹಿಮ್ಮೇಳದವರ ಪ್ರೋತ್ಸಾಹಕ್ಕೆ ಸರಿಯಾಗಿ ಸ್ಪಂದಿಸುವ ಹೊಂದಾಣಿಕೆ ಅವನಲ್ಲಿ ಕಾಣಬಹುದು. ಉತ್ತಮ ಸಾಹಿತ್ಯ ಯುಕ್ತ ಮಾತುಗಾರಿಕೆ, ಪ್ರತ್ಯುತ್ಪನ್ನತೆ… ಹೀಗೆ ಪೃಥ್ವೀ ತಾನು ಪೆರುವಡಿಯ ಕುಡಿ ಎನ್ನುವುದನ್ನು ಸಾಬೀತು ಪಡಿಸುತ್ತಾನೆ. ಈತನ ಯಶಸ್ಸಿನ ಹಿನ್ನೆಲೆಯಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿರುವವರು ಭಾಗವತ ಕುರಿಯಗಣ ಪತಿ ಶಾಸ್ತ್ರಿಗಳು. ಪದವಿಪೂರ್ವ ಕೊನೆಯ ವರ್ಷದಲ್ಲಿ ಕಲಿಯುತ್ತಿರುವ ಪೃಥ್ವಿಗೆ ಯಕ್ಷಗಾನ ರಂಗದಲ್ಲಿ ಉತ್ತಮ ಭವಿಷ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next